Skip to main content

ಕೇರಳದಲ್ಲಿ 49 ಜನರಿಗೆ ಕೂಡ ಕೋವಿಡ್,12 ಜನರಿಗೆ ರೋಗಮುಕ್ತಿ

ಚಿಕಿತ್ಸೆಯಲ್ಲಿರುವವರು 359 ಜನರು 

4 ಹೊಸ ಹಾಟ್ ಸ್ಪಾಟ್‌ಗಳು

ಕೇರಳದಲ್ಲಿ ಸೋಮವಾರ  49 ಜನರಿಗೆ ಕೋವಿಡ್ -19 ದೃಡಪಡಿಸಿರುವುದಾಗಿ ಆರೋಗ್ಯ ಸಚಿವೆ ಕೆ.ಕೆ. ಶೈಲಾಜಾ ಟೀಚರ್ ತಿಳಿಸಿದರು. ಕಾಸರ್‌ಗೋಡ್ ಜಿಲ್ಲೆಯ 14 ಜನರಿಗೆ, ಕಣ್ಣೂರು ಜಿಲ್ಲೆಯಿಂದ 10 ಜನರಿಗೆ, ತಿರುವನಂತಪುರಂ ಮತ್ತು ಪಾಲಕ್ಕಾಡ್ ಜಿಲ್ಲೆಗಳಿಂದ ತಲಾ 5 ಮಂದಿಗೆ, ಕೋಳಿಕೋಡ್‌ ಜಿಲ್ಲೆಯಿಂದ 4 ಮಂದಿಗೆ ಮತ್ತು ಪಥನಮತ್ತಿಟ್ಟ, ಅಲಪ್ಪುಳ ಜಿಲ್ಲೆಗಳಿಂದ ತಲಾ ಮೂವರಿಗೆ, ಕೊಲ್ಲಂ, ಕೊಟ್ಟಾಯಂ ಜಿಲ್ಲೆಗಳಿಂದ ತಲಾ ಇಬ್ಬರಿಗೆ ಮತ್ತು ಇಡುಕ್ಕಿ ಜಿಲ್ಲೆಯಿಂದ ಒಬ್ಬರಿಗೆ ರೋಗ ದೃಡಪಡಿಸಿರುವುದು.18 ಮಂದಿ ವಿದೇಶದಿಂದ (ಯು.ಎ.ಇ -12, ಒಮಾನ್ -1, ಸೌದಿ ಅರೇಬಿಯಾ -1, ಅಬುಧಾಬಿ -1, ಮಾಲಿ ದ್ವೀಪ -1, ಕುವೈತ್ -1, ಮಸ್ಕತ್ -1) ಮತ್ತು 25 ಮಂದಿ ರಾಜ್ಯದ ಹೊರಗಿನಿಂದ (ಮಹಾರಾಷ್ಟ್ರ -17, ತಮಿಳುನಾಡು -4, ದೆಹಲಿ -2 ಮತ್ತು ಕರ್ನಾಟಕ -2)ಬಂದವರು.6 ಜನರು ಸಂಪರ್ಕದ ಮೂಲಕ ಸೋಂಕಿಗೆ ಒಳಗಾಗಿದ್ದಾರೆ. ಅವರಲ್ಲಿ  ಕಣ್ಣೂರು ಜಿಲ್ಲೆಯ ಇಬ್ಬರು ರಿಮಾಂಡ್ ಕೈದಿಗಳು. ತಿರುವನಂತಪುರಂನ ವ್ಯಕ್ತಿಯೊಬ್ಬರು ಆರೋಗ್ಯ ಕಾರ್ಯಕರ್ತ.
ಅದೇಸಮಯ, ರೋಗ ದೃಡಪಡಿಸಿ ಚಿಕಿತ್ಸೆಯಲ್ಲಿದ್ದ
12 ಜನರ ತಪಾಸಣಾ ಫಲಿತಾಂಶ ನಕಾರಾತ್ಮಕವಾಗಿವೆ.ಕಾಸರಗೋಡಿನ ಜಿಲ್ಲೆಯ 6 ಜನರ,  ಕೊಲ್ಲಂ ಜಿಲ್ಲೆಯ ಇಬ್ಬರ, ಎರ್ನಾಕುಲಂ, ಇಡುಕ್ಕಿ, ಮಲಪ್ಪುರಂ ಮತ್ತು ವಯನಾಡ್ ಜಿಲ್ಲೆಗಳಿಂದ  ತಲಾ ಒಬ್ಬರ ತಪಾಸಣಾ ಫಲಿತಾಂಶ ನಕಾರಾತ್ಮಕವಾಗಿರುವುದು. ಈವರೆಗೆ 359 ಜನರಿಗೆ ಈ ರೋಗ ಪತ್ತೆಯಾಗಿದ್ದು,ಇನ್ನು  ಚಿಕಿತ್ಸೆ ಪಡೆಯುತ್ತಿರುವುದು. ಈವರೆಗೆ 532 ಜನರು ಗುಣಮುಖರಾಗಿದ್ದಾರೆ.
ವಿಮಾನ ನಿಲ್ದಾಣದ ಮೂಲಕ 8390 ಜನರು, ಸೀಪೋರ್ಟ್ ಮೂಲಕ 1621ಜನರು , ಚೆಕ್ ಪೋಸ್ಟ್ ಮೂಲಕ 82,678 ಜನರು ಮತ್ತು ರೈಲ್ವೆ ಮೂಲಕ 4558 ಜನರು ಸೇರಿದಂತೆ ಒಟ್ಟು 97,247 ಜನರು ರಾಜ್ಯಕ್ಕೆ ಆಗಮಿಸಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 99,278 ಜನರು ನಿರೀಕ್ಷಣೆಯಲ್ಲಿದ್ದಾರೆ. ಈ ಪೈಕಿ 98,486 ಜನರು ಮನೆ / ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ನಲ್ಲಿ ಮತ್ತು 792 ಜನರು ಆಸ್ಪತ್ರೆಗಳಲ್ಲಿ ನಿರೀಕ್ಷಣದಲ್ಲಿರುವರು. 152 ಜನರನ್ನು ಸೋಮವಾರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ 1861 ಮಾದರಿಗಳನ್ನು ಪರೀಕ್ಷಿಸಲಾಯಿತು. ಇಲ್ಲಿಯವರೆಗೆ, 54,899 ವ್ಯಕ್ತಿಗಳ (ಓಗ್ಮೆಂಟೆಡ್ ಮಾದರಿ ಸೇರಿದಂತೆ) ಮಾದರಿಯನ್ನು ಪರಿಶೀಲನೆಗಾಗಿ ಕಳುಹಿಸಲಾಗಿದೆ. ಇದರಲ್ಲಿ ಲಭ್ಯವಾದ 53,704 ಮಾದರಿಗಳ,ತಪಾಸಣಾ ಫಲಿತಾಂಶ ನಕಾರಾತ್ಮಕವಾಗಿವೆ. ಇದಲ್ಲದೆ, ಸೆಂಟಿನೆಲ್ ಸರ್ವೈಲೆನ್ಸ್ ನ ಭಾಗವಾಗಿ, ಆರೋಗ್ಯ ಕಾರ್ಯಕರ್ತರು, ಅತಿಥಿ ಕೆಲಸಗಾರರು, ಸಾಮಾಜಿಕ ಸಂಪರ್ಕ ಹೆಚ್ಚಾಗಿರುವ ವ್ಯಕ್ತಿಗಳ ಆದ್ಯತೆಯ ಗುಂಪುಗಳಿಂದ 8110 ಮಾದರಿಗಳನ್ನು ಸಂಗ್ರಹಿಸಿರುವುದರಲ್ಲಿ 7994 ಮಾದರಿಗಳು ನಕಾರಾತ್ಮಕವಾಗಿವೆ. ನಾಲ್ಕು ಪ್ರದೇಶಗಳನ್ನು ಕೂಡ ಹಾಟ್ ಸ್ಪಾಟ್‌ಗಳಾಗಿ ಮಾಡಲಾಗಿದೆ. ಕಣ್ಣೂರು ಜಿಲ್ಲೆಯ ಪಿಣರಾಯಿ, ಪಾಲಕ್ಕಾಡ್‌ ಜಿಲ್ಲೆಯ  ಪುದುಚೇರಿ, ಮಲಂಪುಳ ಮತ್ತು ಚಾಲಿಶ್ಶೇರಿ ಮುಂತಾದುವು ಹೊಸ ಹಾಟ್ ಸ್ಪಾಟ್‌ಗಳು. ಪ್ರಸ್ತುತ 59 ಹಾಟ್ ಸ್ಪಾಟ್‌ಗಳಿವೆ

date