Skip to main content

ಕೇರಳದಲ್ಲಿ 67 ಜನರಿಗೆ ಕೂಡ ಕೋವಿಡ್ -19 ದೃಡಪಡಿಸಲಾಗಿದೆ,10 ಮಂದಿ ಗುಣಮುಖರಾದರು

 

ಚಿಕಿತ್ಸೆಯಲ್ಲಿರುವವರು 415 ಜನರು 

ಒಂಬತ್ತು ಹೊಸ ಹಾಟ್ ಸ್ಪಾಟ್‌ಗಳು

 

 

ಕೇರಳದಲ್ಲಿ 67 ಜನರಿಗೆ ಮಂಗಳವಾರ ಕೋವಿಡ್ -19 ದೃಡಪಡಿಸಿರುವುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದರು. ಪಾಲಕ್ಕಾಡ್‌ ಜಿಲ್ಲೆಯಿಂದ 29 ಮಂದಿಗೆ, ಕಣ್ಣೂರು ಜಿಲ್ಲೆಯಿಂದ 8 ಮಂದಿಗೆ, ಕೊಟ್ಟಾಯಂ ಜಿಲ್ಲೆಯಿಂದ 6 ಮಂದಿಗೆ,ಎರ್ನಾಕುಲಂ ಮತ್ತು ಮಲಪ್ಪುರಂ ಜಿಲ್ಲೆಗಳಿಂದ ತಲಾ 5 ಮಂದಿಗೆ, ಕೊಲ್ಲಂ,ತ್ರಿಶೂರ್ ಜಿಲ್ಲೆಗಳಿಂದ ತಲಾ 4 ಮಂದಿಗೆ ಮತ್ತು ಆಲಪ್ಪುಳ ಕಾಸರಗೋಡು ಜಿಲ್ಲೆಗಳಿಂದ ತಲಾ ಮೂವರಿಗೆ ರೋಗ ದೃಡಪಡಿಸಿರುವುದು. ಈ ಪೈಕಿ 27 ಮಂದಿ ವಿದೇಶಗಳಿಂದ  (ಯು.ಎ.ಇ -16, ಮಾಲಿ ದ್ವೀಪ -9, ಕುವೈತ್ -1, ಕತಾರ್ -1) ಮತ್ತು 33 ಮಂದಿ ಇತರ ರಾಜ್ಯಗಳಿಂದ (ಮಹಾರಾಷ್ಟ್ರ -15, ತಮಿಳುನಾಡು -9, ಗುಜರಾತ್ -5, ಕರ್ನಾಟಕ -2, ದೆಹಲಿ -1 ಪಾಂಡಿಚೆರಿ -1)ಬಂದವರು. 7 ಜನರು ಸಂಪರ್ಕದ ಮೂಲಕ  ಸೋಂಕಿಗೆ ಒಳಗಾಗಿದ್ದಾರೆ. ಕಣ್ಣೂರು ಜಿಲ್ಲೆಯ ನಾಲ್ವರಿಗೆ, ಪಾಲಕ್ಕಾಡ್ ಜಿಲ್ಲೆಯ ಇಬ್ಬರಿಗೆ ಮತ್ತು ಕೊಟ್ಟಾಯಂ ಜಿಲ್ಲೆಯ ಒಬ್ಬರಿಗೆ ಸಂಪರ್ಕದ ಮೂಲಕ ಸೋಂಕು ತಗುಲಿರುವುದು.

 

ಅದೇಸಮಯ, ರೋಗ ದೃಡಪಡಿಸಿ ಚಿಕಿತ್ಸೆಯಲ್ಲಿದ್ದ 10 ಜನರ ತಪಾಸಣಾ ಫಲಿತಾಂಶ ನಕಾರಾತ್ಮಕವಾಗಿವೆ. ಎರ್ನಾಕುಲಂ (ಒಬ್ಬರು ಪಾಲಕ್ಕಾಡ್ ಸ್ವದೇಶಿ), ಮಲಪ್ಪುರಂ ಮತ್ತು ಕಾಸರಗೋಡು ಜಿಲ್ಲೆಗಳಿಂದ ತಲಾ ಇಬ್ಬರು, ಮತ್ತು ಆಲಪ್ಪುಳ, ಕೊಟ್ಟಾಯಂ, ಪಾಲಕ್ಕಾಡ್ ಮತ್ತು ಕೋಳಿಕೋಡ್ (ಮಲಪ್ಪುರಂ ಸ್ವದೇಶಿ) ಜಿಲ್ಲೆಗಳಿಂದ ತಲಾ ಒಬ್ಬರ ತಪಾಸಣಾ ಫಲಿತಾಂಶ ನಕಾರಾತ್ಮಕವಾಗಿರುವುದು. ಕೋವಿಡ್ -19 ರೋಗ ದೃಡಪಡಿಸಿ ಕೋಳಿಕೋಡ್‌ ಜಿಲ್ಲೆಯಲ್ಲಿ ಚಿಕಿತ್ಸೆಯಲ್ಲಿದ್ದ ಕಣ್ಣೂರು ಮೂಲದವರು ನಿನ್ನೆ ನಿಧನರಾದರು. ಈವರೆಗೆ 415 ಜನರಿಗೆ ಈ ರೋಗ ಪತ್ತೆಯಾಗಿದ್ದು, ಇನ್ನು ಚಿಕಿತ್ಸೆ ಪಡೆಯುತ್ತಿದ್ದಾರೆ.ಈವರೆಗೆ ಒಟ್ಟು 542 ಜನರು ಕೋವಿಡ್‌ನಿಂದ ಗುಣಮುಖರಾಗಿದ್ದಾರೆ.

 

ವಿಮಾನ ನಿಲ್ದಾಣದ ಮೂಲಕ 8721 ಜನರು, ಸೀಪೋರ್ಟ್ ಮೂಲಕ 1621ಜನರು, ಚೆಕ್ ಪೋಸ್ಟ್ ಮೂಲಕ 86,574 ಜನರು ಮತ್ತು ರೈಲು ಮೂಲಕ 5363 ಜನರು ಸೇರಿದಂತೆ ಒಟ್ಟು 1,02,279 ಜನರು ರಾಜ್ಯಕ್ಕೆ ಆಗಮಿಸಿದ್ದಾರೆ.

 

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 1,04,336 ಜನರು ನಿರೀಕ್ಷಣೆಯಲ್ಲಿದ್ದಾರೆ. ಈ ಪೈಕಿ 1,03,528 ಜನರು ಮನೆ / ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ನಲ್ಲಿ ಮತ್ತು 808 ಜನರು ಆಸ್ಪತ್ರೆಗಳಲ್ಲಿ ನಿರೀಕ್ಷಣೆಯಲ್ಲಿರುವರು. ಒಟ್ಟು 186 ಜನರನ್ನು ಮಂಗಳವಾರ ಆಸ್ಪತ್ರೆಗೆ ದಾಖಲಿಸಲಾಗಿದೆ.

 

ಕಳೆದ 24 ಗಂಟೆಗಳಲ್ಲಿ 1393 ಮಾದರಿಗಳನ್ನು ಪರಿಶೀಲಿಸಲಾಗಿದೆ. ಇಲ್ಲಿಯವರೆಗೆ, 56,704 ವ್ಯಕ್ತಿಗಳ (ಓಗ್ಮೆಂಟೆಡ್ ಮಾದರಿ ಸೇರಿದಂತೆ) ಮಾದರಿಯನ್ನು ಪರಿಶೀಲನೆಗಾಗಿ ಕಳುಹಿಸಲಾಗಿದೆ.ಇದರಲ್ಲಿ ಲಭ್ಯವಾದ 54,836 ಮಾದರಿಗಳ, ತಪಾಸಣಾ ಫಲಿತಾಂಶ ನಕಾರಾತ್ಮಕವಾಗಿವೆ. ಇದಲ್ಲದೆ, ಸೆಂಟಿನೆಲ್ ಸರ್ವೈಲೆನ್ಸ್ ನ ಭಾಗವಾಗಿ ಆರೋಗ್ಯ ಕಾರ್ಯಕರ್ತರು, ಅತಿಥಿ ಕೆಲಸಗಾರರು, ಸಾಮಾಜಿಕ ಸಂಪರ್ಕ ಹೆಚ್ಚಾಗಿರುವ ವ್ಯಕ್ತಿಗಳ ಆದ್ಯತೆಯ ಗುಂಪುಗಳಿಂದ 8599 ಮಾದರಿಗಳನ್ನು ಸಂಗ್ರಹಿಸಿರುವುದರಲ್ಲಿ 8174 ಮಾದರಿಗಳು ನಕಾರಾತ್ಮಕವಾಗಿವೆ.

 

ಒಂಬತ್ತು ಪ್ರದೇಶಗಳನ್ನು ಕೂಡ ಹಾಟ್ ಸ್ಪಾಟ್‌ಗೆ ಸೇರಿಸಲಾಗಿದೆ. ಕಣ್ಣೂರು ಜಿಲ್ಲೆಯ ಚೆರುಪುಳ, ಚೆರುಕುನ್ನು, ಕಾಸರ್‌ಗೋಡ್ ಜಿಲ್ಲೆಯ ವೊರ್ಕಡಿ,ಮಿಂಚ, ಮಂಗಳ್ ಪಾಡಿ, ಕೊಟ್ಟಾಯಂ ಜಿಲ್ಲೆಯ ಪಯಪಾದ್, ಪಾಲಕ್ಕಾಡ್ ಜಿಲ್ಲೆಯ ಚೆರಪುಲಸೇರಿ, ಮನ್ನಾರ್ಕಡ್ ಪುರಸಭೆ ಮತ್ತು ಇಡುಕ್ಕಿ ಜಿಲ್ಲೆಯ ಉಡುಂಬಂಚೋಳ ಮುಂತಾದುವು ಹೊಸ ಹಾಟ್ ಸ್ಪಾಟ್‌ಗಳು. ಪ್ರಸ್ತುತ ಒಟ್ಟು 68 ಹಾಟ್ ಸ್ಪಾಟ್‌ಗಳಿವೆ.

date