Skip to main content

ಕೇರಳದಲ್ಲಿ ಇಂದು 58 ಜನರಿಗೆ ಕೋವಿಡ್ -19 ದೃಡಪಡಿಸಲಾಗಿದೆ

ಚಿಕಿತ್ಸೆಯಲ್ಲಿರುವವರು 624 ಮಂದಿ; ಇಂದು 10 ಜನರು ಗುಣಮುಖರಾದರು; ಈವರೆಗೆ ಗುಣಮುಖರಾದವರು 575 

ಇಂದು 5 ಹೊಸ ಹಾಟ್ ಸ್ಪಾಟ್‌ಗಳು

ತಿರುವನಂತಪುರಂ: ಇಂದು ಕೇರಳದಲ್ಲಿ 58 ಜನರಿಗೆ ಕೋವಿಡ್ -19 ದೃಡಪಡಿಸಿರುವುದಾಗಿ ಆರೋಗ್ಯ ಸಚಿವೆ ಕೆ.ಕೆ. ಶೈಲಾಜಾ ಟೀಚರ್ ತಿಳಿಸಿದರು. ತ್ರಿಶೂರ್‌ ಜಿಲ್ಲೆಯಿಂದ ಹತ್ತು ಜನರಿಗೆ, ಪಾಲಕ್ಕಾಡ್‌ ಜಿಲ್ಲೆಯಿಂದ 9 ಜನರಿಗೆ, ಕಣ್ಣೂರು ಜಿಲ್ಲೆಯಿಂದ ಎಂಟು ಜನರಿಗೆ, ಕೊಲ್ಲಂ, ಇಡುಕ್ಕಿ, ಎರ್ನಾಕುಲಂ ಮತ್ತು ಕೋಳಿಕೋಡ್ ಜಿಲ್ಲೆಗಳಿಂದ ತಲಾ ನಾಲ್ವರಿಗೆ, ಕಾಸರ್‌ಗೋಡ್ ಜಿಲ್ಲೆಯಿಂದ ಮೂವರಿಗೆ, ತಿರುವನಂತಪುರಂ ಮತ್ತು ಆಲಪ್ಪುಳ ಜಿಲ್ಲೆಗಳಿಂದ ಇಬ್ಬರಿಗೆ ಮತ್ತು ಕೋಟಯಂ ಜಿಲ್ಲೆಯಿಂದ ಒಬ್ಬರಿಗೆ ರೋಗ ದೃಡಪಡಿಸಿರುವುದು. ಇದಲ್ಲದೆ, 7 ಏರ್ ಇಂಡಿಯಾ ಉದ್ಯೋಗಿಗಳಿಗೆ ಸಹ ಈ ರೋಗ ಪತ್ತೆಯಾಗಿದೆ.

ಆಲಪ್ಪುಳ ಜಿಲ್ಲೆಯಲ್ಲಿ ಪಿತ್ತಜನಕಾಂಗದ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿರುವಾಗ ನಿನ್ನೆ ಮೃತಪಟ್ಟ ವ್ಯಕ್ತಿಯ ತಪಾಸಣಾ ಫಲಿತಾಂಶಗಳು ಇದರಲ್ಲಿ ಸೇರಿವೆ.

ಈ ಪೈಕಿ 17 ಮಂದಿ ವಿದೇಶದಿಂದ (ಕುವೈತ್ -6, ಯು.ಎ.ಇ -6, ಒಮಾನ್ -2, ಸೌದಿ ಅರೇಬಿಯಾ -1, ಕತಾರ್ -1, ಇಟಲಿ -1) ಮತ್ತು 31 ಮಂದಿ ಇತರ ರಾಜ್ಯಗಳಿಂದ (ಮಹಾರಾಷ್ಟ್ರ -19, ತಮಿಳುನಾಡು -9, ತೆಲಂಗಾಣ - 1, ದೆಹಲಿ -1 ಮತ್ತು ಕರ್ನಾಟಕ -1) ಬಂದವರು. ಒಬ್ಬ ಆರೋಗ್ಯ ಕಾರ್ಯಕರ್ತೆಗೂ (ಪಾಲಕ್ಕಾಡ್) ಮತ್ತು ಇಬ್ಬರಿಗೆ ಸಂಪರ್ಕದ ಮೂಲಕವೂ (ಕೊಲ್ಲಂ ಮತ್ತು ಪಾಲಕ್ಕಾಡ್) ಸೋಂಕಿಗೆ ತಗುಲಿರುವುದು.

ರೋಗ ಪತ್ತೆಯಾಗಿ ಚಿಕಿತ್ಸೆಯಲ್ಲಿದ್ದ 10 ಜನರ ತಪಾಸಣಾ ಫಲಿತಾಂಶ ಋಣಾತ್ಮಕವಾಗಿವೆ. ಮಲಪ್ಪುರಂ ಜಿಲ್ಲೆಯಿಂದ ನಾಲ್ವರ( ಒಬ್ಬರು ಪಾಲಕ್ಕಾಡ್‌ ನಿವಾಸಿ) ಮತ್ತು ತ್ರಿಶೂರ್ ಜಿಲ್ಲೆಯಿಂದ ಮೂವರ, ತಿರುವನಂತಪುರಂ, ಕೊಟ್ಟಾಯಂ ಮತ್ತು ಕಣ್ಣೂರು ಜಿಲ್ಲೆಗಳಿಂದ ತಲಾ ಒಬ್ಬೊಬ್ಬರ ತಪಾಸಣಾ ಫಲಿತಾಂಶ  ಋಣಾತ್ಮಕವಾಗಿರುವುದು. ಈವರೆಗೆ 624 ಜನರಿಗೆ ಈ ರೋಗ ಪತ್ತೆಯಾಗಿದ್ದು, ಇನ್ನು ಚಿಕಿತ್ಸೆ ಪಡೆಯುತ್ತಿದ್ದಾರೆ.  ಈವರೆಗೆ 575 ಜನರು ಕೋವಿಡ್‌ನಿಂದ ಗುಣಮುಖರಾಗಿದ್ದಾರೆ.

ವಿಮಾನ ನಿಲ್ದಾಣದ ಮೂಲಕ 17,720 ಜನರು, ಸೀಪೋರ್ಟ್ ಮೂಲಕ 1621 ಜನರು, ಚೆಕ್ ಪೋಸ್ಟ್ ಮೂಲಕ 97,952 ಜನರು ಮತ್ತು ರೈಲು ಮೂಲಕ 9796 ಜನರು ಸೇರಿದಂತೆ ಒಟ್ಟು 1,27,089 ಜನರು ರಾಜ್ಯಕ್ಕೆ ಆಗಮಿಸಿದ್ದಾರೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 1,30,157 ಜನರು ನಿರೀಕ್ಷಣೆಯಲ್ಲಿದ್ದಾರೆ. ಈ ಪೈಕಿ 1,28,953 ಜನರು ಮನೆ / ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ನಲ್ಲಿ ಮತ್ತು 1204 ಜನರು ಆಸ್ಪತ್ರೆಗಳಲ್ಲಿ ನಿರೀಕ್ಷಣದಲ್ಲಿರುವರು. ಒಟ್ಟು 243 ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಳೆದ 24 ಗಂಟೆಗಳಲ್ಲಿ 3206 ಮಾದರಿಗಳನ್ನು ಪರಿಶೀಲನೆಗಾಗಿ ಕಳುಹಿಸಲಾಗಿದೆ. ಇಲ್ಲಿಯವರೆಗೆ, 65,002 ವ್ಯಕ್ತಿಗಳ (ಓಗ್ಮೆಂಟೆಡ್ ಮಾದರಿ ಸೇರಿದಂತೆ) ಮಾದರಿಯನ್ನು ಪರಿಶೀಲನೆಗಾಗಿ ಕಳುಹಿಸಲಾಗಿದೆ.ಇದರಲ್ಲಿ ಲಭ್ಯವಾದ 62,543 ಮಾದರಿಗಳ, ತಪಾಸಣಾ ಫಲಿತಾಂಶ ಋಣಾತ್ಮಕವಾಗಿವೆ. ಇದಲ್ಲದೆ, ಸೆಂಟಿನೆಲ್ ಸರ್ವೈಲೆನ್ಸ್ ನ ಭಾಗವಾಗಿ, ಆರೋಗ್ಯ ಕಾರ್ಯಕರ್ತರು, ಅತಿಥಿ ಕಾರ್ಯಕರ್ತರು, ಸಾಮಾಜಿಕ ಸಂಪರ್ಕ ಹೆಚ್ಚಾಗಿರುವ ವ್ಯಕ್ತಿಗಳ ಆದ್ಯತೆಯ ಗುಂಪುಗಳಿಂದ ಒಟ್ಟು 12,255 ಮಾದರಿಗಳನ್ನು ಸಂಗ್ರಹಿಸಿರುವುದರಲ್ಲಿ ಮತ್ತು 11,232 ಮಾದರಿಗಳು ನಕಾರಾತ್ಮಕವಾಗಿವೆ.

ಇಂದು, 5 ಪ್ರದೇಶಗಳನ್ನು ಕೂಡ ಹಾಟ್ ಸ್ಪಾಟ್‌ಗಳಾಗಿ ಪರಿವರ್ತಿಸಲಾಗಿದೆ. ತಿರುವನಂತಪುರಂ ಜಿಲ್ಲೆಯ ಮಾಣಿಕಲ್, ಪಾಲಕ್ಕಾಡ್ ಜಿಲ್ಲೆಯ ಪಾಲಕ್ಕಾಡ್ ಪುರಸಭೆ, ತಚ್ಚಂಬಾರ, ಪಟ್ಟಾಂಬಿ, ಕೊಟ್ಟಾಯಂ ಜಿಲ್ಲೆಯ ಮಾಡಪ್ಪಲ್ಲಿ ಮುಂತಾದುವು ಹೊಸ ಹಾಟ್ ಸ್ಪಾಟ್‌ಗಳು. ಪ್ರಸ್ತುತ ಒಟ್ಟು 106 ಹಾಟ್ ಸ್ಪಾಟ್‌ಗಳಿವೆ.

date