ಕೇರಳಕ್ಕೆ ಮತ್ತೊಮ್ಮೆ ಸಮಧಾನ;ಬುಧವಾರ ಯಾರಿಗೂ ಕೋವಿಡ್ ದೃಡಪಡಿಸಿಲ್ಲ
KANNADA PRESS RELEASE
ಕೇರಳಕ್ಕೆ ಮತ್ತೊಮ್ಮೆ ಸಮಾಧಾನಕರ ದಿನ.ಬುಧವಾರ ಯಾರಿಗೂ ಕೋವಿಡ್ ದೃಡಪಡಿಸಿಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಏಳು ಮಂದಿ ಗುಣಮುಖರಾದರು. ಇಡುಕ್ಕಿ ನಿವಾಸಿ ಸೇರಿದಂತೆ ಆರು ಮಂದಿ ಕೊಟ್ಟಾಯಂನಿಂದ ಮತ್ತು ಒಬ್ಬರು ಪಥನಮತ್ತಿಟ್ಟದಿಂದ ರೋಗ ಮುಕ್ತಿ ಹೊಂದಿದವರು.ಈವರೆಗೆ 469 ಜನರನ್ನು ಈವರೆಗೆ ಗುಣಪಡಿಸಲಾಗಿದೆ.
ಪ್ರಸ್ತುತ 30 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. 14,670 ಜನರು ನಿರೀಕ್ಷಣದಲ್ಲಿದ್ದಾರೆ.14,402 ಜನರು ಮನೆಗಳಲ್ಲಿ ಮತ್ತು 268 ಜನರು ಆಸ್ಪತ್ರೆಗಳಲ್ಲಿ ಇರುವರು.ಬುಧವಾರ 1154 ಮಾದರಿಗಳನ್ನು ಪರಿಶೀಲಿಸಲಾಗಿದೆ. ಆದ್ಯತಾ ವಿಭಾಗದಲ್ಲಿ 2947 ಮಾದರಿಗಳನ್ನು ಪರೀಕ್ಷಿಸಿರುವುದರಲ್ಲಿ ಲಭಿಸಿದ 2147 ಫಲಿತಾಂಶಗಳು ನಕಾರಾತ್ಮಕವಾಗಿವೆ. ರಾಜ್ಯದಲ್ಲಿ ಹೊಸ ಹಾಟ್ ಸ್ಪಾಟ್‌ಗಳಿಲ್ಲ.
ರಾಜ್ಯದ ಆರು ಜಿಲ್ಲೆಗಳಲ್ಲಾಗಿ ಕೋವಿಡ್ ಭಾಧಿತರು ಈಗಿರುವರು. ಕಣ್ಣೂರಿನಲ್ಲಿ 18 ಮಂದಿ ಚಿಕಿತ್ಸೆಯಲ್ಲಿರುವರು. ಕೋಳಿಕೋಡ್, ಮಲಪ್ಪುರಂ, ತ್ರಿಶೂರ್, ಎರ್ನಾಕುಲಂ, ಕೊಟ್ಟಾಯಂ, ಪಥನಮತ್ತಿಟ್ಟ, ಆಲಪ್ಪುಳ ಮತ್ತು ತಿರುವನಂತಪುರಂ ಜಿಲ್ಲೆಗಳು ಈಗ ಕೋವಿಡ್ ಮುಕ್ತಿ ಹೊಂದಿರುವುದಾಗಿ ಎಂದು ಮುಖ್ಯಮಂತ್ರಿ ಹೇಳಿದರು.
ಹಿಂದಿರುಗಿ ಬರುವ ಪ್ರವಾಸಿಗಳಿಗೆ ಸೌಕರ್ಯ ಒದಗಿಸಲಾಯಿತು, ತಮ್ಮ ಪ್ರಯಾಣದ ಸಮಯದಲ್ಲಿ ಅತ್ಯಂತ ಜಾಗರೂಕತೆ ಬೇಕು - ಮುಖ್ಯಮಂತ್ರಿ
* ಉಳಿದ 10, 11 ಮತ್ತು 12 ಸಾರ್ವಜನಿಕ ಪರೀಕ್ಷೆಗಳನ್ನು 21 ರಿಂದ 29 ರ ಒಳಗೆ ಪೂರ್ತಿಗೊಳಿಸಲಾಗುವುದು
ಕೇರಳಕ್ಕೆ ಹಿಂದಿರುಗಿ ಬರುವ ಪ್ರವಾಸಿಗರಿಗೆ ಸಾಕಷ್ಟು ಸೌಲಭ್ಯಗಳನ್ನು ಒದಗಿಸಲಾಗಿದೆ ಮತ್ತು ಬರುವವರು ವಾಸಸ್ಥಳದಿಂದ ಪ್ರಯಾಣದುದ್ದಕ್ಕೂ ಅತ್ಯಂತ ಜಾಗರೂಕರಾಗಿರಬೇಕು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು.ಇದು ಸಂಭಂದಿಸಿದ ಕಾರ್ಯಗಳನ್ನು ಕೇಂದ್ರ ಗೃಹ ಸಚಿವಾಲಯದಿಂದ ರಾಜ್ಯ ಸರ್ಕಾರಕ್ಕೆ ಲಭಿಸಿದೆ. ಸಿವಿಲ್ ಏವಿಯೇಷನ್ ಮಂತ್ರಾಲಯ ಏರ್ಪಡಿಸುವ ವಿಮಾನಗಳಲ್ಲೂ,ಪ್ರತಿರೋಧ ಇಲಾಖೆ ಏರ್ಪಡಿಸುವ ಹಡಗಿನಲ್ಲಿ ಇವರು ಬರುವರು. ಗುರುವಾರ ಎರಡು ವಿಮಾನಗಳು ಬರುವ ನಿರೀಕ್ಷೆಯಿದೆ. ಪ್ರವಾಸಿಗರು ಹಿಂತಿರುಗುತ್ತಿರುವ ಕೇರಳದ ವಿವಿಧ ವಿಮಾನ ನಿಲ್ದಾಣಗಳ ಭದ್ರತೆಯನ್ನು ನೋಡಿಕೊಳ್ಳಲು ಡಿಐಜಿ ಮಟ್ಟದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.ದೆಹಲಿ, ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಹರಿಯಾಣ ಮುಂತಾದ ರಾಜ್ಯಗಳಲ್ಲಿ ಲಾಕ್ ಡೌನ್ ಕಾರಣ ಅಲ್ಲಿ ಬಾಕಿಯಾದ ವಿದ್ಯಾರ್ಥಿಗಳನ್ನು ವಿಶೇಷ ತಡೆರಹಿತ ರೈಲಿನಲ್ಲಿ ಕೇರಳಕ್ಕೆ ತಲುಪಿಸುವುದಕ್ಕೆ ಸಂಬಂಧಿಸಿದಂತೆ ಈ ನಾಲ್ಕು ರಾಜ್ಯದ ಮುಖ್ಯಮಂತ್ರಿಗಳಿಗೆ ಪತ್ರವನ್ನು ಕಳುಹಿಸಲಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದೊಂದಿಗೆ ಸಂವಹನ ನಡೆಸುತ್ತಿದ್ದೇನೆ ಎಂದು ಮುಖ್ಯಮಂತ್ರಿ ಹೇಳಿದರು.
ಇತರ ರಾಜ್ಯಗಳಿಂದ ಕೇರಳಕ್ಕೆ ಈವರೆಗೆ 6802 ಜನರು ತಲುಪಿದ್ದಾರೆ. ಮಲಪ್ಪುರಂ ಮತ್ತು ಪಾಲಕ್ಕಾಡ್ ಜಿಲ್ಲೆಗಳಲ್ಲಿ ಅತಿ ಹೆಚ್ಚು ಜನರು ಆಗಮಿಸಿರುವುದು. ವಾಳಯಾರ್ ಚೆಕ್ ಪೋಸ್ಟ್ ಮೂಲಕ ಮಾತ್ರ 4369 ಜನರು ಮತ್ತು ಮಂಜೇಶ್ವರಂ ಚೆಕ್ ಪೋಸ್ಟ್ ಮೂಲಕ 1637 ಜನರು ಬಂದರು.
10,11 ಮತ್ತು 12 ನೇ ತರಗತಿಗಳ ಉಳಿದ ಸಾರ್ವಜನಿಕ ಪರೀಕ್ಷೆಗಳನ್ನು ಮೇ 21 ಮತ್ತು 29 ರ ನಡುವೆ ಪೂರ್ಣಗೊಳಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ವ್ಯವಸ್ಥೆ ಮಾಡುತ್ತದೆ ಎಂದು ಕೇರಳ ಮುಖ್ಯಮಂತ್ರಿ ಹೇಳಿದರು. ಪೂರ್ಣಗೊಂಡ ಪರೀಕ್ಷೆಗಳ ಮೌಲ್ಯಮಾಪನ ಮೇ 13 ರಿಂದ ಪ್ರಾರಂಭವಾಗಲಿದೆ.
ಶಾಲೆಗಳನ್ನು ತೆರೆಯುವಲ್ಲಿ ವಿಳಂಬವಾಗುವ ಸಮಸ್ಯೆ ಉಂಟಾದರೆ, ಜೂನ್ 1 ರಿಂದ ಮಕ್ಕಳಿಗಾಗಿ ವಿಶೇಷ ಶಿಕ್ಷಣ ಕಾರ್ಯಕ್ರಮವನ್ನು ಶಿಕ್ಷಣ ಇಲಾಖೆಯ ಕೈಟ್ ವಿಕ್ಟರ್ಸ್ ಚಾನೆಲ್ ಮೂಲಕ ಪ್ರಸಾರ ಮಾಡಲಾಗುತ್ತದೆ.
ರಾಜ್ಯದಲ್ಲಿ ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಿಗೆ ಯಾವುದೇ ನಿರ್ಬಂಧಗಳಿಲ್ಲ.ರಾಜ್ಯದ ಕಳ್ಳಿನ ಅಂಗಡಿ ಮೇ 13 ರಿಂದ ತೆರೆಯಲು ಅವಕಾಶ ನೀಡಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.
ನಟುಕಾನಿ ಪಾಸ್ ಮೂಲಕ ಕೇರಳಕ್ಕೆ ಪ್ರವೇಶಿಸಲು ಅನುಮತಿ ನೀಡಬೇಕೆಂದು ಸ್ಥಳೀಯ ಬೇಡಿಕೆ ಇದೆ. ಕರ್ನಾಟಕ ಮತ್ತು ಊಟಿಯಿಂದ ಮಲಪ್ಪುರಂಗೆ ಹೋಗುವ ರಸ್ತೆ ಈಗ ಸುಮಾರು 150 ಕಿ.ಮೀ.ಸುತ್ತ ಬೇಕಾಗಿದೆ ಎಂದು ಹೇಳಲಾಗುತ್ತಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರದೊಂದಿಗೆ ಮಾತನಾಡಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.
- Log in to post comments