ಕೇರಳದಲ್ಲಿ ಐದು ಮಂದಿಗೆ ಕೂಡ ಕೋವಿಡ್ -19 ದೃಡಪಡಿಸಲಾಗಿದೆ; ಯಾರೂ ಗುಣಮುಖರಾಗಿಲ್ಲ
ಪ್ರಸ್ತುತ ಚಿಕಿತ್ಸೆಯಲ್ಲಿರುವವರು 32 ಮಂದಿ
ಕೇರಳದಲ್ಲಿ ಮಂಗಳವಾರ ಐದು ಮಂದಿಗೆ ಕೋವಿಡ್ -19 ದೃಡಪಡಿಸಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದರು. ಮಲಪ್ಪುರಂನಲ್ಲಿ ಮೂವರಿಗೆ ಮತ್ತು ಕೊಟ್ಟಾಯಂ, ಪಥನಮತ್ತಿಟ್ಟ ಜಿಲ್ಲೆಗಳಲ್ಲಿನ ತಲಾ ಒಬ್ಬೊಬ್ಬರಿಗೆ ರೋಗ ದೃಡಪಡಿಸಿರುವುದು. ನಾಲ್ವರು ವಿದೇಶದಿಂದ ಮತ್ತು ಒಬ್ಬರು ಚೆನ್ನೈನಿಂದ ಬಂದವರು.95 ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ಈವರೆಗೆ ರಾಜ್ಯದಲ್ಲಿ 524 ಜನರಿಗೆ ರೋಗ ದೃಡಪಡಿಸಿರುವುದು. ಪ್ರಸ್ತುತ 32 ಜನರು ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 23 ಮಂದಿಗೆ ಸೋಂಕು ತಗುಲಿರುವುದು ಕೇರಳದ ಹೊರಗಿನಿಂದ ಎಂದು ಮುಖ್ಯಮಂತ್ರಿ ವ್ಯಕ್ತಪಡಿಸಿದರು.
ಒಟ್ಟು 31616 ಜನರು ನಿರೀಕ್ಷಣದಲ್ಲಿರುವರು. ಈ ಪೈಕಿ 31143 ಜನರು ಮನೆಗಳಲ್ಲಿ ಮತ್ತು 473 ಜನರು ಆಸ್ಪತ್ರೆಗಳಲ್ಲಿ ನಿರೀಕ್ಷಣದಲ್ಲಿರುವರು. ಪ್ರಸ್ತುತ ಒಟ್ಟು 34 ಹಾಟ್ ಸ್ಪಾಟ್ಗಳಿವೆ.
ಇಲ್ಲಿಯವರೆಗೆ, 38547 ವ್ಯಕ್ತಿಗಳ (ಓಗ್ಮೆಂಟೆಡ್ ಮಾದರಿ ಸೇರಿದಂತೆ) ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಈ ಪೈಕಿ ಪರೀಕ್ಷಿಸಿದ 37727 ಮಾದರಿಗಳು ನಕಾರಾತ್ಮಕವಾಗಿವೆ.
ಇದಲ್ಲದೆ, ಸೆಂಟಿನೆಲ್ ಸರ್ವೈಲೆನ್ಸ್ ನ ಭಾಗವಾಗಿ, ಆರೋಗ್ಯ ಕಾರ್ಯಕರ್ತರು, ಅತಿಥಿ ಕೆಲಸಗಾರರು, ಸಾಮಾಜಿಕ ಸಂಪರ್ಕ ಹೆಚ್ಚಾಗಿರುವ ವ್ಯಕ್ತಿಗಳ ಆದ್ಯತೆಯ ಗುಂಪುಗಳಿಂದ 3914 ಮಾದರಿಗಳನ್ನು ಸಂಗ್ರಹಿಸಿರುವುದರಲ್ಲಿ 3894 ಮಾದರಿಗಳು ಋಣಾತ್ಮಕವಾಗಿವೆ.
ಕೋವಿಡ್ ಪ್ರತಿರೋಧ ಹೊಸ ಹಂತಕ್ಕೆ,ಸಮುದಾಯ ಹರಡುವಿಕೆಯ ಬೆದರಿಕೆಯನ್ನು ತಪ್ಪಿಸುವುದು ಉದ್ದೇಶ - ಮುಖ್ಯಮಂತ್ರಿ
ಕೋವಿಡ್ ಪ್ರತಿರೋಧದ ಹೊಸ ಹಂತವನ್ನು ಕೇರಳ ಪ್ರವೇಶಿಸುತ್ತಿದೆ, ಸಮುದಾಯ ಹರಡುವಿಕೆಯ ಬೆದರಿಕೆಯನ್ನು ತಪ್ಪಿಸುವುದು ಉದ್ದೇಶ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು.
ನಿಯಂತ್ರಣ ತಪ್ಪಿದರೆ ಕೈಬಿಟ್ಟು ಹೋಗಬಹುದು ಮತ್ತು ಸಂಪರ್ಕದ ಮೂಲಕ ರೋಗ ಹರಡಿದರೆ ಅನಿರೀಕ್ಷಿತ ವಿಪತ್ತುಗಳನ್ನು ನಾವು ಎದುರಿಸಬೇಕಾಗಬಹುದು ಎಂದು ಮುಖ್ಯಮಂತ್ರಿ ಹೇಳಿದರು. ಅದಕ್ಕಾಗಿಯೇ ಜಾಗ್ರತೆ ಬೇಕೆಂದು ಪದೇ ಪದೇ ಹೇಳುವುದು.ಸೋಂಕಿತ ಪ್ರದೇಶಗಳಿಂದ ಬರುವವರನ್ನುಮತ್ತು ಅವರ ಕುಟುಂಬಗಳನ್ನು ರಕ್ಷಿಸುವುದು ಮತ್ತು ಸಮುದಾಯ ಏಕಾಏಕಿ ಬೆದರಿಕೆಯನ್ನು ತಪ್ಪಿಸುವುದು ನಮ್ಮ ಉದ್ದೇಶ.
ರಾಜ್ಯಕ್ಕೆ ಆಗಮಿಸುವವರ ಬಗ್ಗೆ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಬೇಕು ಎಂದು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು. ಇದರ ಭಾಗವಾಗಿ, ಕೋವಿಡ್ ಜಾಗ್ರತ 19 ವೆಬ್ ಪೋರ್ಟಲ್ನಲ್ಲಿ ನೋಂದಣಿ ಮತ್ತು ಪಾಸ್ ಅನ್ನು ಕಡ್ಡಾಯಗೊಳಿಸಿರುವುದು. ನಮ್ಮ ಸಹೋದರರು ಇನ್ನೂ ಅನೇಕ ಸ್ಥಳಗಳಲ್ಲಿ ಎದುರಿಸುತ್ತಿರುವ ಕಷ್ಟಗಳ ಬಗ್ಗೆ ಎಲ್ಲರಿಗೂ ಚೆನ್ನಾಗಿ ತಿಳಿದಿದೆ. ಸುರಕ್ಷಿತವಲ್ಲದೆ ರಾಜ್ಯಕ್ಕೆ ಪ್ರಯಾಣಿಸುವುದು ಆ ಕಷ್ಟವನ್ನು ಹೆಚ್ಚಿಸಲು ಮಾತ್ರ ಸಹಾಯ ಮಾಡುತ್ತದೆ.
ಇತರ ರಾಜ್ಯಗಳಿಂದ ರಸ್ತೆ ಮೂಲಕ ಮೂವತ್ತಮೂರು ಸಾವಿರಕ್ಕೂ ಹೆಚ್ಚು ಜನರು ಊರಿಗೆ ತಲುಪಿರುವುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದರು.ಈ ಪೈಕಿ 19,000 ಜನರು ರೆಡ್ ಜೋನ್ ಜಿಲ್ಲೆಗಳಿಂದ ಬಂದವರು. ಒಟ್ಟು ಪಾಸಿಗೋಸ್ಕರ ಅರ್ಜಿ ಸಲ್ಲಿಸಿದ 1.33 ಲಕ್ಷ ಜನರಲ್ಲಿ 72,800 ಜನರು ರೆಡ್ ಜೋನ್ ಜಿಲ್ಲೆಗಳವರು. ಈವರೆಗೆ 89,950 ಪಾಸ್ಗಳನ್ನು ನೀಡಲಾಗಿದೆ. ಈ ಪೈಕಿ 45,157 ಮಂದಿ ರೆಡ್ ಜೋನ್ ಜಿಲ್ಲೆಗಳವರು. ಮೇ 7 ರಿಂದ ವಿದೇಶಿಯದಿಂದ ಬಂದ ಏಳು ಜನರಿಗೆ ಈ ರೋಗ ಪತ್ತೆಯಾಗಿರುವುದರಿಂದ, ಆ ವಿಮಾನಗಳಲ್ಲಿನ ಎಲ್ಲ ಪ್ರಯಾಣಿಕರನ್ನು ವಿಶೇಷ ಕಣ್ಗಾವಲಿನಲ್ಲಿ ಇರಿಸಲಾಗಿದೆ. ಅವರ ಬಗ್ಗೆ ಹೆಚ್ಚಿನ ಕಾಳಜಿ ಆರೋಗ್ಯ ಇಲಾಖೆ ವಹಿಸುತ್ತಿದೆ.
ವಿಶೇಷ ರೈಲಿನಲ್ಲಿ ತಲುಪಲು ರೈಲ್ವೆ ಟಿಕೆಟ್ ತೆಗೆಯುವವರು ಕೋವಿಡ್ ಜಾಗ್ರತಾ ಪೋರ್ಟಲ್ನಿಂದ ಪಾಸ್ ಪಡೆಯಬೇಕು. ತಿರುವನಂತಪುರಂಗೆ ಬರುವ ರೈಲು ಕೋಳಿಕೋಡ್ ಮತ್ತು ಎರ್ನಾಕುಲಂನಲ್ಲಿ ಮಾತ್ರ ನಿಲ್ಲಿಸಲು ಅನುಮತಿಸಲಾಗಿದೆ. ಇದು ಹೆಚ್ಚು ಕಷ್ಟಕರವಾಗಲಿದೆ. ಕಾಸರಗೋಡ್ ತಲುಪಬೇಕಾದವರು ಹತ್ತಿರದ ನಿಲ್ದಾಣವಾದ ಮಂಗಳೂರಿನಲ್ಲಿ ಇಳಿದು ಕೇರಳಕ್ಕೆ ಬರುವ ಸಾಧ್ಯತೆ ಉಂಟಾಗಬಹುದು. ತೊಂದರೆ ತಪ್ಪಿಸಲು ರಾಜಧಾನಿ ಎಕ್ಸ್ಪ್ರೆಸ್ ನಿಲ್ಲಿಸುವ ಎಲ್ಲಾ ನಿಲ್ದಾಣಗಳಲ್ಲಿ ಈ ರೈಲುಗಳನ್ನು ನಿಲ್ಲಿಸುವಂತೆ ಕೇರಳ ಕೇಂದ್ರ ಮತ್ತು ರೈಲ್ವೆಗೆ ಸೂಚಿಸಿದೆ.ಗಲ್ಫ್ ಪ್ರದೇಶದಲ್ಲಿ ಕೊರೋನ ಭೀತಿಯಿಂದ ಗರ್ಭಿಣಿಯರು,ಮಕ್ಕಳು ಮತ್ತು ಇತರೆ ರೋಗದಿಂದ ಬಳಲುತ್ತಿರುವ ಇತರ ವೃದ್ಧರನ್ನು ಸಾಗಿಸಲು ವಿಶೇಷ ವಿಮಾನ ಏರ್ಪಡಿಸಬೇಕೆಂದು ವಿದೇಶಾಂಗ ಸಚಿವ ಎಸ್.ಜಯಶಂಕರ್ ಅವರಿಗೆ ಮನವಿ ಮಾಡಲಾಗಿದೆ. ಈಗ ಬರುವವರಲ್ಲಿ ಇಪ್ಪತ್ತು ಪ್ರತಿಶತ ಗರ್ಭಿಣಿಯರು. ಅನೇಕ ಗರ್ಭಿಣಿಯರು ಮರಳಲು ಸಾಧ್ಯವಾಗದೆ ಗಲ್ಫ್ ನಲ್ಲಿ ವಾಸಿಸುತ್ತಿದ್ದಾರೆ. ಅವರಿಗೆ ವಿಶೇಷ ಗಮನ ನೀಡಬೇಕು. ಪ್ರಸ್ತುತ ಚಾರ್ಟ್ ಮಾಡಿದ ವಿಮಾನಗಳಲ್ಲಿ ಹೆಚ್ಚಿನ ಸೀಟುಗಳನ್ನು ಅವರಿಗಾಗಿ ಕಾಯ್ದಿರಿಸುವಂತೆ ವಿದೇಶಾಂಗ ಸಚಿವರಿಗೆ ಮನವಿ ಮಾಡಲಾಯಿತು.
ಅತಿಥಿ ಕೆಲಸಗಾರರೊಂದಿಗೆ 26 ರೈಲುಗಳು ಕೇರಳದಿಂದ ಹೊರಟಿವೆ. ಒಟ್ಟು 29,366 ಜನರು ಮರಳಿದ್ದಾರೆ.ಬಿಹಾರಗೆ ಹೆಚ್ಚಿನ ರೈಲುಗಳನ್ನು (9) ಕಳುಹಿಸಲಾಗಿರುವುದು ಎಂದು ಮುಖ್ಯಮಂತ್ರಿ ಹೇಳಿದರು.
- Log in to post comments