Skip to main content

ಕೇರಳದಲ್ಲಿ 26 ಜನರಿಗೆ ಕೂಡ ಕೋವಿಡ್,ಮೂವರು ಗುಣಮುಖರಾದರು

I&PRD KERALA: KANNADA PRESS RELEASE: 13-05-20

 

 

ಇನ್ನು ಚಿಕಿತ್ಸೆಯಲ್ಲಿರುವವರು 64 ಮಂದಿ ;ಇದುವರೆಗೆ ಗುಣಮುಖವಾಗಿದವರು 493 

 

ಹಾಟ್ ಸ್ಪಾಟ್‌ನಿಂದ 19 ಪ್ರದೇಶಗಳನ್ನು ಹೊರಗಿಡಲಾಗಿದೆ

 

ಕೇರಳದಲ್ಲಿ ಗುರುವಾರ 26 ಜನರಿಗೆ ಕೋವಿಡ್ -19 ದೃಡಪಡಿಸಿರುವುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದರು. ಕಾಸರ್‌ಗೋಡ್‌ ಜಿಲ್ಲೆಯಿಂದ ಹತ್ತು ಮಂದಿಗೆ, ಮಲಪ್ಪುರಂ ಜಿಲ್ಲೆಯಿಂದ ಐವರಿಗೆ, ಪಾಲಕ್ಕಾಡ್ ಮತ್ತು ವಯನಾಡ್‌ ಜಿಲ್ಲೆಯಿಂದ ತಲಾ ಮೂವರಿಗೆ, ಕಣ್ಣೂರು ಜಿಲ್ಲೆಯಿಂದ ಇಬ್ಬರಿಗೆ ಮತ್ತು ಪಥನಮತ್ತಿಟ್ಟ, ಇಡುಕ್ಕಿ ಮತ್ತು ಕೋಳಿಕೋಡ್ ಜಿಲ್ಲೆಗಳಿಂದ ತಲಾ ಒಬ್ಬೊಬ್ಬರಿಗೆ ರೋಗ ದೃಡಪಡಿಸಿರುವುದು. ಹದಿನಾಲ್ಕು ಮಂದಿ ಕೇರಳದ ಹೊರಗಿನಿಂದ ಬಂದವರು. ಈ ಪೈಕಿ 7 ಮಂದಿ ವಿದೇಶದಿಂದ  (ಯು.ಎ.ಇ -5, ಸೌದಿ ಅರೇಬಿಯಾ -1 ಮತ್ತು ಕುವೈತ್ -1)ಬಂದವರು. 4 ಮಂದಿ ಮುಂಬೈನಿಂದ, 2 ಮಂದಿ ಚೆನ್ನೈನಿಂದ ಮತ್ತು ಒಬ್ಬರು ಬೆಂಗಳೂರಿನಿಂದ ಬಂದವರು.11 ಮಂದಿ ಸಂಪರ್ಕದ ಮೂಲಕ  ಸೋಂಕಿಗೆ ಒಳಗಾಗಿದ್ದಾರೆ. ಕಾಸರ್‌ಗೋಡ್ ಜಿಲ್ಲೆಯಲ್ಲಿನ 7 ಮಂದಿ, ವಯನಾಡ್ ಜಿಲ್ಲೆಯಲ್ಲಿನ ಮೂವರು ಮತ್ತು ಪಾಲಕ್ಕಾಡ್ ಜಿಲ್ಲೆಯಲ್ಲಿನ ಒಬ್ಬರಿಗೆ ಸಂಪರ್ಕದ ಮೂಲಕ ರೋಗ ಉಂಟಾಗಿರುವುದು.ಇಡುಕ್ಕಿ ಜಿಲ್ಲೆಯಲ್ಲಿ ರೋಗ ಬಂದವರು

ಬೇಕರಿ ಮಾಲೀಕರಾಗಿದ್ದಾರೆ.  ಸೆಂಟಿನೆಲ್ ಸರ್ವೈಲೆನ್ಸ್ ಮೂಲಕ ಇವರ ರೋಗ ಪತ್ತೆ ಹಚ್ಚಿರುವುದು. ಕಾಸರ್‌ಗೋಡ್ ಜಿಲ್ಲೆಯಲ್ಲಿ ರೋಗ ಬಂದ ಇಬ್ಬರು ಆರೋಗ್ಯ ಕಾರ್ಯಕರ್ತರು. ವಯನಾಡ್ ಜಿಲ್ಲೆಯಲ್ಲಿ ರೋಗ ಬಂದ ಒಬ್ಬರು ಪೊಲೀಸ್ ಅಧಿಕಾರಿ.

 

ಕೇರಳದಲ್ಲಿ ಚಿಕಿತ್ಸೆಯಲ್ಲಿದ್ದ 3 ಜನರ ತಪಾಸಣೆಯ ಫಲಿತಾಂಶಗಳು ಗುರುವಾರ ನಕಾರಾತ್ಮಕವಾಗಿವೆ. ಕೊಲ್ಲಂ ಜಿಲ್ಲೆಯ ಇಬ್ಬರ ಮತ್ತು ಕಣ್ಣೂರು ಜಿಲ್ಲೆಯ ಒಬ್ಬರ ತಪಾಸಣಾ ಫಲಿತಾಂಶ ಋಣಾತ್ಮಕವಾಗಿರುವುದು.ರೋಗ ದೃಡಪಡಿಸಿ ಇನ್ನು ಚಿಕಿತ್ಸೆಯಲ್ಲಿರುವವರು 64 ಮಂದಿ. ಈವರೆಗೆ 493 ಜನರು ಕೋವಿಡ್‌ನಿಂದ ಗುಣಮುಖರಾಗಿದ್ದಾರೆ.

 

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 36,910 ಜನರು ನಿರೀಕ್ಷಣೆಯಲ್ಲಿದ್ದಾರೆ. ಈ ಪೈಕಿ 36,362 ಜನರು ಮನೆಗಳಲ್ಲಿ ಮತ್ತು 548 ಜನರು ಆಸ್ಪತ್ರೆಗಳಲ್ಲಿ ನಿರೀಕ್ಷಣೆಯಲ್ಲಿರುವರು. ಒಟ್ಟು 174 ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಲ್ಲಿಯವರೆಗೆ, 40,692 ವ್ಯಕ್ತಿಗಳ (ಓಗ್ಮೆಂಟೆಡ್ ಮಾದರಿ ಸೇರಿದಂತೆ) ಮಾದರಿಯನ್ನು ಪರಿಶೀಲನೆಗಾಗಿ ಕಳುಹಿಸಲಾಗಿದೆ.ಇದರಲ್ಲಿ ಲಭ್ಯವಾದ 39,619 ಮಾದರಿಗಳ ತಪಾಸಣಾ ಫಲಿತಾಂಶ ಋಣಾತ್ಮಕವಾಗಿದೆ. ಇದಲ್ಲದೆ, ಸೆಂಟಿನೆಲ್ ಸರ್ವೈಲೆನ್ಸ್ ನ ಭಾಗವಾಗಿ ಆರೋಗ್ಯ ಕಾರ್ಯಕರ್ತರು, ಅತಿಥಿ ಕೆಲಸಗಾರರು, ಸಾಮಾಜಿಕ ಸಂಪರ್ಕ ಹೆಚ್ಚಾಗಿರುವ ವ್ಯಕ್ತಿಗಳ ಆದ್ಯತೆಯ ಗುಂಪುಗಳಿಂದ 4347 ಮಾದರಿಗಳನ್ನು ಸಂಗ್ರಹಿಸಿರುವುದರಲ್ಲಿ 4249 ಮಾದರಿಗಳು ನಕಾರಾತ್ಮಕವಾಗಿವೆ.

 

ರಾಜ್ಯದಲ್ಲಿ ಹೊಸ ಹಾಟ್ ಸ್ಪಾಟ್ ಇಲ್ಲ.ಅದೇ ಸಮಯ, 19 ಪ್ರದೇಶಗಳನ್ನು ಹಾಟ್ ಸ್ಪಾಟ್ನಿಂದ ಹೊರಗಿಡಲಾಗಿದೆ. ಪ್ರಸ್ತುತ ಒಟ್ಟು 15 ಹಾಟ್ ಸ್ಪಾಟ್‌ಗಳಿವೆ.

 

ಎಂ.ಎಸ್‌.ಎಂ.ಇ ಕೈಗಾರಿಕೆಗಳ ಪುನರುಜ್ಜೀವನಕ್ಕಾಗಿ ವಿಶೇಷ ಪ್ಯಾಕೇಜ್ - ಕೇರಳ ಮುಖ್ಯಮಂತ್ರಿ

ರಾಜ್ಯದ ಸೂಕ್ಷ್ಮ - ಸಣ್ಣ - ಮಧ್ಯಮ (ಎಂಎಸ್‌ಎಂಇ)ಕೈಗಾರಿಕೆಗಳ ಪುನರುಜ್ಜೀವನಕ್ಕಾಗಿ ವಿಶೇಷ ಪ್ಯಾಕೇಜಾದ ಕೈಗಾರಿಕಾ 'ಭದ್ರತೆ'ಗೆ ಸಂಪುಟ ಅನುಮೋದನೆ ನೀಡಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದರು. ಈ ಪ್ಯಾಕೇಜ್ ಮೂಲಕ ಕೈಗಾರಿಕೆಗಳಿಗೆ ಒಟ್ಟು 3,434 ಕೋಟಿ ರೂಪಾಯಿ ಲಭ್ಯವಾಗಲಿದೆ. ಕೋವಿಡ್ 19 ರ ಸಂದರ್ಭದಲ್ಲಿ ಕೈಗಾರಿಕಾ ಇಲಾಖೆಯಿಂದ ಪರಿಹಾರ ಪ್ಯಾಕೇಜ್ ಜಾರಿಗೆ ತರಲಾಗುತ್ತಿದೆ.
ಪ್ಯಾಕೇಜ್ ಪ್ರಕಾರ, ಅಸ್ತಿತ್ವದಲ್ಲಿರುವ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ನೀಡಲಾಗುವ ಹೆಚ್ಚುವರಿ ಸಾಲಗಳಿಗೆ ಅಂಚು ಹಣದ ಸಹಾಯ ಮತ್ತು ಬಡ್ಡಿ ರಿಯಾಯತಿಯನ್ನು ಅನುಮತಿಸಲಾಗುವುದು.
ಕೆಎಸ್‌ಐಡಿಸಿ ಮತ್ತು ಕಿನ್‌ಫ್ರಾ ಸಾಲ ಬಾಕಿ ಮೊತ್ತವನ್ನು ಒಂದು ಬಾರಿ ಇತ್ಯರ್ಥಪಡಿಸಲಿವೆ. ಉದ್ಯಮಗಳಿಗೆ ಸಾಲ ಮರುಪಾವತಿ ಅವಧಿಯನ್ನು ಆರು ತಿಂಗಳು ವಿಸ್ತರಿಸಲಾಗುವುದು. ಕೈಗಾರಿಕಾ ಇಲಾಖೆಯ ಅಧೀನದಲ್ಲಿರುವ ಗುಣಮಟ್ಟದ ವಿನ್ಯಾಸ ಕಾರ್ಖಾನೆಗಳಲ್ಲಿ ಮೂರು ತಿಂಗಳ ಬಾಡಿಗೆಯನ್ನು ಮನ್ನಾ ಮಾಡಲಾಗುವುದು.ಕೈಗಾರಿಕಾ ಉದ್ಯಾನವನಗಳಲ್ಲಿ ಸಾರ್ವಜನಿಕ ಸೌಲಭ್ಯಗಳನ್ನು ಬಳಸುವ ಉದ್ಯಮಿಗಳಿಗೆ ಮೂರು ತಿಂಗಳವರೆಗೆ ಬಾಡಿಗೆಗೆ ವಿನಾಯಿತಿ ನೀಡಲಾಗುತ್ತದೆ.  ಸೂಕ್ಷ್ಮ-ಸಣ್ಣ- ಮಧ್ಯಮ ಪ್ರಮಾಣದ ಉದ್ಯಮಗಳಿಗೆ ಬಂಡವಾಳಕ್ಕೆ ವಿಶೇಷ ಸಾಲ ನೀಡಲಾಗುವುದು. ಎಂಎಸ್‌ಎಂಇಗಳ ಉತ್ಪಾದನೆ ವ್ಯವಸಾಯಕ್ಕೆ ಬಡ್ಡಿ ಸಹಾಯಧನ ನೀಡಲಾಗುವುದು. ವೈವಿಧ್ಯೀಕರಣ ಮತ್ತು ಅಭಿವೃದ್ಧಿಗೆ ತೆಗೆದುಕೊಂಡ ಸಾಲಗಳ ಬಡ್ಡಿದರವನ್ನು ಆರು ತಿಂಗಳವರೆಗೆ ಆರು ಪ್ರತಿಶತದಷ್ಟು ಕಡಿತಗೊಳಿಸಲಾಗುತ್ತದೆ.
ರಾಜ್ಯದ ಎಲ್ಲಾ ಶಾಲೆಗಳಲ್ಲೂ 2020-21ರ ಶೈಕ್ಷಣಿಕ ವರ್ಷಕ್ಕೆ  ಪ್ರವೇಶ ಮೇ 18 ರಿಂದ ಪ್ರಾರಂಭವಾಗಲಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಅಡಿಯಲ್ಲಿರುವ ಶಾಲೆಗಳು ಕೋವಿಡ್ ನಿರ್ಬಂಧಗಳನ್ನು ಪಾಲಿಸಿ ನೇರವಾಗಿ ಪ್ರವೇಶ ಪಡೆಯಬಹುದು. ಈ ಶಾಲೆಗಳಲ್ಲಿ ಆನ್‌ಲೈನ್‌ ಮೂಲಕವೂ ಪ್ರವೇಶ ಪಡೆಯಬಹುದು. ಇದಕ್ಕಾಗಿ ವ್ಯವಸ್ಥೆಯನ್ನು ಕೈಟ್ ಒದಗಿಸುತ್ತದೆ.ಆನ್‌ಲೈನ್ ಸೌಲಭ್ಯವನ್ನು ಬಳಸಲು ಸಾಧ್ಯವಾಗದವರು, ಅಂಚಿನಲ್ಲಿರುವ ಎಸ್‌ಸಿ ಮತ್ತು ಎಸ್‌ಟಿ ವಿದ್ಯಾರ್ಥಿಗಳು, ಬೆಟ್ಟ ದೇಶದಲ್ಲಿ ವಾಸಿಸುವ ವಿದ್ಯಾರ್ಥಿಗಳು, ಬುಡಕಟ್ಟು ಮಕ್ಕಳು ಮತ್ತು ಕರಾವಳಿಯ ವಿದ್ಯಾರ್ಥಿಗಳು ಮುಂತಾದ ವಿಭಾಗಗಳಿಗೆ 200 ಕೇಂದ್ರಗಳಲ್ಲಿ ಪರೀಕ್ಷಾ ಪರಿಶೀಲನೆಗೆ ಸೌಲಭ್ಯ ನೀಡಲಾಗುವುದು.
ಕೋವಿಡ್ ಪ್ರತಿರೋಧದಿಂದಾಗಿ ಸಾರ್ವಜನಿಕರ ಆರೋಗ್ಯ ವ್ಯವಸ್ಥೆಯಲ್ಲಿ ಹಸ್ತಕ್ಷೇಪವು ಸಮುದಾಯದ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳೊಂದಿಗೆ ಇರಬೇಕು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು.
ಇಡೀ ಸಮುದಾಯದ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸಲು ಮತ್ತು ಕೋವಿಡ್ 19 ಅನ್ನು ಚಿಕಿತ್ಸೆ ನೀಡಿ ಸುಖ ಪಡಿಸುವ ಸ್ಪೆಷಲೈಸ್ಡ್ ಟ್ರೀಟ್ ಮೆಂಟ್ ಪ್ರೋಟೋಕಾಲ್‌ಗಳನ್ನು ಸಬಳೀಕರಿಸುವುದು ಅತ್ಯಂತ ಮಹತ್ವದ್ದಾಗಿದೆ.
ಇತರ ರಾಜ್ಯಗಳಿಂದ ಬರುವವರಿಗೆ ಕೇರಳವು ಪರಿಣಾಮಕಾರಿ ವ್ಯವಸ್ಥೆ ಮಾಡಿದೆ ಎಂದು ಮುಖ್ಯಮಂತ್ರಿ ಹೇಳಿದರು. ಅವರು ರಾಜ್ಯ ಸರ್ಕಾರದ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ನೋಂದಾಯಿಸಿದವರಿಗೆ  ಅವರು ಬರಬೇಕಾದ ದಿನಾಂಕ, ಸಮಯ ಮತ್ತು ಚೆಕ್ ಪೋಸ್ಟ್ ಮುಂಚಿತವಾಗಿ ನೀಡಲಾಗುವುದು. ಪ್ರಯಾಣಿಕರ ಸಂಪೂರ್ಣ ವಿವರಗಳನ್ನು ಮತ್ತು ಅವರ ಯಾತ್ರಾಪಥವನ್ನು ಪಡೆಯಲು ಇದು ಉಪಯುಕ್ತವಾಗಿದೆ.

ದೆಹಲಿಯಿಂದ ವಿವಿಧ ರಾಜ್ಯಗಳಿಗೆ ರೈಲ್ವೆ  ಟ್ರೈನ್ ಓಡಿಸಲು ಪ್ರಾರಂಭಿಸಿದೆ. ಐಆರ್‌ಸಿಟಿಸಿ ವೆಬ್‌ಸೈಟ್ ಮೂಲಕ ಬುಕ್ ಮಾಡುವವರು ಪ್ರಯಾಣಿಸಬಹುದು. ಇದಲ್ಲದೆ, ಕೇರಳಕ್ಕೆ ಹೋಗುವ ರೈಲು ಇತರ ವಿವಿಧ ಸ್ಥಳಗಳಲ್ಲಿ ನಿಲ್ಲಿಸಿ ಇಲ್ಲಿಗೆ ತಲುಪುವುದು. ರೋಗ ಹರಡುವುದನ್ನು ತಡೆಗಟ್ಟಲು ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳನ್ನು ಹಾಳುಮಾಡುವ ಪ್ರಯತ್ನ ಇದಾಗಿದೆ. ಇದರ ಬಗ್ಗೆ ರೈಲ್ವೆ ಸಚಿವ ಪಿಯೂಷ್ ಗೋಯಲ್ ಗೆ ಸೂಚನೆ ನೀಡಲಾಗಿದೆ.
ದೆಹಲಿಯ ಹೊರತಾಗಿ, ಭಾರತದ ಪ್ರಮುಖ ನಗರಗಳಿಂದ ಕೇರಳಕ್ಕೆ ವಿಶೇಷ ರೈಲುಗಳನ್ನು ಪಡೆಯಲು ಪ್ರಯತ್ನಿಸಲಾಗುತ್ತಿದೆ. ಮುಂಬೈ, ಕೋಲ್ಕತಾ, ಅಹಮದಾಬಾದ್, ಬೆಂಗಳೂರು ಮತ್ತು ಚೆನ್ನೈನಂತಹ ನಗರಗಳಿಂದ ತಡೆರಹಿತ ರೈಲುಗಳನ್ನು ನಗರವು ಮತ್ತೊಮ್ಮೆ ವಿನಂತಿಸಿದೆ.
ಈಗ ರೈಲ್ವೆ ಪ್ಲಾನ್ ಮಾಡಿದ ಟ್ರೈನ್ ಹೊರತಾಗಿ ಇತರ ರಾಜ್ಯಗಳಲ್ಲಿ ಲಾಕ್ ಡೌನ್ ಕಾರಣ ಸಿಕ್ಕಿಬಿದ್ದವರನ್ನು ಹಿಂದಿರುಗಿಸಲು ಕೇರಳಕ್ಕೆ ವಿಶೇಷ ರೈಲುಗಳು ಬೇಕೆಂದು ರೈಲ್ವೆ ಸಚಿವರಿಗೆ ವಿನಂತಿಸಲಾಗಿದೆ.ವಿವಿಧ ರಾಜ್ಯಗಳಲ್ಲಿ ಲಾಕ್ ಡೌನ್ ನಲ್ಲಿ ಸಿಕ್ಕಿ ಬಳಲುತ್ತಿರುವ ವಿದ್ಯಾರ್ಥಿಗಳು ಸೇರಿದಂತೆ ಮಲಯಾಳಿಗಳನ್ನು ಬೇಗನೇ ಮರಳಿ ತರಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಮುಖ್ಯಮಂತ್ರಿ ವ್ಯಕ್ತ ಪಡಿಸಿದರು.

ಸಿವಿಲ್ ಪೊಲೀಸ್ ಅಧಿಕಾರಿಗಳಿಂದ ಹಿಡಿದು ರಾಜ್ಯ ಪೊಲೀಸ್ ಮುಖ್ಯಸ್ಥರವರೆಗೆ ಎಲ್ಲ ಪೊಲೀಸ್ ಅಧಿಕಾರಿಗಳ ಆರೋಗ್ಯ ಮತ್ತು ಯೋಗಕ್ಷೇಮವನ್ನು ಖಾತ್ರಿಪಡಿಸಿಕೊಳ್ಳಲು ಸರ್ಕಾರ ಪ್ರತಿಜ್ನಾಬದ್ಧವಾಗಿದೆ. ಕೋವಿಡ್ ಪರಿಣಾಮದ ಹಿನ್ನೆಲೆಯಲ್ಲಿ, ಪೊಲೀಸರು ವಿವಿಧ ಪ್ರದೇಶಗಳಲ್ಲಿ ಕ್ರಮವನ್ನು ಬದಲಾಯಿಸುತ್ತಾರೆ.ಇದಕ್ಕೆ ಸಂಭಂಧಿಸಿ ಪೊಲೀಸರ ಉನ್ನತ ಮಟ್ಟದ ಸಮಿತಿಯು ಶೀಘ್ರದಲ್ಲೇ ವರದಿಯನ್ನು ಸಲ್ಲಿಸಲಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಈ ವರ್ಷ ಸಾಮಾನ್ಯ ಮೀರಿದ ಮಳೆಯಾಗಲಿದೆ ಎಂಬ ಹವಾಮಾನ ತಜ್ಞರ ಮುನ್ಸೂಚನೆಯನ್ನು ಗಮನದಲ್ಲಿಟ್ಟುಕೊಂಡು ತಕ್ಷಣ ಕ್ರಮವನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

date