Skip to main content

ಕೇರಳದಲ್ಲಿ ಶುಕ್ರವಾರ 78 ಜನರಿಗೆ ಕೋವಿಡ್ -19 ದೃಡಪಡಿಸಿದೆ; 32 ಜನರು ಗುಣಮುಖರಾದರು

ಚಿಕಿತ್ಸೆಯಲ್ಲಿರುವವರು 1303 ಮಂದಿ; 9 ಹೊಸ ಹಾಟ್ ಸ್ಪಾಟ್‌ಗಳು

ಕೇರಳದಲ್ಲಿ ಶುಕ್ರವಾರ 78 ಜನರಿಗೆ ಕೋವಿಡ್ -19 ದೃಡಪಡಿಸಿರುವುದಾಗಿ ಆರೋಗ್ಯ ಸಚಿವೆ ಕೆ.ಕೆ.ಶೈಲಾಜಾ ಟೀಚರ್ ತಿಳಿಸಿದರು. ತ್ರಿಶೂರ್, ಮಲಪ್ಪುರಂ ಜಿಲ್ಲೆಗಳಿಂದ ತಲಾ 14 ಮಂದಿಗೆ, ಆಲಪ್ಪುಳ ಜಿಲ್ಲೆಯಿಂದ 13 ಮಂದಿಗೆ, ಪಥನಮತ್ತಿಟ್ಟ ಜಿಲ್ಲೆಯಿಂದ 7 ಮಂದಿಗೆ, ಎರ್ನಾಕುಲಂ, ಪಾಲಕ್ಕಾಡ್ ಜಿಲ್ಲೆಗಳಿಂದ ತಲಾ 5 ಮಂದಿಗೆ, ಕೊಲ್ಲಂ, ಕೋಳಿಕೋಡ್, ಕಾಸರಗೋಡು ಜಿಲ್ಲೆಗಳಿಂದ ತಲಾ 4 ಮಂದಿಗೆ, ಕೋಟಯಂ, ಕಣ್ಣೂರು(ಒಬ್ಬರು ನಿಧನರಾದರು) ಜಿಲ್ಲೆಗಳಿಂದ ತಲಾ ಮೂವರಿಗೆ, ತಿರುವನಂತಪುರಂ, ಇಡುಕ್ಕಿ ಜಿಲ್ಲೆಗಳಿಂದ ತಲಾ ಒಬ್ಬೊಬ್ಬರಿಗೆ ರೋಗ ದೃಡಪಡಿಸಿರುವುದು. ಈ ಪೈಕಿ 36 ಮಂದಿ ವಿದೇಶಗಳಿಂದ  (ಯು.ಎ.ಇ -17, ಕುವೈತ್ -12, ಸೌದಿ ಅರೇಬಿಯಾ -4, ಒಮಾನ್ -2, ಮಾಲ್ಡೀವ್ಸ್ -1) ಮತ್ತು 31ಮಂದಿ ಇತರ ರಾಜ್ಯಗಳಿಂದ (ಮಹಾರಾಷ್ಟ್ರ -16, ದೆಹಲಿ -7, ತಮಿಳುನಾಡು -3, ಕರ್ನಾಟಕ -2, ಆಂಧ್ರಪ್ರದೇಶ -1, ಜಾರ್ಖಂಡ್ -1, ಜಮ್ಮು ಮತ್ತು ಕಾಶ್ಮೀರ- 1)ಬಂದವರು.10 ಜನರಿಗೆ ಸಂಪರ್ಕದ ಮೂಲಕ ಸೋಂಕು ತಗುಲಿರುವುದು. ತ್ರಿಶೂರ್‌ ಜಿಲ್ಲೆಯ 7 ಜನರಿಗೆ , ಮಲಪ್ಪುರಂ ಜಿಲ್ಲೆಯ ಮೂವರಿಗೆ ಸಂಪರ್ಕದಿಂದ ಸೋಂಕು ತಗುಲಿರುವುದು. ಇದರಲ್ಲಿ ಕಣ್ಣೂರು ಜಿಲ್ಲೆಯಲ್ಲಿ ನಿಧನರಾದ ಉಸ್ಮಾನ್ ಕುಟ್ಟಿ (71) ಅವರಿಗೆ ಕೋವಿಡ್ -19 ರೋಗನಿರ್ಣಯ ಮಾಡಲಾಗಿರುವುದು ಸೇರುತ್ತದೆ. ಅವರು ಜೂನ್ 9 ರಂದು ಮುಂಬೈನಿಂದ ರೈಲಿನಲ್ಲಿ ಬಂದರು. ಅವರು ಹೃದ್ರೋಗಿಯಾದ ಇವರಿಗೆ ತೀವ್ರ ಶ್ವಾಸಕೋಶದ ಕಾಯಿಲೆಯೂ ಇತ್ತು. ಇದರೊಂದಿಗೆ ರಾಜ್ಯದಲ್ಲಿ ಕೋವಿಡ್‌ನಿಂದಾಗಿ 19 ಜನರು ಸಾವನ್ನಪ್ಪಿದ್ದಾರೆ.

ಅದೇ ಸಮಯ ರೋಗ ಪತ್ತೆಯಾಗಿ ಚಿಕಿತ್ಸೆಯಲ್ಲಿದ್ದ 32 ಜನರ ತಪಾಸಣಾ ಫಲಿತಾಂಶ  ನಕಾರಾತ್ಮಕವಾಗಿವೆ. ಕೊಲ್ಲಂ ಜಿಲ್ಲೆಯಿಂದ 7 ಜನರ, ಪಾಲಕ್ಕಾಡ್‌ ಜಿಲ್ಲೆಯಿಂದ 6 ಜನರ, ಇಡುಕ್ಕಿ , ಎರ್ನಾಕುಲಂ ( ಒಂದು ತಿರುವನಂತಪುರಂ ನಿವಾಸಿ), ತ್ರಿಶೂರ್ ಜಿಲ್ಲೆಗಳಿಂದ ತಲಾ 4 ಜನರಿಗೆ, ಕೋಳಿಕೋಡ್, ಕಣ್ಣೂರು  (ಒಂದು ಕಾಸರಗೋಡು ನಿವಾಸಿ ) ಜಿಲ್ಲೆಯಿಂದ ತಲಾ ಇಬ್ಬರ, ತಿರುವನಂತಪುರಂ, ಕೋಟಯಂ, ಕಾಸರಗೋಡು ಜಿಲ್ಲೆಗಳಿಂದ ತಲಾ ಒಬ್ಬೊಬ್ಬರ ತಪಾಸಣಾ ಫಲಿತಾಂಶ ಋಣಾತ್ಮಕವಾಗಿರುವುದು. ಇದರೊಂದಿಗೆ 1303 ಜನರಿಗೆ ಈ ರೋಗ ಪತ್ತೆಯಾಗಿದ್ದು ಇನ್ನು ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 999 ಜನರು ಕೋವಿಡ್‌ನಿಂದ ಗುಣಮುಖರಾಗಿದ್ದಾರೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 2,27,402 ಜನರು ನಿರೀಕ್ಷಣೆಯಲ್ಲಿದ್ದಾರೆ. ಈ ಪೈಕಿ 2,25,417 ಜನರು ಮನೆ / ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ನಲ್ಲಿ ಮತ್ತು 1985 ಜನರು ಆಸ್ಪತ್ರೆಗಳಲ್ಲಿ ನಿರೀಕ್ಷಣೆಯಲ್ಲಿರುವರು. ಶುಕ್ರವಾರ ಒಟ್ಟು 242 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಳೆದ 24 ಗಂಟೆಗಳಲ್ಲಿ 5001 ಮಾದರಿಗಳನ್ನು ಪರಿಶೀಲಿಸಲಾಯಿತು. ಇಲ್ಲಿಯವರೆಗೆ, 1,06,850 ವ್ಯಕ್ತಿಗಳ (ಖಾಸಗಿ ಲ್ಯಾಬ್ ಮಾದರಿಯನ್ನು ಒಳಗೊಂಡಂತೆ) ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಈ ಪೈಕಿ 3392 ಮಾದರಿಗಳ ಫಲಿತಾಂಶ ಬರಬೇಕಿದೆ. ಇದಲ್ಲದೆ, ಸೆಂಟಿನೆಲ್ ಕಣ್ಗಾವಲಿನ ಭಾಗವಾಗಿ, ಆರೋಗ್ಯ ಕಾರ್ಯಕರ್ತರು, ಅತಿಥಿ ಕಾರ್ಯಕರ್ತರು, ಸಾಮಾಜಿಕ ಸಂಪರ್ಕ ಹೆಚ್ಚಾಗಿರುವ ವ್ಯಕ್ತಿಗಳ ಆದ್ಯತೆಯ ಗುಂಪುಗಳಿಂದ 28,356 ಮಾದರಿಗಳನ್ನು ಸಂಗ್ರಹಿಸಿರುವುದರಲ್ಲಿ 26,143 ಮಾದರಿಗಳು ನಕಾರಾತ್ಮಕವಾಗಿವೆ. ರುಟೀನ್ ಮಾದರಿ, ವರ್ಧಿತ ಮಾದರಿ, ಸೆಂಟಿನೆಲ್ ಮಾದರಿ, ಪೂಲ್ಡ್ ಸೆಂಟಿನೆಲ್, ಸಿ.ಬಿ. ನ್ಯಾಟ್ ಮತ್ತು ಟ್ರೂ ನ್ಯಾಟ್ ಸೇರಿದಂತೆ ಒಟ್ಟು 1,40,457 ಮಾದರಿಗಳನ್ನು ಪರಿಶೀಲನೆಗಾಗಿ ಕಳುಹಿಸಲಾಗಿದೆ.

ಹೊಸದಾಗಿ 9 ಹಾಟ್ ಸ್ಪಾಟ್‌ಗಳಿವೆ. ಕಣ್ಣೂರು ಜಿಲ್ಲೆಯ ವೆಂಗಾಡ್, ಕಡನ್ನಪ್ಪಳ್ಳಿ - ಪಾಣಪುಳ, ತ್ರಿಶೂರ್ ಜಿಲ್ಲೆಯ ವಡನಪಲ್ಲಿ, ಎಂಗಂಡಿಯೂರ್, ಚವಕ್ಕಾಡ್ ಪುರಸಭೆ, ತ್ರಿಶೂರ್ ಕಾರ್ಪೊರೇಷನ್, ಮಲಪ್ಪುರಂ ಜಿಲ್ಲೆಯ ತೆನ್ನಲಾ, ಕೋಟಯಂ ಜಿಲ್ಲೆಯ ಕೋರುತ್ತೋಡ್ ತ್ರಿಕ್ಕೋಡಿಯಾನಂ ಹೊಸ ಹಾಟ್ ಸ್ಪಾಟ್‌ಗಳು.

14 ಪ್ರದೇಶಗಳನ್ನು ಹಾಟ್ ಸ್ಪಾಟ್‌ನಿಂದ ಹೊರಗಿಡಲಾಗಿದೆ. ಕಾಸರ್‌ಗೋಡ್ ಜಿಲ್ಲೆಯ ಪೈವಳಿಕೆ ಪೀಲಿಕೋಡ್, ಎರ್ನಾಕುಲಂ ಜಿಲ್ಲೆಯ ಕೊಚ್ಚಿನ್ ಕಾರ್ಪೊರೇಷನ್, ವಯನಾಡ್ ಜಿಲ್ಲೆಯ ಮೀನಾಂಗಡಿ, ತಾವಿಂಜಾಲ್, ಪನಾಮರಂ,   ಮಟ್ಟಿಲ್, ಕೊಲ್ಲಂ ಜಿಲ್ಲೆಯ ನೀಂದಕರ, ಕೊಲ್ಲಂ ಕಾರ್ಪೊರೇಷನ್, ಕೋಳಿಕೋಡ್ ಜಿಲ್ಲೆಯ ತುನ್ನೇರಿ, ಪುರಮೇರಿ, ಮಾವೂರ್ ,ಒಳವಣ್ಣ ಹೊರಗಿಡಲಾದ ಹಾಟ್ ಸ್ಪಾಟ್‌ಗಳು. ಪ್ರಸ್ತುತ ಒಟ್ಟು 128 ಹಾಟ್ ಸ್ಪಾಟ್‌ಗಳಿವೆ.

date