Skip to main content

ಕೇರಳದಲ್ಲಿ ಗುರುವಾರ 94 ಜನರಿಗೆ ಕೋವಿಡ್ -19

ಚಿಕಿತ್ಸೆಯಲ್ಲಿರುವವರು 884 ಮಂದಿ; 39 ಮಂದಿ ಗುಣಮುಖರಾದರು

 

ಕೇರಳದಲ್ಲಿ ಗುರುವಾರ 94 ಜನರಿಗೆ ಕೋವಿಡ್ -19 ದೃಡಪಡಿಸಿರುವುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಪಥನಮತ್ತಿಟ್ಟ ಜಿಲ್ಲೆಯಿಂದ 14 ಮಂದಿಗೆ, ಕಾಸರ್‌ಗೋಡ್‌ ಜಿಲ್ಲೆಯಿಂದ 12 ಮಂದಿಗೆ, ಕೊಲ್ಲಂ ಜಿಲ್ಲೆಯಿಂದ 11 ಮಂದಿಗೆ, ಕೋಳಿಕೋಡ್‌ ಜಿಲ್ಲೆಯಿಂದ 10 ಮಂದಿಗೆ, ಆಲಪ್ಪುಳ, ಮಲಪ್ಪುರಂ ಜಿಲ್ಲೆಗಳಿಂದ ತಲಾ  8 ಮಂದಿಗೆ, ಪಾಲಕ್ಕಾಡ್ ಜಿಲ್ಲೆಯಿಂದ 7 ಮಂದಿಗೆ, ಕಣ್ಣೂರು ಜಿಲ್ಲೆಯಿಂದ 6 ಮಂದಿಗೆ, ತಿರುವನಂತಪುರಂ ಮತ್ತು ಕೊಟ್ಟಾಯಂ ಜಿಲ್ಲೆಯಿಂದ ತಲಾ 5 ಮಂದಿಗೆ, ತ್ರಿಶೂರ್‌ ಜಿಲ್ಲೆಯಿಂದ ನಾಲ್ವರಿಗೆ, ಮತ್ತು ಎರ್ನಾಕುಲಂ, ವಯನಾಡ್ ಜಿಲ್ಲೆಗಳಿಂದ ತಲಾ ಇಬ್ಬರಿಗೆ ರೋಗ ದೃಡಪಡಿಸಿರುವುದು. ಈ ಪೈಕಿ 47 ಮಂದಿ ವಿದೇಶದಿಂದ  (ಕುವೈತ್ -28, ಯು.ಎ.ಇ -12, ರಷ್ಯಾ -3, ಕತಾರ್ -1, ಸೌದಿ ಅರೇಬಿಯಾ -1, ಮಾಲ್ಡೀವ್ಸ್ -1, ತಜಿಕಿಸ್ತಾನ್ -1) ಮತ್ತು 37 ಮಂದಿ ಇತರ ರಾಜ್ಯಗಳಿಂದ (ಮಹಾರಾಷ್ಟ್ರ -23, ತಮಿಳುನಾಡು-8, ದೆಹಲಿ -3, ಗುಜರಾತ್ -2 ಮತ್ತು ರಾಜಸ್ಥಾನ - 1)ಬಂದವರು. ಏಳು ಮಂದಿಗೆ ಸಂಪರ್ಕದ ಮೂಲಕ (ಕೋಳಿಕೋಡ್ -2, ಮಲಪ್ಪುರಂ -2, ತ್ರಿಶೂರ್ -2, ಕಾಸರಗೋಡ್ -1)ರೋಗ ತಗುಲಿರುವುದು.ತೀವ್ರವಾದ ಉಸಿರಾಟದ ಸೋಂಕಿನಿಂದಾಗಿ ಪಾಲಕ್ಕಾಡ್, ಕೋಳಿಕೋಡ್ (ಮಲಪ್ಪುರಂನ ನಿವಾಸಿ) ಜಿಲ್ಲೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಸಾವನ್ನಪ್ಪಿದ 2 ವ್ಯಕ್ತಿಗಳಿಗೆ,ಕೊಲ್ಲಂ ಜಿಲ್ಲೆಯಲ್ಲಿ ಮೃತಪಟ್ಟ ಒಬ್ಬ ವ್ಯಕ್ತಿಗೆ ಕೋವಿಡ್ 19 ದೃಡಪಡಿಸಿದ್ದಾರೆ.  ಮತಪಟ್ಟವರು ಚೆನ್ನೈನಿಂದ ಪಾಲಕ್ಕಾಡ್ ತಲುಪಿದ ಮೀನಾಕ್ಷಿಯಾಮ್ಮಲ್, ಅಬಿದಾಬಿಯಿಂದ ಬಂದ ಮಲಪ್ಪುರಂ ಎಡಪ್ಪಲ್‌ ನಿವಾಸಿ ಶಹನಾಜ್ ಮತ್ತು ಕೊಲ್ಲಂ ಕವನಾಡ್‌ ನಿವಾಸಿ ಕ್ಸೇವಿಯರ್ ಎಂದು ಗುರುತಿಸಲಾಗಿದೆ.ಇದರೊಂದಿಗೆ ಸಾವಿನ ಸಂಖ್ಯೆ 14 ಕ್ಕೆ ಏರಿದೆ.

ರೋಗ ಪತ್ತೆಯಾಗಿ ಚಿಕಿತ್ಸೆಯಲ್ಲಿದ್ದ 39 ಜನರ ತಪಾಸಣಾ ಫಲಿತಾಂಶ ಋಣಾತ್ಮಕವಾಗಿವೆ. ಪಾಲಕ್ಕಾಡ್‌ ಜಿಲ್ಲೆಯಿಂದ 13 ಮಂದಿಯ (ಒಬ್ಬರು ಮಲಪ್ಪುರಂ ನಿವಾಸಿ), ಮಲಪ್ಪುರಂ ಜಿಲ್ಲೆಯಿಂದ 8 ಮಂದಿಯ, ಕಣ್ಣೂರು ಜಿಲ್ಲೆಯಿಂದ 7 ಮಂದಿಯ(ಒಬ್ಬರು ಕೋಳಿಕೋಡ್‌ ನಿವಾಸಿ),   ಕೋಳಿಕೋಡ್ ಜಿಲ್ಲೆಯಿಂದ ಐದು ಮಂದಿಯ ಮತ್ತು  ತ್ರಿಶೂರ್, ವಯನಾಡ್ ಜಿಲ್ಲೆಗಳಿಂದ ತಲಾ ಇಬ್ಬರ, ತಿರುವನಂತಪುರಂ ಮತ್ತು ಪಥನಮತ್ತಿಟ್ಟ ಜಿಲ್ಲೆಗಳಿಂದ ತಲಾ ಒಬ್ಬೊಬ್ಬರ ತಪಾಸಣಾ ಫಲಿತಾಂಶ ಋಣಾತ್ಮಕವಾಗಿರುವುದು. ಇದರೊಂದಿಗೆ 884 ಜನರಿಗೆ ಈ ರೋಗ ದೃಡಪಡಿಸಿ ಇನ್ನು ಚಿಕಿತ್ಸೆ ಪಡೆಯುತ್ತಿದ್ದಾರೆ.ಈವರೆಗೆ 690 ಜನರು ಕೋವಿಡ್‌ನಿಂದ ಗುಣಮುಖರಾಗಿದ್ದಾರೆ.

ವಿಮಾನ ನಿಲ್ದಾಣದ ಮೂಲಕ 38,945 ಜನರು,ಸೀಪೋರ್ಟ್ ಮೂಲಕ 1621 ಜನರು, ಚೆಕ್ ಪೋಸ್ಟ್ ಮೂಲಕ 1,11,592 ಜನರು, ಮತ್ತು ರೈಲು ಮೂಲಕ 14,450 ಜನರು ಸೇರಿದಂತೆ ಒಟ್ಟು 1,66,608 ಜನರು ರಾಜ್ಯಕ್ಕೆ ಆಗಮಿಸಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 1,70,065 ಜನರು ನಿರೀಕ್ಷಣೆಯಲ್ಲಿದ್ದಾರೆ. ಈ ಪೈಕಿ 1,68,578 ಜನರು ಮನೆ /ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ನಲ್ಲಿ ಮತ್ತು 1487 ಜನರು ಆಸ್ಪತ್ರೆಗಳಲ್ಲಿ ನಿರೀಕ್ಷಣೆಯಲ್ಲಿರುವರು.

ಕಳೆದ 24 ಗಂಟೆಗಳಲ್ಲಿ 3787 ಮಾದರಿಗಳನ್ನು ಪರಿಶೀಲನೆಗಾಗಿ ಕಳುಹಿಸಲಾಗಿದೆ. ಇಲ್ಲಿಯವರೆಗೆ, 76,383 ವ್ಯಕ್ತಿಗಳ (ಓಗ್ಮೆಂಟೆಡ್ ಮಾದರಿ ಸೇರಿದಂತೆ) ಮಾದರಿಯನ್ನು ಪರಿಶೀಲನೆಗಾಗಿ ಕಳುಹಿಸಲಾಗಿದೆ. ಇದರಲ್ಲಿ ಲಭ್ಯವಾದ 72,139 ಮಾದರಿಗಳ,ತಪಾಸಣಾ ಫಲಿತಾಂಶ ಋಣಾತ್ಮಕವಾಗಿವೆ. ಇದಲ್ಲದೆ, ಸೆಂಟಿನೆಲ್ ಸರ್ವೈಲೆನ್ಸ್ ನ ಭಾಗವಾಗಿ, ಆರೋಗ್ಯ ಕಾರ್ಯಕರ್ತರು, ಅತಿಥಿ ಕೆಲಸಗಾರರು, ಸಾಮಾಜಿಕ ಸಂಪರ್ಕ ಹೆಚ್ಚಾಗಿರುವ ವ್ಯಕ್ತಿಗಳ ಆದ್ಯತೆಯ ಗುಂಪುಗಳಿಂದ 18,146 ಮಾದರಿಗಳನ್ನು ಸಂಗ್ರಹಿಸಿರುವುದರಲ್ಲಿ 15,264 ಮಾದರಿಗಳು ನಕಾರಾತ್ಮಕವಾಗಿವೆ.

 ಹೊಸದಾಗಿ 9 ಹಾಟ್ ಸ್ಪಾಟ್‌ಗಳಿವೆ. ಕಣ್ಣೂರು ಜಿಲ್ಲೆಯ ಇರಿಟ್ಟಿ ಪುರಸಭೆ, ತಿಲ್ಲಂಗರಿ, ಆಂಟೂರ್ ಪುರಸಭೆ, ಶ್ರೀಕಂಡಪುರಂ, ಕೊಲ್ಲಂ ಜಿಲ್ಲೆಯ ಅಂಚಲ್, ಎರೂರ್, ಕಡಕ್ಕಲ್ ಮತ್ತು ಪಾಲಕ್ಕಾಡ್ ಜಿಲ್ಲೆಯ ಕೊಪ್ಪಂ,ಎಲಪ್ಪುಳ್ಳಿ ಮುಂತಾದುವು ಹೊಸ ಹಾಟ್ ಸ್ಪಾಟ್‌ಗಳು. ಹದಿಮೂರು ಪ್ರದೇಶಗಳನ್ನು ಹಾಟ್ ಸ್ಪಾಟ್‌ನಿಂದ ಹೊರಗಿಡಲಾಗಿದೆ. ಒಟ್ಟು 124 ಹಾಟ್ ಸ್ಪಾಟ್‌ಗಳಿವೆ.

date