Skip to main content

ಕೇರಳದಲ್ಲಿ 65 ಜನರಿಗೆ ಕೋವಿಡ್ -19

 

ಚಿಕಿತ್ಸೆಯಲ್ಲಿರುವವರು 1238 ಮಂದಿ; 57 ಜನರು ಗುಣಮುಖರಾದರು

ಕೇರಳದಲ್ಲಿ ಬುಧವಾರ 65 ಜನರಿಗೆ ಕೋವಿಡ್ -19 ದೃಡಪಡಿಸಿರುವುದಾಗಿ ಆರೋಗ್ಯ ಸಚಿವೆ ಕೆ.ಕೆ. ಶೈಲಾಜಾ ಟೀಚರ್ ತಿಳಿಸಿದರು. ಕೋಳಿಕೋಡ್‌ ಜಿಲ್ಲೆಯಿಂದ 10 ಮಂದಿಗೆ, ತ್ರಿಶೂರ್‌ ಜಿಲ್ಲೆಯಿಂದ 9 ಮಂದಿಗೆ (ಒಬ್ಬರು ಮೃತಪಟ್ಟರು) ಮಲಪ್ಪುರಂ ಜಿಲ್ಲೆಯಿಂದ 7 ಮಂದಿಗೆ, ತಿರುವನಂತಪುರಂ, ಪಾಲಕ್ಕಾಡ್‌ ಜಿಲ್ಲೆಗಳಿಂದ ತಲಾ  6 ಮಂದಿಗೆ, ಕೊಲ್ಲಂ, ಇಡುಕ್ಕಿ, ಎರ್ನಾಕುಲಂ, ವಯನಾಡ್, ಕಣ್ಣೂರು ಜಿಲ್ಲೆಗಳಿಂದ ತಲಾ ನಾಲ್ವರಿಗೆ, ಪಥನಮತ್ತಿಟ್ಟ, ಕೋಟಯಂ ಜಿಲ್ಲೆಗಳಿಂದ ತಲಾ ಮೂವರಿಗೆ,ಆಲಪ್ಪುಳ ಜಿಲ್ಲೆಯಿಂದ ಒಬ್ಬ ವ್ಯಕ್ತಿಗೆ ಈ ರೋಗ ದೃಡಪಡಿಸಿರುವುದು. ಈ ಪೈಕಿ 34 ಮಂದಿ ವಿದೇಶಗಳಿಂದ  (ಯು.ಎ.ಇ -22, ಕುವೈತ್ -4, ಒಮಾನ್ -3, ನೈಜೀರಿಯಾ -2, ರಷ್ಯಾ -2, ಸೌದಿ ಅರೇಬಿಯಾ -1) ಮತ್ತು 25 ಮಂದಿ ಇತರ ರಾಜ್ಯಗಳಿಂದ (ಮಹಾರಾಷ್ಟ್ರ -9, ತಮಿಳುನಾಡು -9, ದೆಹಲಿ 3, ಕರ್ನಾಟಕ 1, ಅರುಣಾಚಲ ಪ್ರದೇಶ 1, ಗುಜರಾತ್ 1, ಉತ್ತರ ಪ್ರದೇಶ 1) ಬಂದವರು.  ಐವರಿಗೆ ಸಂಪರ್ಕದ ಮೂಲಕ ಸೋಂಕು ತಗುಲಿರುವುದು. ತ್ರಿಶೂರ್, ತಿರುವನಂತಪುರಂ ಜಿಲ್ಲೆಯ ತಲಾ ಇಬ್ಬರಿಗೆ ಮತ್ತು ಕೋಳಿಕೋಡ್ ಜಿಲ್ಲೆಯ ಒಬ್ಬರಿಗೆ ಸಂಪರ್ಕದ ಮೂಲಕ ಸೋಂಕು ತಗುಲಿರುವುದು.

ಜೂನ್ 7 ರಂದು ತ್ರಿಶೂರ್ ಜಿಲ್ಲೆಯಲ್ಲಿ ನಿಧನರಾದ ಕುಮಾರನ್ (87) ಅವರ ಮಾದರಿ ಪರೀಕ್ಷೆಯಲ್ಲಿ ಕೋವಿಡ್ ಖಚಿತಪಡಿಸಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಕೋವಿಡ್‌ನಿಂದ ಸಾವನ್ನಪ್ಪಿದವರ ಸಂಖ್ಯೆ 17 ಕ್ಕೆ ಏರಿದೆ.

ರೋಗ ಪತ್ತೆಯಾಗಿ ಚಿಕಿತ್ಸೆಯಲ್ಲಿದ್ದ 57 ಜನರ ತಪಾಸಣಾ, ಫಲಿತಾಂಶ ನಕಾರಾತ್ಮಕವಾಗಿವೆ. ಕಣ್ಣೂರು ಜಿಲ್ಲೆಯಿಂದ 13 ಜನರ, ಕಾಸರಗೋಡು ಜಿಲ್ಲೆಯಿಂದ 11 ಜನರ, ಆಲಪ್ಪುಳ ಜಿಲ್ಲೆಯಿಂದ 7 ಜನರ, ಪಥನಮತ್ತಿಟ್ಟ ,ವಯನಾಡ್‌ಜಿಲ್ಲೆಗಳಿಂದ ತಲಾ 6 ಜನರ, ಕೊಲ್ಲಂ ಜಿಲ್ಲೆಯಿಂದ ನಾಲ್ವರ, ತಿರುವನಂತಪುರಂ ಮತ್ತು ಕೋಳಿಕೋಡ್‌ ಜಿಲ್ಲೆಗಳಿಂದ ತಲಾ ಮೂವರ, ಕೋಟಯಂ,ಎರ್ನಾಕುಲಂ ಜಿಲ್ಲೆಗಳಿಂದ ತಲಾ ಇಬ್ಬರ ತಪಾಸಣಾ ಫಲಿತಾಂಶ ನಕಾರಾತ್ಮಕವಾಗಿರುವುದು. ಈವರೆಗೆ 1238 ಜನರಿಗೆ ಈ ರೋಗ ಪತ್ತೆಯಾಗಿದ್ದು ಇನ್ನು ಚಿಕಿತ್ಸೆ ಪಡೆಯುತ್ತಿದ್ದಾರೆ.  ಈವರೆಗೆ 905 ಜನರು ಕೋವಿಡ್‌ನಿಂದ ಗುಣಮುಖರಾಗಿದ್ದಾರೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 2,10,592 ಜನರು ನಿರೀಕ್ಷಣೆಯಲ್ಲಿದ್ದಾರೆ. ಈ ಪೈಕಿ 2,08,748 ಜನರು ಮನೆ / ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ನಲ್ಲಿ ಮತ್ತು 1844 ಜನರು ಆಸ್ಪತ್ರೆಗಳಲ್ಲಿ ನಿರೀಕ್ಷಣೆಯಲ್ಲಿರುವರು. ಇಂದು 206 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಳೆದ 24 ಗಂಟೆಗಳಲ್ಲಿ 4689 ಮಾದರಿಗಳನ್ನು ಪರಿಶೀಲಿಸಲಾಗಿದೆ. ಇಲ್ಲಿಯವರೆಗೆ, 98,304 ವ್ಯಕ್ತಿಗಳ (ಓಗ್ಮೆಂಟೆಡ್ ಮಾದರಿ ಸೇರಿದಂತೆ) ಮಾದರಿಯನ್ನು ಪರಿಶೀಲನೆಗಾಗಿ ಕಳುಹಿಸಲಾಗಿದೆ. ಇದರಲ್ಲಿ ಲಭ್ಯವಾದ 93,475 ಮಾದರಿಗಳ,ತಪಾಸಣಾ ಫಲಿತಾಂಶ ಋಣಾತ್ಮಕವಾಗಿವೆ. ಇದಲ್ಲದೆ, ಸೆಂಟಿನೆಲ್ ಸರ್ವೈಲೆನ್ಸ್ ನ ಭಾಗವಾಗಿ ಆರೋಗ್ಯ ಕಾರ್ಯಕರ್ತರು, ಅತಿಥಿ ಕೆಲಸಗಾರರು ಮತ್ತು ಸಾಮಾಜಿಕ ಸಂಪರ್ಕ ಹೆಚ್ಚಾಗಿರುವ ವ್ಯಕ್ತಿಗಳ ಆದ್ಯತೆಯ ಗುಂಪುಗಳಿಂದ 24,508 ಮಾದರಿಗಳನ್ನು ಸಂಗ್ರಹಿಸಿರುವುದರಲ್ಲಿ 22,950 ಮಾದರಿಗಳು ನಕಾರಾತ್ಮಕವಾಗಿವೆ. 6,364 ಪುನರಾವರ್ತಿತ ಮಾದರಿಗಳು ಸೇರಿದಂತೆ ಒಟ್ಟು 1,31,006 ಮಾದರಿಗಳನ್ನು ಪರೀಕ್ಷಿಸಲಾಯಿತು.ಹೊಸದಾಗಿ

ಐದು ಹಾಟ್ ಸ್ಪಾಟ್‌ಗಳಿವೆ.  ಮಲಪ್ಪುರಂ ಜಿಲ್ಲೆಯ ಅಥವಾನಾಡ್, ಕೋಟಯಂ ಜಿಲ್ಲೆಯ ಅಯಮನಂ,ಮಡಪಲ್ಲಿ, ಇಡಯಾರಿಕ್ಕಪುಳ ಮತ್ತು ಕಾಸರಗೋಡು ಜಿಲ್ಲೆಯ ವಲಿಯಪರಂಬ ಹೊಸ ಹಾಟ್ ಸ್ಪಾಟ್‌ಗಳು.ಪ್ರಸ್ತುತ ಒಟ್ಟು163 ಹಾಟ್ ಸ್ಪಾಟ್‌ಗಳಿವೆ.

date