Skip to main content

ಕೇರಳದಲ್ಲಿ ಶನಿವಾರ 85 ಜನರಿಗೆ ಕೋವಿಡ್ -19; 46 ಜನರು ಗುಣಮುಖರಾದರು

 

 

ಚಿಕಿತ್ಸೆಯಲ್ಲಿರುವವರು 1342 ಮಂದಿ; ಎರಡು ಹೊಸ ಹಾಟ್ ಸ್ಪಾಟ್‌ಗಳು

 

ಕೇರಳದಲ್ಲಿ ಶನಿವಾರ 85 ಜನರಿಗೆ ಕೋವಿಡ್ - 19  ದೃಡಪಡಿಸಿರುವುದಾಗಿ ಆರೋಗ್ಯ ಸಚಿವೆ ಕೆ.ಕೆ. ಶೈಲಾಜಾ ಟೀಚರ್ ತಿಳಿಸಿದರು. ಮಲಪ್ಪುರಂ ಜಿಲ್ಲೆಯಿಂದ 15 ಮಂದಿಗೆ, ಕಣ್ಣೂರು ಜಿಲ್ಲೆಯಿಂದ 14 ಮಂದಿಗೆ , ಕೋಳಿಕೋಡ್‌ ಜಿಲ್ಲೆಯಿಂದ 12 ಮಂದಿಗೆ, ಅಲಪ್ಪುಳ ,ಕಾಸರಗೋಡು ಜಿಲ್ಲೆಗಳಿಂದ ತಲಾ 9 ಮಂದಿಗೆ, ಪಾಲಕ್ಕಾಡ್‌ ಜಿಲ್ಲೆಯಿಂದ 8 ಮಂದಿಗೆ, ಎರ್ನಾಕುಲಂ ಜಿಲ್ಲೆಯಿಂದ 7 ಮಂದಿಗೆ, ಇಡುಕ್ಕಿ ಮತ್ತು ತ್ರಿಶೂರ್‌ ಜಿಲ್ಲೆಯಿಂದ ತಲಾ 4 ಮಂದಿಗೆ, ಪಥನಮತ್ತಟ್ಟ, ಕೋಟಯಂ, ವಯನಾಡ್ ಜಿಲ್ಲೆಗಳಿಂದ ತಲಾ ಒಬ್ಬೊಬ್ಬರಿಗೆ ರೋಗ ದೃಡಪಡಿಸಿರುವುದು. ಈ ಪೈಕಿ 53 ಮಂದಿ ವಿದೇಶಗಳಿಂದ (ಕುವೈತ್- 21, ಯು.ಎ.ಇ- 16, ಸೌದಿ ಅರೇಬಿಯಾ- 7, ಒಮಾನ್-4, ನೈಜೀರಿಯಾ -3, ರಷ್ಯಾ -2) ಮತ್ತು 18 ಮಂದಿ ಇತರ ರಾಜ್ಯಗಳಿಂದ (ಮಹಾರಾಷ್ಟ್ರ -6, ತಮಿಳುನಾಡು- 5,ದೆಹಲಿ- 4, ರಾಜಸ್ಥಾನ- 1, ಪಶ್ಚಿಮ ಬಂಗಾಳ -1 ಮತ್ತು ಉತ್ತರ ಪ್ರದೇಶ-1) ಬಂದವರು. 10 ಜನರಿಗೆ ಸಂಪರ್ಕದ ಮೂಲಕ ಸೋಂಕು ತಗುಲಿರುವುದು. ಮಲಪ್ಪುರಂ ಮತ್ತು ಕಣ್ಣೂರು ಜಿಲ್ಲೆಗಳ ನಾಲ್ಕು ಜನರಿಗೆ ಮತ್ತು ಕೋಳಿಕೋಡ್ , ಇಡುಕ್ಕಿ ಜಿಲ್ಲೆಗಳಿಂದ ತಲಾ ಒಬ್ಬೊಬ್ಬರಿಗೆ ಸಂಪರ್ಕದಿಂದ ರೋಗ ತಗುಲಿರುವುದು. 4 ಆರೋಗ್ಯ ಕಾರ್ಯಕರ್ತರಿಗೂ ಸೋಂಕು ತಗುಲಿದೆ. ಕೋಳಿಕೋಡ್ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿನ ಮೂರು ಆರೋಗ್ಯ ಕಾರ್ಯಕರ್ತರಿಗೆ ರೋಗ ತಗುಲಿರುವುದು.

 

ರೋಗ ಪತ್ತೆಯಾಗಿ ಚಿಕಿತ್ಸೆಯಲ್ಲಿದ್ದ 46 ಜನರ ತಪಾಸಣಾ ಫಲಿತಾಂಶ ನಕಾರಾತ್ಮಕವಾಗಿವೆ. ಕಣ್ಣೂರು ಜಿಲ್ಲೆಯಿಂದ 10 ಜನರ, ಪಾಲಕ್ಕಾಡ್ ಜಿಲ್ಲೆಯಿಂದ 9 ಜನರ, ಮಲಪ್ಪುರಂ ಜಿಲ್ಲೆಯಿಂದ 7 ಜನರ, ಕಾಸರ್‌ಗೋಡ್ ಜಿಲ್ಲೆಯಿಂದ 6 ಜನರ, ತಿರುವನಂತಪುರಂ ಜಿಲ್ಲೆಯಿಂದ 4 ಜನರ, ತ್ರಿಶೂರ್ ಜಿಲ್ಲೆಯಿಂದ 3 ಜನರ, ಕೋಟಯಂ ಮತ್ತು ಕೋಳಿಕೋಡ್ ಜಿಲ್ಲೆಗಳಿಂದ ತಲಾ 2 ಜನರ, ಪಥನಮತ್ತಿಟ್ಟ, ಇಡುಕ್ಕಿ,ವಯನಾಡ್ ಜಿಲ್ಲೆಗಳಿಂದ ತಲಾ ಒಬ್ಬೊಬ್ಬರ ತಪಾಸಣಾ ಫಲಿತಾಂಶ ನಕಾರಾತ್ಮಕವಾಗಿರುವುದು. ಈವರೆಗೆ 1342 ರೋಗಿಗಳಿಗೆ ಈ ರೋಗ ಪತ್ತೆಯಾಗಿದ್ದು ಇನ್ನು ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 1045 ಜನರು ಕೋವಿಡ್‌ನಿಂದ ಗುಣಮುಖರಾಗಿದ್ದಾರೆ.

 

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 2,35,418 ಜನರು ನಿರೀಕ್ಷಣೆಯಲ್ಲಿದ್ದಾರೆ. ಈ ಪೈಕಿ 2,33,429 ಜನರು ಮನೆ / ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ನಲ್ಲಿ ಮತ್ತು 1989 ಜನರು ಆಸ್ಪತ್ರೆಗಳಲ್ಲಿ ನಿರೀಕ್ಷಣೆಯಲ್ಲಿರುವರು. ಒಟ್ಟು 223 ಜನರನ್ನು ಶನಿವಾರ ಆಸ್ಪತ್ರೆಗೆ ದಾಖಲಿಸಲಾಗಿದೆ.

 

ಕಳೆದ 24 ಗಂಟೆಗಳಲ್ಲಿ 5170 ಮಾದರಿಗಳನ್ನು ಪರಿಶೀಲಿಸಲಾಗಿದೆ. ಇಲ್ಲಿಯವರೆಗೆ, 1,09,729 ವ್ಯಕ್ತಿಗಳ (ಖಾಸಗಿ ಲ್ಯಾಬ್‌ನಲ್ಲಿನ ಮಾದರಿಯನ್ನು ಒಳಗೊಂಡಂತೆ) ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಈ ಪೈಕಿ 3223 ಮಾದರಿಗಳ ಫಲಿತಾಂಶ ಬರಬೇಕಾಗಿದೆ. ಇದಲ್ಲದೆ, ಸೆಂಟಿನೆಲ್ ಸರ್ವೈಲೆನ್ಸ್ ನ ಭಾಗವಾಗಿ, ಆರೋಗ್ಯ ಕಾರ್ಯಕರ್ತರು, ಅತಿಥಿ ಕಾರ್ಯಕರ್ತರು, ಸಾಮಾಜಿಕ ಸಂಪರ್ಕ ಹೆಚ್ಚಾಗಿರುವ ವ್ಯಕ್ತಿಗಳ ಆದ್ಯತೆಯ ಗುಂಪುಗಳಿಂದ 29,790 ಮಾದರಿಗಳನ್ನು ಸಂಗ್ರಹಿಸಿರುವುದರಲ್ಲಿ  27,899 ಮಾದರಿಗಳು ನಕಾರಾತ್ಮಕವಾಗಿವೆ.ರುಟೀನ್ ಮಾದರಿ, ವರ್ಧಿತ ಮಾದರಿ, ಸೆಂಟಿನೆಲ್ ಮಾದರಿ, ಪೂಲ್ಡ್ ಸೆಂಟಿನೆಲ್, ಸಿ.ಬಿ. ನ್ಯಾಟ್ ಮತ್ತು ಟ್ರೂ ನ್ಯಾಟ್ ಸೇರಿದಂತೆ ಒಟ್ಟು 1,44,842 ಮಾದರಿಗಳನ್ನು ಪರಿಶೀಲನೆಗಾಗಿ ಕಳುಹಿಸಲಾಗಿದೆ.

 

ಶನಿವಾರ 2 ಹೊಸ ಹಾಟ್ ಸ್ಪಾಟ್‌ಗಳಿವೆ. ಕಣ್ಣೂರು ಜಿಲ್ಲೆಯ ನಡುವಿಲ್, ಪಾಪ್ಪಿನಿಸೇರಿ ಹೊಸ ಹಾಟ್ ಸ್ಪಾಟ್‌ಗಳು.

 

ಹದಿಮೂರು ಪ್ರದೇಶಗಳನ್ನು ಹಾಟ್ ಸ್ಪಾಟ್‌ನಿಂದ ಹೊರಗಿಡಲಾಗಿದೆ. ಪಾಲಕ್ಕಾಡ್ ಜಿಲ್ಲೆಯ ಒಟ್ಟಪಾಲಂ ಪುರಸಭೆ, ಮಲಂಪುಳ, ಮರುತರೋಡ್, ನಾಗಲಶೇರಿ, ಪಾಲ್ಪುಲ್ಲಿ, ಕಡಂಬಳಿಪ್ಪುರಂ, ಕೊಟ್ಟಾಯಿ, ಕಣ್ಣೂರು ಜಿಲ್ಲೆಯ, ಮಾಲೂರು, ಪೆರಲಶೇರಿ, ಪಿಣರಾಯಿ, ಶ್ರೀಕಂಡಪುರಂ, ತಲಶೇರಿ ಪುರಸಭೆ ಮತ್ತು ಕಾಸರಗೋಡು ಜಿಲ್ಲೆಯ ಈಸ್ಟ್‌ ಎಲೇರಿ ಮುಂತಾದುವು ಹೊರಗಿಡಲಾದ ಹಾಟ್ ಸ್ಪಾಟ್‌ಗಳು. ಪ್ರಸ್ತುತ ಒಟ್ಟು 117 ಹಾಟ್ ಸ್ಪಾಟ್‌ಗಳಿವೆ.

date