Skip to main content

ಕೇರಳದಲ್ಲಿ ಶನಿವಾರ 127 ಜನರಿಗೆ ಕೋವಿಡ್ -19; 57 ಜನರು ಗುಣಮುಖರಾದರು

 

ಚಿಕಿತ್ಸೆಯಲ್ಲಿರುವವರು 1450 ಜನರು

 

 

ಕೇರಳದಲ್ಲಿ ಇಂದು 127 ಜನರಿಗೆ ಕೋವಿಡ್ -19 ದೃಡಪಡಿಸಿರುವುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು. ಕೊಲ್ಲಂ ಜಿಲ್ಲೆಯಿಂದ 24 ಮಂದಿಗೆ, ಪಾಲಕ್ಕಾಡ್‌ ಜಿಲ್ಲೆಯಿಂದ 23 ಮಂದಿಗೆ, ಪಥನಮತ್ತಟ್ಟ ಜಿಲ್ಲೆಯಿಂದ 17 ಮಂದಿಗೆ,

ಕೋಳಿಕೋಡ್‌ ಜಿಲ್ಲೆಯಿಂದ 12 ಮಂದಿಗೆ, ಕೋಟಯಂ ಜಿಲ್ಲೆಯಿಂದ 11 ಮಂದಿಗೆ, ಕಾಸರ್‌ಗೋಡ್‌ ಜಿಲ್ಲೆಯಿಂದ 7 ಮಂದಿಗೆ, ತ್ರಿಶೂರ್‌ ಜಿಲ್ಲೆಯಿಂದ 6 ಜನರಿಗೆ, ತಿರುವನಂತಪುರಂ, ಮಲಪ್ಪುರಂ, ವಯನಾಡ್ ಜಿಲ್ಲೆಗಳಿಂದ ತಲಾ 5 ಮಂದಿಗೆ, ಆಲಪ್ಪುಳ ಮತ್ತು ಕಣ್ಣೂರು ಜಿಲ್ಲೆಗಳಿಂದ ತಲಾ ನಾಲ್ವರಿಗೆ, ಎರ್ನಾಕುಲಂ ಜಿಲ್ಲೆಯಿಂದ ಮೂವರಿಗೆ, ಇಡುಕ್ಕಿ ಜಿಲ್ಲೆಯಿಂದ ಒಬ್ಬರಿಗೆ ರೋಗ ದೃಡಪಡಿಸಿರುವುದು.ರೋಗ ದೃಡಪಡಿಸಿದವರಲ್ಲಿ

87 ಜನರು ವಿದೇಶಗಳಿಗೆ (ಕುವೈತ್ -42, ಸೌದಿ ಅರೇಬಿಯಾ-16, ಯು.ಎ.ಇ -15, ಕತಾರ್ 8, ಬಹ್ರೇನ್ -3, ಓಮನ್ -1, ನೈಜೀರಿಯಾ -1 ಮತ್ತು ಆಫ್ರಿಕಾ -1) ಮತ್ತು 36 ಜನರು ಇತರ ರಾಜ್ಯಗಳಿಂದ (ಮಹಾರಾಷ್ಟ್ರ -15, ದೆಹಲಿ -9, ತಮಿಳುನಾಡು -5, ಕರ್ನಾಟಕ -2, ಉತ್ತರ ಪ್ರದೇಶ -2, ರಾಜಸ್ಥಾನ -1, ಮಧ್ಯಪ್ರದೇಶ -1,ಗುಜರಾತ್ -1) ಬಂದವರು. 3 ಜನರು ಸಂಪರ್ಕದ ಮೂಲಕ ಸೋಂಕಿಗೆ ಒಳಗಾಗಿದ್ದಾರೆ. ತಿರುವನಂತಪುರಂ, ಕೊಲ್ಲಂ ಮತ್ತು ಎರ್ನಾಕುಲಂ ಜಿಲ್ಲೆಯಲ್ಲಿ ತಲಾ ಒಬ್ಬೊಬ್ಬರಿಗೆ ಸಂಪರ್ಕದ ಮೂಲಕ ರೋಗ ದೃಡಪಡಿಸಿರುವುದು.ಇದಲ್ಲದೆ, ಪಥನಮತ್ತಿಟ್ಟ ಜಿಲ್ಲೆಯ ಒಂದು ಆರೋಗ್ಯ ಕಾರ್ಯಕರ್ತೆಗೂ ಈ ರೋಗ ಪತ್ತೆಯಾಗಿದೆ.

ರೋಗ ಪತ್ತೆಯಾಗಿ ಚಿಕಿತ್ಸೆಯಲ್ಲಿದ್ದ 57 ಜನರ ತಪಾಸಣಾ ಫಲಿತಾಂಶ ನಕಾರಾತ್ಮಕವಾಗಿವೆ. ಪಥನಮತ್ತಿಟ್ಟ ಮತ್ತು ಆಲಪ್ಪುಳ ಜಿಲ್ಲೆಗಳಿಂದ ತಲಾ 12 ಜನರ, ಕೋಳಿಕೋಡ್ ಜಿಲ್ಲೆಯಿಂದ 11 ಜನರ, ಪಾಲಕ್ಕಾಡ್ ಜಿಲ್ಲೆಯಿಂದ 10 ಜನರ, ತಿರುವನಂತಪುರಂ, ಕೊಲ್ಲಂ, ವಯನಾಡ್, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಿಂದ ತಲಾ ಇಬ್ಬರ,ಎರ್ನಾಕುಲಂ, ಮಲಪ್ಪುರಂ ಜಿಲ್ಲೆಗಳಿಂದ ಒಬ್ಬೊಬ್ಬರ ತಪಾಸಣಾ ಫಲಿತಾಂಶ ಋಣಾತ್ಮಕವಾಗಿರುವುದು. ಈವರೆಗೆ 1450 ಜನರಿಗೆ ಈ ರೋಗ ಪತ್ತೆಯಾಗಿದ್ದು ಇನ್ನು ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 1,566 ಜನರು ಕೋವಿಡ್‌ನಿಂದ ಗುಣಮುಖರಾಗಿದ್ದಾರೆ.

ಪ್ರಸ್ತುತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 1,39,342 ಜನರು ನಿರೀಕ್ಷಣೆಯಲ್ಲಿದ್ದಾರೆ. ಈ ಪೈಕಿ 1,37,306 ಜನರು ಮನೆ / ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ನಲ್ಲಿ ಮತ್ತು 2036 ಜನರು ಆಸ್ಪತ್ರೆಗಳಲ್ಲಿ ನಿರೀಕ್ಷಣೆಯಲ್ಲಿರುವರು. 288 ಜನರನ್ನು ಶನಿವಾರ ಆಸ್ಪತ್ರೆಗೆ ದಾಖಲಿಸಲಾಗಿದೆ.24 ಗಂಟೆಗಳಲ್ಲಿ ಒಟ್ಟು 4817 ಮಾದರಿಗಳನ್ನು  ಪರಿಶೀಲಿಸಲಾಗಿದೆ. ಇಲ್ಲಿಯವರೆಗೆ, 1,33,946 ವ್ಯಕ್ತಿಗಳ (ಖಾಸಗಿ ಲ್ಯಾಬ್‌ನಲ್ಲಿನ ಮಾದರಿಯನ್ನು ಒಳಗೊಂಡಂತೆ) ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಈ ಪೈಕಿ 3193 ಮಾದರಿಗಳ ತಪಾಸಣಾ ಫಲಿತಾಂಶ ಬರಬೇಕಾಗಿದೆ. ಇದಲ್ಲದೆ, ಆದ್ಯತೆಯ ಗುಂಪುಗಳಿಂದ  37,136 ಮಾದರಿಗಳಲ್ಲಿ ಸಂಗ್ರಹಿಸಲಾದ 35,712 ಮಾದರಿಗಳು ಋಣಾತ್ಮಕವಾಗಿವೆ.ರುಟೀನ್ ಮಾದರಿ,ಓಗ್ಮೆಂಟೆಡ್ ಮಾದರಿ, ಸೆಂಟಿನೆಲ್ ಮಾದರಿ, ಪೂಲ್ಡ್ ಸೆಂಟಿನೆಲ್, ಸಿ.ಬಿ. ನ್ಯಾಟ್ ಮತ್ತು ಟ್ರೂ ನ್ಯಾಟ್ ಸೇರಿದಂತೆ ಒಟ್ಟು 1,78,559 ಮಾದರಿಗಳನ್ನು ಪರಿಶೀಲನೆಗಾಗಿ ಕಳುಹಿಸಲಾಗಿದೆ.

ಪ್ರಸ್ತುತ 111 ಹಾಟ್ ಸ್ಪಾಟ್‌ಗಳಿವೆ.

date