Skip to main content

ಕೇರಳದಲ್ಲಿ 121 ಜನರಿಗೆ ಕೂಡ ಕೋವಿಡ್ -19 ದೃಡಪಡಿಸಿದೆ

 

79 ಜನರು ಗುಣಮುಖರಾದರು;  ಚಿಕಿತ್ಸೆಯಲ್ಲಿರುವವರು 2057 ಜನರು

 

ಕೇರಳದಲ್ಲಿ ಸೋಮವಾರ 121 ಜನರಿಗೆ  ಕೋವಿಡ್ -19 ದೃಡಪಡಿಸಿರುವುದಾಗಿ  ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ತ್ರಿಶೂರ್ ನಲ್ಲಿ 26 ಮಂದಿಗೆ, ಕಣ್ಣೂರಿನಲ್ಲಿ 14 ಮಂದಿಗೆ, ಪಥನಮತ್ತಿಟ್ಟ, ಮಲಪ್ಪುರಂ ಜಿಲ್ಲೆಯಲ್ಲಿ ತಲಾ 13 ಮಂದಿಗೆ, ಪಾಲಕ್ಕಾಡ್ ಜಿಲ್ಲೆಯ 12 ಮಂದಿಗೆ, ಕೊಲ್ಲಂನ 11 ಮಂದಿಗೆ, ಕೋಳಿಕೋಡ್ ನಲ್ಲಿ 9 ಮಂದಿಗೆ, ಆಲಪ್ಪುಳ, ಇಡುಕ್ಕಿ ಮತ್ತು ಎರ್ನಾಕುಲಂ ಜಿಲ್ಲೆಗಳ ತಲಾ 5 ಮಂದಿಗೆ, ತಿರುವನಂತಪುರಂ, ಕಾಸರಗೋಡು ಜಿಲ್ಲೆಗಳ ತಲಾ  4 ಮಂದಿಗೆ ರೋಗ ದೃಡಪಡಿಸಿರುವುದು.

ರೋಗನಿರ್ಣಯ ಮಾಡಿದವರಲ್ಲಿ 78 ಮಂದಿ ವಿದೇಶಗಳಿಂದ ಮತ್ತು 26 ಮಂದಿ ಇತರ ರಾಜ್ಯಗಳಿಂದ ಬಂದವರು. ಕುವೈತ್ - 24, ಸೌದಿ ಅರೇಬಿಯಾ - 14, ಯು.ಎ.ಇ -13, ಕತಾರ್ 13, ಒಮಾನ್- 7, ಬಹ್ರೇನ್- 3, ನೈಜೀರಿಯಾ- 2, ಮಲೇಷ್ಯಾ- 1, ರಷ್ಯಾ -1  ಹೀಗೆ ಇತರ ದೇಶಗಳಿಂದ ಬಂದವರು. ತಮಿಳುನಾಡು -10, ಕರ್ನಾಟಕ -6, ದೆಹಲಿ -5, ಮಹಾರಾಷ್ಟ್ರ -4 ಮತ್ತು ಹರಿಯಾಣ -1 ಹೀಗೆ ಇತರ ರಾಜ್ಯಗಳಿಂದ ಬಂದವರು.5 ಜನರಿಗೆ ಸಂಪರ್ಕದ ಮೂಲಕ ರೋಗ ದೃಡಪಡಿಸಿರುವುದು. ಎರ್ನಾಕುಲಂ ಜಿಲ್ಲೆಯಲ್ಲಿ ಇಬ್ಬರಿಗೆ, ಕೊಲ್ಲಂ, ಇಡುಕ್ಕಿ ಮತ್ತು ಪಾಲಕ್ಕಾಡ್ ಜಿಲ್ಲೆಗಳಲ್ಲಿ ತಲಾ ಒಬ್ಬೊಬ್ಬರಿಗೆ ಸಂಪರ್ಕದ ಮೂಲಕ ಸೋಂಕು ತಗುಲಿರುವುದು. ತ್ರಿಶೂರ್ ಜಿಲ್ಲೆಯ ಎರಡು ,ಎರ್ನಾಕುಲಂನ ಒಬ್ಬ  ಆರೋಗ್ಯ ಕಾರ್ಯಕರ್ತರಿಗೂ, ಕಣ್ಣೂರು ಜಿಲ್ಲೆಯ 9 ಸಿ.ಐ.ಎಸ್.ಎಫ್‌ ನವರಿಗೂ ರೋಗ ತಗುಲಿತು.

24 ರಂದು ಮಲಪ್ಪುರಂ ಜಿಲ್ಲೆಯಲ್ಲಿ ನಿಧನರಾದ ತಮಿಳುನಾಡಿನ ಅರಜಾಕರ್ (55) ಅವರ ಪುನರ್ ತಪಾಸಣೆಯ ಫಲಿತಾಂಶ ಸಕಾರಾತ್ಮಕವಾಗಿವೆ.

ರೋಗ ಪತ್ತೆಯಾಗಿ ಚಿಕಿತ್ಸೆಯಲ್ಲಿದ್ದ 79 ಜನರ ತಪಾಸಣಾ ಫಲಿತಾಂಶ ಋಣಾತ್ಮಕವಾಗಿವೆ. ಕೊಲ್ಲಂನಲ್ಲಿ 18 ಜನರ, ಕಣ್ಣೂರಿನಲ್ಲಿ 13 ಜನರ, ಆಲಪ್ಪುಳ, ಕೋಟಯಂ ಮತ್ತು ಕೋಳಿಕೋಡ್ ಜಿಲ್ಲೆಗಳಲ್ಲಿ ತಲಾ 8 ಜನರ, ಮಲಪ್ಪುರಂನಲ್ಲಿ 7 ಜನರ, ತ್ರಿಶೂರ್ನಲ್ಲಿ 5 ಜನರ, ಎರ್ನಾಕುಲಂನಲ್ಲಿ 4 ಜನರ (ಆಲಪ್ಪುಳ -1, ಕೊಲ್ಲಂ -1), ತಿರುವನಂತಪುರಂ ಮತ್ತು ಪಾಲಕ್ಕಾಡ್ ಜಿಲ್ಲೆಗಳಲ್ಲಿ ತಲಾ ಮೂವರ, ಕಾಸರಗೋಡಿನ ಇಬ್ಬರ ತಪಾಸಣಾ ಫಲಿತಾಂಶ ನಕಾರಾತ್ಮಕವಾಗಿರುವುದು‌. ಸುಮಾರು 2057 ಜನರಿಗೆ ಈ ರೋಗ ಪತ್ತೆಯಾಗಿದ್ದು, ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ.  ಈವರೆಗೆ 2229 ಜನರು ಕೋವಿಡ್‌ನಿಂದ ಗುಣಮುಖರಾಗಿದ್ದಾರೆ.

ಪ್ರಸ್ತುತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 1,80,617 ಜನರು ನಿರೀಕ್ಷಣೆಯಲ್ಲಿದ್ದಾರೆ. ಈ ಪೈಕಿ 1,77,955 ಮಂದಿ ಮನೆ /ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ನಲ್ಲಿ ಮತ್ತು 2662 ಜನರು ಆಸ್ಪತ್ರೆಗಳಲ್ಲಿ ನಿರೀಕ್ಷಣದಲ್ಲಿರುವರು. 281 ಜನರನ್ನು ಸೋಮವಾರ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಸ್ತುತ ಒಟ್ಟು 118 ಹಾಟ್‌ಸ್ಪಾಟ್‌ಗಳಿವೆ.

ಮಲಪ್ಪುರಂನ ಪೊನ್ನಾನಿ ತಾಲ್ಲೂಕಿನಲ್ಲಿ ಸೋಮವಾರ ಸಂಜೆ 5 ರಿಂದ ಜುಲೈ ಆರರ ಮಧ್ಯರಾತ್ರಿಯವರೆಗೆ ಟ್ರಿಪಲ್ ಲಾಕ್ ಡೌನ್ ಘೋಷಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

date