Skip to main content

ಕೇರಳದಲ್ಲಿ ಶುಕ್ರವಾರ 111 ಜನರಿಗೆ ಕೋವಿಡ್ -19 ದೃಡಪಡಿಸಿದೆ

 

* ಚಿಕಿತ್ಸೆಯಲ್ಲಿರುವವರು 973 ಮಂದಿ

 

ಕೇರಳದಲ್ಲಿ ಶುಕ್ರವಾರ 111 ಜನರಿಗೆ ಕೋವಿಡ್ -19 ದೃಡಪಡಿಸಿರುವುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದರು. ಪಾಲಕ್ಕಾಡ್‌ ಜಿಲ್ಲೆಯಿಂದ 40‌ ಮಂದಿಗೆ, ಮಲಪ್ಪುರಂ ಜಿಲ್ಲೆಯಿಂದ 18 ಮಂದಿಗೆ, ಪಥನಮತ್ತಿಟ್ಟ ಜಿಲ್ಲೆಯಿಂದ 11 ಮಂದಿಗೆ, ಎರ್ನಾಕುಲಂ ಜಿಲ್ಲೆಯಿಂದ 10 ಮಂದಿಗೆ, ತ್ರಿಶೂರ್‌ ಜಿಲ್ಲೆಯಿಂದ 8 ಮಂದಿಗೆ, ತಿರುವನಂತಪುರಂ,ಆಲಪ್ಪುಳ ಜಿಲ್ಲೆಗಳಿದ  ತಲಾ 5 ಮಂದಿಗೆ, ಕೋಳಿಕೋಡ್‌ ಜಿಲ್ಲೆಯಿಂದ 4 ಮಂದಿಗೆ ಮತ್ತು ಇಡುಕ್ಕಿ, ವಯನಾಡ್ ಜಿಲ್ಲೆಗಳಿಂದ ತಲಾ ಮೂವರಿಗೆ, ಕೊಲ್ಲಂ ಜಿಲ್ಲೆಯಿಂದ ಇಬ್ಬರಿಗೆ, ಕೋಟಯಂ, ಕಾಸರಗೋಡು ಜಿಲ್ಲೆಗಳಿಂದ ತಲಾ ಒಬ್ಬೊಬ್ಬರಿಗೆ ರೋಗ ದೃಡಪಡಿಸಿರುವುದು. ಈ ಪೈಕಿ 50 ಮಂದಿ ವಿದೇಶದಿಂದ  (ಯು.ಎ.ಇ -22, ಕುವೈತ್ -15, ಸೌದಿ ಅರೇಬಿಯಾ -4, ತಜಿಕಿಸ್ತಾನ್ -4, ಒಮಾನ್ -2, ಇಟಲಿ -2, ಕತಾರ್ -1) ಮತ್ತು ಇತರ 48 ಮಂದಿ ರಾಜ್ಯಗಳು (ಮಹಾರಾಷ್ಟ್ರ -25, ತಮಿಳುನಾಡು-10, ದೆಹಲಿ -4, ಆಂಧ್ರಪ್ರದೇಶ -3, ಕರ್ನಾಟಕ -3, ಉತ್ತರ ಪ್ರದೇಶ -1, ಹರಿಯಾಣ -1, ಲಕ್ಷದ್ವೀಪ -1) ಬಂದವರು. 10 ಜನರಿಗೆ ಸಂಪರ್ಕದ ಮೂಲಕ  (ಪಾಲಕ್ಕಾಡ್ -5, ಮಲಪ್ಪುರಂ -3, ತ್ರಿಶೂರ್ -1 ಮತ್ತು ಕೋಳಿಕೋಡ್ -1)ಸೋಂಕು ತಗುಲಿರುವುದು. ಮೂವರು ಆರೋಗ್ಯ ಕಾರ್ಯಕರ್ತರಿಗೂ (ಮಲಪ್ಪುರಂ -2 ಮತ್ತು ತ್ರಿಶೂರ್ -1) ರೋಗವನ್ನು ಗುರುತಿಸಲಾಯಿತು.

ಚಿಕಿತ್ಸೆಯಲ್ಲಿದ್ದ 22 ಜನರ ತಪಾಸಣಾ ಫಲಿತಾಂಶ ನಕಾರಾತ್ಮಕವಾಗಿವೆ. ಕಾಸರಗೋಡು ಜಿಲ್ಲೆಯ ಏಳು ಜನರ ಮತ್ತು ತ್ರಿಶೂರ್ ಜಿಲ್ಲೆಯ 5 ಜನರ, ಆಲಪ್ಪುಳ ಜಿಲ್ಲೆಯ  ಮತ್ತು ಎರ್ನಾಕುಲಂ ಜಿಲ್ಲೆಯ ತಲಾ ನಾಲ್ವರ (ತ್ರಿಶೂರ್‌ನಿಂದ ಒಬ್ಬರು) ಮತ್ತು ತಿರುವನಂತಪುರಂ ಮತ್ತು ಕೋಳಿಕೋಡ್ (ಕಾಸರಗೋಡು ನಿವಾಸಿ) ಜಿಲ್ಲೆಗಳಿಂದ ತಲಾ ಒಬ್ಬೊಬ್ಬರ ತಪಾಸಣಾ ಫಲಿತಾಂಶ ಋಣಾತ್ಮಕವಾಗಿರುವುದು. ಪ್ರಸ್ತುತ 973 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. 712 ಜನರು ಕೋವಿಡ್‌ನಿಂದ ಗುಣಮುಖರಾದರು.

ವಿಮಾನ ನಿಲ್ದಾಣದ ಮೂಲಕ 38,945ಜನರು, ಸೀಪೋರ್ಟ್ ಮೂಲಕ 1621 ಜನರು, ಚೆಕ್ ಪೋಸ್ಟ್ ಮೂಲಕ 1,14,336 ಜನರು ಮತ್ತು ರೈಲು ಮೂಲಕ 15,356 ಜನರು ಸೇರಿದಂತೆ ಒಟ್ಟು 1,70,258 ಜನರು ರಾಜ್ಯಕ್ಕೆ ಆಗಮಿಸಿದ್ದಾರೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 1,77,106 ಜನರು ನಿರೀಕ್ಷಣೆಯಲ್ಲಿದ್ದಾರೆ. ಈ ಪೈಕಿ 1,75,561 ಜನರು ಮನೆ / ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ನಲ್ಲಿ ಮತ್ತು 1545 ಜನರು ಆಸ್ಪತ್ರೆಗಳಲ್ಲಿ ನಿರೀಕ್ಷಣೆಯಲ್ಲಿರುವರು. ಒಟ್ಟು 247 ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಳೆದ 24 ಗಂಟೆಗಳಲ್ಲಿ 3597 ಮಾದರಿಗಳನ್ನು ಪರಿಶೀಲನೆಗಾಗಿ ಕಳುಹಿಸಲಾಗಿದೆ. ಇಲ್ಲಿಯವರೆಗೆ, 79,074 ವ್ಯಕ್ತಿಗಳ ( ಓಗ್ಮೆಂಟೆಡ್ ಮಾದರಿ ಸೇರಿದಂತೆ) ಮಾದರಿಯನ್ನು ಪರಿಶೀಲನೆಗಾಗಿ ಕಳುಹಿಸಲಾಗಿದೆ. ಇದರಲ್ಲಿ ಲಭ್ಯವಾದ  74,769 ಮಾದರಿಗಳ,ತಪಾಸಣಾ ಫಲಿತಾಂಶಗಳು ಋಣಾತ್ಮಕವಾಗಿವೆ. ಇದಲ್ಲದೆ, ಸೆಂಟಿನೆಲ್ ಸರ್ವೈಲೆನ್ಸ್ ನ ಭಾಗವಾಗಿ, ಆರೋಗ್ಯ ಕಾರ್ಯಕರ್ತರು, ಅತಿಥಿ ಕಾರ್ಯಕರ್ತರು, ಸಾಮಾಜಿಕ ಸಂಪರ್ಕ ಹೆಚ್ಚಾಗಿರುವ ವ್ಯಕ್ತಿಗಳ ಆದ್ಯತೆಯ ಗುಂಪುಗಳಿಂದ ಒಟ್ಟು 19,650 ಮಾದರಿಗಳನ್ನು ಸಂಗ್ರಹಿಸಿರುವುದರಲ್ಲಿ 18,049 ಮಾದರಿಗಳು ನಕಾರಾತ್ಮಕವಾಗಿವೆ.

ಐದು ಹೊಸ ಹಾಟ್ ಸ್ಪಾಟ್‌ಗಳಿವೆ. ವಯನಾಡ್ ಜಿಲ್ಲೆಯ ಬಾಥೆರಿ ಪುರಸಭೆ, ಮೀನಂಗಡಿ, ತಾವಿಂಜಾಲ್, ಕೋಳಿಕೋಡ್ ಜಿಲ್ಲೆಯ ಮಾವೂರ್ ಮತ್ತು ಕಣ್ಣೂರು ಜಿಲ್ಲೆಯ ಮ್ಯಾಟೂಲ್ ಮುಂತಾದವು ಹೊಸ ಹಾಟ್ ಸ್ಪಾಟ್‌ಗಳು. ಪ್ರಸ್ತುತ 128 ಹಾಟ್ ಸ್ಪಾಟ್‌ಗಳಿವೆ.

date