ಕೇರಳದಲ್ಲಿ ಇಂದು 91 ಜನರಿಗೆ ಕೋವಿಡ್ -19 ದೃಡಪಡಿಸಿದೆ
ಚಿಕಿತ್ಸೆಯಲ್ಲಿರುವವರು 1174 ಮಂದಿ; 11 ಮಂದಿ ಗುಣಮುಖರಾದರು; ಈವರೆಗೆ ಗುಣಮುಖರಾದವರು 814
ಇಂದು 6 ಹೊಸ ಹಾಟ್ ಸ್ಪಾಟ್ಗಳು
ತಿರುವನಂತಪುರಂ: ಕೇರಳದಲ್ಲಿ ಇಂದು 91 ಜನರಿಗೆ ಕೋವಿಡ್ -19 ದೃಡಪಡಿಸಿರುವುದಾಗಿ ಆರೋಗ್ಯ ಸಚಿವೆ ಕೆ.ಕೆ. ಶೈಲಾಜಾ ಟೀಚರ್ ತಿಳಿಸಿದರು. ತ್ರಿಶೂರ್ ಜಿಲ್ಲೆಯಿಂದ 27 ಮಂದಿಗೆ, ಮಲಪ್ಪುರಂ ಜಿಲ್ಲೆಯಿಂದ 14 ಮಂದಿಗೆ, ಕೋಳಿಕೋಡ್ ಜಿಲ್ಲೆಯಿಂದ 13 ಮಂದಿಗೆ, ಕಾಸರ್ಗೋಡ್ ಜಿಲ್ಲೆಯಿಂದ 8 ಮಂದಿಗೆ, ಕೊಲ್ಲಂ, ಆಲಪ್ಪುಳ ಜಿಲ್ಲೆಗಳಿಂದ ತಲಾ 5 ಮಂದಿಗೆ, ಕಣ್ಣೂರು ಜಿಲ್ಲೆಯಿಂದ 4 ಮಂದಿಗೆ ಮತ್ತು ತಿರುವನಂತಪುರಂ, ಪಥನಮತ್ತಿಟ್ಟ, ಕೋಟಯಂ, ಎರ್ನಾಕುಲಂ ಜಿಲ್ಲೆಗಳಿಂದ ತಲಾ ಮೂವರಿಗೆ ವಯನಾಡ್ ಜಿಲ್ಲೆಯಿಂದ ಇಬ್ಬರಿಗೆ ಮತ್ತು ಪಾಲಕ್ಕಾಡ್ ಜಿಲ್ಲೆಯಿಂದ ಒಬ್ಬರಿಗೆ ರೋಗ ದೃಡಪಡಿಸಿರುವುದು. ಈ ಪೈಕಿ 73 ಮಂದಿ ವಿದೇಶಗಳಿಂದ (ಯು.ಎ.ಇ -42, ಕುವೈತ್ -15, ಒಮಾನ್ -5, ರಷ್ಯಾ -4, ನೈಜೀರಿಯಾ -3, ಸೌದಿ ಅರೇಬಿಯಾ -2, ಇಟಲಿ -1 ಮತ್ತು ಜೋರ್ಡಾನ್ -1) ಮತ್ತು 15 ಮಂದಿ ಇತರ ರಾಜ್ಯದಿಂದ (ಮಹಾರಾಷ್ಟ್ರ -6, ತಮಿಳುನಾಡು -6, ದೆಹಲಿ -2 ಮತ್ತು ಕರ್ನಾಟಕ -1) ಬಂದವರು. ತ್ರಿಶೂರ್ ಜಿಲ್ಲೆಯ ವ್ಯಕ್ತಿಯೊಬ್ಬರು ಸಂಪರ್ಕದಿಂದ ಸೋಂಕಿಗೆ ಒಳಗಾಗಿದ್ದಾರೆ. ತ್ರಿಶೂರ್ ಜಿಲ್ಲೆಯ ಇಬ್ಬರು ಆರೋಗ್ಯ ಕಾರ್ಯಕರ್ತರಿಗೂ ರೋಗ ಖಚಿತಪಡಿಸಲಾಗಿದೆ.
ರೋಗ ಪತ್ತೆಯಾಗಿ ತ್ರಿಶೂರ್ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆಯಲ್ಲಿದ್ದ ದಿನಿ ಚಾಕೊ (41) ಇಂದು ನಿಧನರಾದರು. ಮೇ 16 ರಂದು ಮಾಲ್ಡೀವ್ಸ್ಗೆನಿಂದ ಬಂದ ಅವರಿಗೆ ತೀವ್ರ ಮೂತ್ರಪಿಂಡ ವೈಫಲ್ಯ ಮತ್ತು ಉಸಿರಾಟದ ತೊಂದರೆ ಇತ್ತು. ಮೂತ್ರಪಿಂಡ ವೈಫಲ್ಯದಿಂದ ಹೆಮೋ ಡಯಾಲಿಸಿಸ್ ಮತ್ತು ಉಸಿರಾಟದ ಕೊರತೆಯಿಂದಾಗಿ ವೆಂಟಿಲೇಟರ್ನಲ್ಲಿದ್ದ ಇವರು ಇಂದು ಮಧ್ಯಾಹ್ನ 1 ಗಂಟೆಗೆ ಹೃದಯಾಘಾತದಿಂದ ನಿಧನರಾದರು. ಇದರೊಂದಿಗೆ ಒಟ್ಟು 16 ಜನರು ಕೋವಿಡ್ನಿಂದ ಸಾವನ್ನಪ್ಪಿದ್ದಾರೆ.
ಅದೇಸಮಯ, ರೋಗ ದೃಡಪಡಿಸಿ ಚಿಕಿತ್ಸೆಯಲ್ಲಿದ್ದ 11 ಜನರ ತಪಾಸಣಾ ಫಲಿತಾಂಶ ಋಣಾತ್ಮಕವಾಗಿವೆ. ಕಾಸರಗೋಡು ಜಿಲ್ಲೆಯ ಐವರ ಮತ್ತು ಪಾಲಕ್ಕಾಡ್, ವಯನಾಡ್, ಕಣ್ಣೂರು (ಕಾಸರಗೋಡು ನಿವಾಸಿಗಳು) ಜಿಲ್ಲೆಗಳಿಂದ ಇಬ್ಬರ ತಪಾಸಣಾ ಫಲಿತಾಂಶ ಋಣಾತ್ಮಕವಾಗಿರುವುದು. ಇದರೊಂದಿಗೆ 1174 ಜನರಿಗೆ ಈ ರೋಗ ಪತ್ತೆಯಾಗಿದ್ದು ಇನ್ನು ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 814 ಜನರು ಕೋವಿಡ್ನಿಂದ ಗುಣಮುಖರಾಗಿದ್ದಾರೆ.
ವಿಮಾನ ನಿಲ್ದಾಣದ ಮೂಲಕ 49,065 ಜನರು, ಸೀಪೋರ್ಟ್ ಮೂಲಕ 1621 ಜನರು, ಚೆಕ್ ಪೋಸ್ಟ್ ಮೂಲಕ 1,23,029 ಜನರು ಮತ್ತು ರೈಲು ಮೂಲಕ 19,648 ಜನರು ಸೇರಿದಂತೆ ಒಟ್ಟು 1,93,363 ಜನರು ರಾಜ್ಯಕ್ಕೆ ಆಗಮಿಸಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 1,97,078 ಜನರು ನಿರೀಕ್ಷಣೆಯಲ್ಲಿದ್ದಾರೆ. ಈ ಪೈಕಿ 1,95,307 ಮಂದಿ ಮನೆ / ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ನಲ್ಲಿ ಮತ್ತು 1771 ಮಂದಿ ಆಸ್ಪತ್ರೆಗಳಲ್ಲಿ ನಿರೀಕ್ಷಣದಲ್ಲಿರುವರು. ಒಟ್ಟು 211 ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ 3827 ಮಾದರಿಗಳನ್ನು ಪರಿಶೀಲನೆಗಾಗಿ ಕಳುಹಿಸಲಾಗಿದೆ. ಇಲ್ಲಿಯವರೆಗೆ, 85,676 ವ್ಯಕ್ತಿಗಳ ಮಾದರಿಗಳನ್ನು (ಓಗ್ಮೆಂಟೆಡ್ ಮಾದರಿ ಸೇರಿದಂತೆ) ಪರಿಶೀಲನೆಗಾಗಿ ಕಳುಹಿಸಲಾಗಿದೆ. ಇದರಲ್ಲಿ ಲಭ್ಯವಾದ 82,362 ಮಾದರಿಗಳ, ತಪಾಸಣಾ ಫಲಿತಾಂಶ ಋಣಾತ್ಮಕವಾಗಿವೆ. ಇದಲ್ಲದೆ, ಸೆಂಟಿನೆಲ್ ಸರ್ವೈಲೆನ್ಸ್ ನ ಭಾಗವಾಗಿ, ಆರೋಗ್ಯ ಕಾರ್ಯಕರ್ತರು, ಅತಿಥಿ ಕೆಲಸಗಾರರು, ಸಾಮಾಜಿಕ ಸಂಪರ್ಕ ಹೆಚ್ಚಾಗಿರುವ ವ್ಯಕ್ತಿಗಳ ಆದ್ಯತೆಯ ಗುಂಪುಗಳಿಂದ 22,357 ಮಾದರಿಗಳನ್ನು ಸಂಗ್ರಹಿಸಿರುವುದರಲ್ಲಿ 21,110 ಮಾದರಿಗಳು ಋಣಾತ್ಮಕವಾಗಿವೆ. 5,923 ಪುನರಾವರ್ತಿತ ಮಾದರಿ ಸೇರಿದಂತೆ ಒಟ್ಟು 1,13,956 ಮಾದರಿಗಳನ್ನು ಪರೀಕ್ಷಿಸಲಾಯಿತು.
ಇಂದು ಹೊಸದಾಗಿ 6 ಹಾಟ್ ಸ್ಪಾಟ್ಗಳಿವೆ.ಪಾಲಕ್ಕಾಡ್ ಜಿಲ್ಲೆಯ ಶೋರ್ನೂರ್, ಮಲಪ್ಪುರಂ ಜಿಲ್ಲೆಯ ಮುರುಕನಾಡು, ಕುರುವಾ, ಕಲ್ಪಕಂಚೇರಿ, ಎಡಪ್ಪಲ್ ಮತ್ತು ವಟ್ಟಂಕುಲಂ ಮುಂತಾದುವು ಹೊಸ ಹಾಟ್ ಸ್ಪಾಟ್ಗಳು.ಇದರೊಂದಿಗೆ ಪ್ರಸ್ತುತ, ಒಟ್ಟು 150 ಹಾಟ್ ಸ್ಪಾಟ್ಗಳಿವೆ.
- Log in to post comments