Skip to main content

ಭಾನುವಾರ ಕೇರಳದಲ್ಲಿ 107 ಜನರಿಗೆ ಕೋವಿಡ್ -19 ದೃಡಪಡಿಸಲಾಗಿದೆ, 41 ಜನರು ಗುಣಮುಖರಾದರು

 

6 ಹೊಸ ಹಾಟ್ ಸ್ಪಾಟ್‌ಗಳು

 

ಕೇರಳದಲ್ಲಿ ಭಾನುವಾರ 107 ಜನರಿಗೆ ಕೋವಿಡ್ -19  ದೃಡಪಡಿಸಿರುವುದಾಗಿ ಆರೋಗ್ಯ ಸಚಿವೆ ಕೆ. ಕೆ. ಶೈಲಾಜಾ ಟೀಚರ್ ತಿಳಿಸಿದರು. ಮಲಪ್ಪುರಂ ಜಿಲ್ಲೆಯಿಂದ 27 ಮಂದಿಗೆ, ತ್ರಿಶೂರ್‌ ಜಿಲ್ಲೆಯಿಂದ 26 ಮಂದಿಗೆ, ಪಥನಮತ್ತಿಟ್ಟ ಜಿಲ್ಲೆಯಿಂದ 13 ಮಂದಿಗೆ, ಕೊಲ್ಲಂ ಜಿಲ್ಲೆಯಿಂದ 9 ಮಂದಿಗೆ, ಆಲಪ್ಪುಳ ಜಿಲ್ಲೆಯಿಂದ 7 ಮಂದಿಗೆ, ಪಾಲಕ್ಕಾಡ್ ಮತ್ತು ಕೋಳಿಕೋಡ್‌ ಜಿಲ್ಲೆಗಳಿಂದ ತಲಾ 6 ಮಂದಿಗೆ, ತಿರುವನಂತಪುರಂ ಜಿಲ್ಲೆಯಿಂದ 4 ಮಂದಿಗೆ, ಕೋಟಯಂ ಮತ್ತು ಕಾಸರಗೋಡು ಜಿಲ್ಲೆಗಳಿಂದ ತಲಾ ಮೂವರಿಗೆ, ಕಣ್ಣೂರು ಜಿಲ್ಲೆಯಿಂದ ಇಬ್ಬರಿಗೆ ಮತ್ತು ಇಡುಕ್ಕಿ ಜಿಲ್ಲೆಯಿಂದ ಒಬ್ಬರಿಗೆ ರೋಗ ದೃಡಪಡಿಸಿರುವುದು. ಈ ಪೈಕಿ 71 ಮಂದಿ ವಿದೇಶಗಳಿಂದ  (ಯು.ಎ.ಇ -39, ಕುವೈತ್ -21, ಸೌದಿ ಅರೇಬಿಯಾ -4, ರಷ್ಯಾ -2, ತಜಕಿಸ್ತಾನ್ -2, ಕತಾರ್ -1, ಒಮಾನ್ -1, ಇಟಲಿ -1) ಮತ್ತು 28 ಮಂದಿ ಇತರ ರಾಜ್ಯಗಳಿಂದ ( ಮಹಾರಾಷ್ಟ್ರ -15, ತಮಿಳುನಾಡು- 7, ದೆಹಲಿ- 4, ಗುಜರಾತ್ -1 ಮತ್ತು ತೆಲಂಗಾಣ- 1)ಬಂದವರು. ಸಂಪರ್ಕದ ಮೂಲಕ 8 ಜನರಿಗೆ ಸೋಂಕು ತಗುಲಿತು. ತ್ರಿಶೂರ್‌ ಜಿಲ್ಲೆಯಿಂದ ಮೂವರಿಗೆ, ಮಲಪ್ಪುರಂ, ಪಾಲಕ್ಕಾಡ್ ಜಿಲ್ಲೆಗಳಿಂದ ತಲಾ ಇಬ್ಬರಿಗೆ  ಮತ್ತು ಕೊಲ್ಲಂ ಜಿಲ್ಲೆಯ ಒಬ್ಬರಿಗೆ ಸಂಪರ್ಕದ ಮೂಲಕ ಸೋಂಕು ತಗುಲಿರುವುದು.

 

ರೋಗ ದೃಡಪಡಿಸಿ   ಚಿಕಿತ್ಸೆಯಲ್ಲಿದ್ದ 41 ಜನರ ತಪಾಸಣಾ ಫಲಿತಾಂಶ ಋಣಾತ್ಮಕವಾಗಿವೆ. ತ್ರಿಶೂರ್‌ ಜಿಲ್ಲೆಯಿಂದ 14 ಜನರ (2 ಪಾಲಕ್ಕಾಡ್‌ ನಿವಾಸಿ ), ಕಾಸರ್‌ಗೋಡ್‌ ಜಿಲ್ಲೆಯಿಂದ 6 ಜನರ, ಪಾಲಕ್ಕಾಡ್ ಮತ್ತು ಕಣ್ಣೂರು ಜಿಲ್ಲೆಗಳಿಂದ ತಲಾ  ಐವರ, ಕೊಲ್ಲಂ ಮತ್ತು ಆಲಪ್ಪುಳ ಜಿಲ್ಲೆಗಳಿಂದ ತಲಾ ಮೂವರ, ತಿರುವನಂತಪುರಂ, ಪಥನಮತ್ತಿಟ್ಟ, ಕೋಟಯಂ, ಮಲಪ್ಪುರಂ ಮತ್ತು ಕೋಳಿಕೋಡ್ (ತ್ರಿಶೂರ್ ನಿವಾಸಿ)ಜಿಲ್ಲೆಗಳಿಂದ ತಲಾ ಒಬ್ಬೊಬ್ಬರ ತಪಾಸಣಾ ಫಲಿತಾಂಶ ನಕಾರಾತ್ಮಕವಾಗಿರುವುದು. ಇದರೊಂದಿಗೆ 1095 ಜನರಿಗೆ ರೋಗ ಪತ್ತೆಯಾಗಿ ಇನ್ನು ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 803 ಜನರು ಕೋವಿಡ್‌ನಿಂದ ಗುಣಮುಖರಾಗಿದ್ದಾರೆ.

 

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 1,91,481 ಜನರು ನಿರೀಕ್ಷಣೆಯಲ್ಲಿದ್ದಾರೆ. ಈ ಪೈಕಿ 1,89,765 ಜನರು ಮನೆ / ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ನಲ್ಲಿ ಮತ್ತು 1716 ಜನರು ಆಸ್ಪತ್ರೆಗಳಲ್ಲಿ ನಿರೀಕ್ಷಣದಲ್ಲಿರುವರು.ಒಟ್ಟು 277 ಜನರನ್ನು ಭಾನುವಾರ ಆಸ್ಪತ್ರೆಗೆ ದಾಖಲಿಸಲಾಗಿದೆ.

 

ಕಳೆದ 24 ಗಂಟೆಗಳಲ್ಲಿ 4316 ಮಾದರಿಗಳನ್ನು ಪರಿಶೀಲನೆಗಾಗಿ ಕಳುಹಿಸಲಾಗಿದೆ. ಇಲ್ಲಿಯವರೆಗೆ, 83,875 ವ್ಯಕ್ತಿಗಳ ಮಾದರಿಗಳನ್ನು (ಓಗ್ಮೆಂಟೆಡ್ ಮಾದರಿ ಸೇರಿದಂತೆ) ಪರಿಶೋಧನೆಗೆ ಕಳುಹಿಸಲಾಗಿದೆ.ಇದರಲ್ಲಿ ಲಭ್ಯವಾದ 79,957 ಮಾದರಿಗಳ,ತಪಾಸಣಾ ಫಲಿತಾಂಶ ಋಣಾತ್ಮಕವಾಗಿವೆ. ಇದಲ್ಲದೆ, ಸೆಂಟಿನೆಲ್ ಸರ್ವೈಲೆನ್ಸ್ ನ ಭಾಗವಾಗಿ, ಆರೋಗ್ಯ ಕಾರ್ಯಕರ್ತರು, ಅತಿಥಿ ಕೆಲಸಗಾರರು, ಸಾಮಾಜಿಕ ಸಂಪರ್ಕ ಹೆಚ್ಚಾಗಿರುವ ವ್ಯಕ್ತಿಗಳ ಆದ್ಯತೆಯ ಗುಂಪುಗಳಿಂದ 22,324 ಮಾದರಿಗಳನ್ನು ಸಂಗ್ರಹಿಸಿರುವುದರಲ್ಲಿ 20,362 ಮಾದರಿಗಳು ನಕಾರಾತ್ಮಕವಾಗಿವೆ. 5,731 ಪುನರಾವರ್ತಿತ ಮಾದರಿ ಸೇರಿದಂತೆ ಒಟ್ಟು 1,11,930 ಮಾದರಿಗಳನ್ನು ಪರೀಕ್ಷಿಸಲಾಯಿತು.

 

ಹೊಸದಾಗಿ 6 ಹಾಟ್ ಸ್ಪಾಟ್‌ಗಳಿವೆ. ಕಣ್ಣೂರು ಜಿಲ್ಲೆಯ ಎರುವೇಶಿ, ಉದಯಗಿರಿ, ಮಂಗಟ್ಟಿಡಂ, ಕುಟ್ಟಿಯತ್ತೂರು, ಪಾಲಕ್ಕಾಡ್ ಜಿಲ್ಲೆಯ ಕೊಡುವಾಯೂರ್ ಮತ್ತು ವಯನಾಡ್ ಜಿಲ್ಲೆಯ ಪನಮರಂ ಹೊಸ ಹಾಟ್ ಸ್ಪಾಟ್‌ಗಳು. ಈಗಿನಂತೆ,ಪ್ರಸ್ತುತ ಒಟ್ಟು 144 ಹಾಟ್ ಸ್ಪಾಟ್‌ಗಳಿವೆ.

date