ಕೇರಳದಲ್ಲಿ 91 ಜನರಿಗೆ ಮಂಗಳವಾರ ಕೋವಿಡ್ -19 ದೃಡಪಡಿಸಿದೆ; 34 ಮಂದಿ ಗುಣಮುಖರಾದರು
ಚಿಕಿತ್ಸೆಯಲ್ಲಿರುವವರು 1231 ಜನರು ; 10 ಹೊಸ ಹಾಟ್ ಸ್ಪಾಟ್ಗಳು
ಕೇರಳದಲ್ಲಿ ಮಂಗಳವಾರ 91 ಜನರಿಗೆ ಕೋವಿಡ್ -19 ದೃಡಪಡಿಸಿರುವುದಾಗಿ ಆರೋಗ್ಯ ಸಚಿವೆ ಕೆ.ಕೆ. ಶೈಲಾಜಾ ಟೀಚರ್ ತಿಳಿಸಿದರು. ಪಾಲಕ್ಕಾಡ್ ಜಿಲ್ಲೆಯಿಂದ 14 ಮಂದಿಗೆ, ಆಲಪ್ಪುಳ ಜಿಲ್ಲೆಯಿಂದ 11 ಮಂದಿಗೆ, ತಿರುವನಂತಪುರಂ ಜಿಲ್ಲೆಯಿಂದ 10 ಮಂದಿಗೆ, ಕೋಟಯಂ ಜಿಲ್ಲೆಯಿಂದ 8 ಮಂದಿಗೆ, ಪಥನಮತ್ತಿಟ್ಟ, ಕೋಳಿಕೋಡ್ ಜಿಲ್ಲೆಯಿಂದ ತಲಾ 7 ಮಂದಿಗೆ, ತ್ರಿಶೂರ್, ಮಲಪ್ಪುರಂ, ವಯನಾಡ್ ಜಿಲ್ಲೆಗಳಿಂದ ತಲಾ 6 ಮಂದಿಗೆ, ಕೊಲ್ಲಂ, ಕಣ್ಣೂರು ಜಿಲ್ಲೆಗಳಿಂದ ತಲಾ 5 ಮಂದಿಗೆ, ಎರ್ನಾಕುಲಂ ಜಿಲ್ಲೆಯಿಂದ 4 ಮಂದಿಗೆ, ಕಾಸರ್ಗೋಡ್ ಜಿಲ್ಲೆಯಿಂದ ಇಬ್ಬರಿಗೆ ರೋಗ ದೃಡಪಡಿಸಿರುವುದು. ಈ ಪೈಕಿ 53 ಮಂದಿ ವಿದೇಶಗಳಿಂದ (ಯು.ಎ.ಇ -30, ಕುವೈತ್ -10, ತಜಿಕಿಸ್ತಾನ್ -4, ನೈಜೀರಿಯಾ -4, ರಷ್ಯಾ -3, ಸೌದಿ ಅರೇಬಿಯಾ -2) ಮತ್ತು 27 ಮಂದಿ ಇತರ ರಾಜ್ಯಗಳಿಂದ (ಮಹಾರಾಷ್ಟ್ರ -14, ತಮಿಳುನಾಡು -5, ದೆಹಲಿ -5, ಕರ್ನಾಟಕ -2, ಆಂಧ್ರಪ್ರದೇಶ -1) ಬಂದವರು. 10 ಜನರಿಗೆ ಸಂಪರ್ಕದ ಮೂಲಕ ಸೋಂಕು ತಗುಲಿತು. ಪಾಲಕ್ಕಾಡ್ ಜಿಲ್ಲೆಯ ನಾಲ್ವರಿಗೆ, ತ್ರಿಶೂರ್ ಜಿಲ್ಲೆಯ ಮೂವರಿಗೆ, ಮಲಪ್ಪುರಂ ಜಿಲ್ಲೆಯ ಇಬ್ಬರಿಗೆ ಮತ್ತು ಕಣ್ಣೂರು ಜಿಲ್ಲೆಯ ಒಬ್ಬರಿಗೆ ಸಂಪರ್ಕದ ಮೂಲಕ ಸೋಂಕು ತಗುಲಿರುವುದು. ತಿರುವನಂತಪುರಂ ಜಿಲ್ಲೆಯ ಒಬ್ಬ ಆರೋಗ್ಯ ಕಾರ್ಯಕರ್ತೆಯೂ ಈ ಕಾಯಿಲೆಗೆ ತುತ್ತಾಗಿದ್ದಾರೆ.
ರೋಗ ಪತ್ತೆಯಾಗಿ ಚಿಕಿತ್ಸೆಯಲ್ಲಿದ್ದ 34 ಜನರ,ತಪಾಸಣಾ ಫಲಿತಾಂಶ ಋಣಾತ್ಮಕವಾಗಿವೆ. ತಿರುವನಂತಪುರಂ ಜಿಲ್ಲೆಯಿಂದ 12 ಜನರ (ಒಬ್ಬರು ಕೊಲ್ಲಂ ನಿವಾಸಿ), ಪಥನಮತ್ತಿಟ್ಟ ಜಿಲ್ಲೆಯಿಂದ 6 ಜನರ ,ತ್ರಿಶೂರ್ ಮತ್ತು ಕೋಳಿಕೋಡ್ (ಒಬ್ಬರು ವಯನಾಡ್ ನಿವಾಸಿ)ಜಿಲ್ಲೆಗಳಿಂದ ತಲಾ ನಾಲ್ಕು ಜನರ, ಕೊಲ್ಲಂ, ಆಲಪ್ಪುಳ ಕೋಟಯಂ ಜಿಲ್ಲೆಗಳಿಂದ ತಲಾ ಇಬ್ಬರ ಮತ್ತು ಇಡುಕ್ಕಿ, ಎರ್ನಾಕುಲಂ ಜಿಲ್ಲೆಗಳಿಂದ ತಲಾ ಒಬ್ಬೊಬ್ಬರ ತಪಾಸಣಾ ಫಲಿತಾಂಶ ಋಣಾತ್ಮಕವಾಗಿರುವುದು. ಇದರೊಂದಿಗೆ 1231 ಜನರಿಗೆ ಈ ರೋಗ ಪತ್ತೆಯಾಗಿದ್ದು ಇನ್ನು ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 848 ಜನರು ಕೋವಿಡ್ನಿಂದ ಗುಣಮುಖರಾಗಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 2,04,153 ಜನರು ನಿರೀಕ್ಷಣೆಯಲ್ಲಿದ್ದಾರೆ. ಈ ಪೈಕಿ 2,02,240 ಜನರು ಮನೆ / ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ನಲ್ಲಿ ಮತ್ತು 1913 ಜನರು ಆಸ್ಪತ್ರೆಗಳಲ್ಲಿ ನಿರೀಕ್ಷಣೆಯಲ್ಲಿರುವರು. ಮಂಗಳವಾರ ಒಟ್ಟು 269 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
24 ಗಂಟೆಗಳ ಒಳಗೆ 3813 ಮಾದರಿಗಳನ್ನು ಪರಿಶೀಲನೆಗಾಗಿ ಕಳುಹಿಸಲಾಗಿದೆ. ಇಲ್ಲಿಯವರೆಗೆ, 95,397 ವ್ಯಕ್ತಿಗಳ (ಓಗ್ಮೆಂಟೆಡ್ ಮಾದರಿ ಸೇರಿದಂತೆ) ಮಾದರಿಯನ್ನು ಪರಿಶೀಲನೆಗಾಗಿ ಕಳುಹಿಸಲಾಗಿದೆ.ಇದರಲ್ಲಿ ಲಭ್ಯವಾದ 90,662 ಮಾದರಿಗಳ ತಪಾಸಣಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ಇದಲ್ಲದೆ, ಸೆಂಟಿನೆಲ್ ಸರ್ವೈಲೆನ್ಸ್ ನ ಭಾಗವಾಗಿ ಆರೋಗ್ಯ ಕಾರ್ಯಕರ್ತರು, ಅತಿಥಿ ಕೆಲಸಗಾರರು ಮತ್ತು ಸಾಮಾಜಿಕ ಸಂಪರ್ಕ ಹೆಚ್ಚಾಗಿರುವ ವ್ಯಕ್ತಿಗಳ ಆದ್ಯತೆಯ ಗುಂಪುಗಳಿಂದ 22,855 ಮಾದರಿಗಳನ್ನು ಸಂಗ್ರಹಿಸಲಾಗಿರುವುದರಲ್ಲಿ 21,230 ಮಾದರಿಗಳು ಋಣಾತ್ಮಕವಾಗಿವೆ. 6,135 ಪುನರಾವರ್ತಿತ ಮಾದರಿಗಳು ಸೇರಿದಂತೆ ಒಟ್ಟು 1,26,088 ಮಾದರಿಗಳನ್ನು ಪರೀಕ್ಷಿಸಲಾಯಿತು.
ಮಂಗಳವಾರ ಹೊಸದಾಗಿ 10 ಹಾಟ್ ಸ್ಪಾಟ್ಗಳಿವೆ.ಕಾಸರಗೋಡು ಜಿಲ್ಲೆಯ ಚೆಮ್ಮನಾಡ್, ಚೆಂಕಳ, ನೀಲೇಶ್ವರಂ, ಪುಲ್ಲೂರ್ ಪೆರಿಯಾ, , ಅವೊನೂರ್, ಅಡಟ್ಟು, ಚೆರುಪಂ, ವಡಕ್ಕೇಕಡ್, ತ್ರಿಕ್ಕೂರ್ ಮತ್ತು ಇರಿಂಜಲಕುಡ ಪುರಸಭೆ ಮುಂತಾದುವು ಹೊಸ ಹಾಟ್ ಸ್ಪಾಟ್ಗಳು. ಪ್ರಸ್ತುತ ಒಟ್ಟು158 ಹಾಟ್ ಸ್ಪಾಟ್ಗಳಿವೆ.
- Log in to post comments