Skip to main content

ಕೇರಳದಲ್ಲಿ ಗುರುವಾರ 83 ಜನರಿಗೆ ಕೋವಿಡ್ -19 ದೃಡಪಡಿಸಿದೆ, ಚಿಕಿತ್ಸೆಯಲ್ಲಿರುವವರು 1258  ಮಂದಿ

 

62 ಜನರು ಗುಣಮುಖರಾದರು; ಎರಡು ಹೊಸ ಹಾಟ್ ಸ್ಪಾಟ್‌ಗಳು

 

ಕೇರಳದಲ್ಲಿ ಗುರುವಾರ 83 ಜನರಿಗೆ ಕೋವಿಡ್ -19 ದೃಡಪಡಿಸಿರುವುದಾಗಿ  ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದರು. ತ್ರಿಶೂರ್‌ ಜಿಲ್ಲೆಯಿಂದ 25 ಮಂದಿಗೆ, ಪಾಲಕ್ಕಾಡ್‌ ಜಿಲ್ಲೆಯಿಂದ 13 ಮಂದಿಗೆ, ಮಲಪ್ಪುರಂ, ಕಾಸರಗೋಡು ಜಿಲ್ಲೆಗಳಿಂದ ತಲಾ 10 ಮಂದಿಗೆ, ಕೊಲ್ಲಂ ಜಿಲ್ಲೆಯಿಂದ 8 ಮಂದಿಗೆ, ಕಣ್ಣೂರು ಜಿಲ್ಲೆಯಿಂದ 7 ಮಂದಿಗೆ, ಪಥನಮತ್ತಿಟ್ಟ ಜಿಲ್ಲೆಯಿಂದ 5 ಮಂದಿಗೆ, ಕೊಟ್ಟಾಯಂ, ಎರ್ನಾಕುಲಂ ಜಿಲ್ಲೆಗಳಿಂದ ತಲಾ ಇಬ್ಬರಿಗೆ, ಮತ್ತು ಕೋಳಿಕೋಡ್‌ ಜಿಲ್ಲೆಯಿಂದ ಒಬ್ಬರಿಗೆ  ರೋಗ ದೃಡಪಡಿಸಿರುವುದು.ಈ ಪೈಕಿ 27 ಮಂದಿ ವಿದೇಶಗಳಿಂದ (ಯು.ಎ.ಇ -11, ಒಮಾನ್ -4, ನೈಜೀರಿಯಾ -4, ಕುವೈತ್ -3, ಸೌದಿ ಅರೇಬಿಯಾ -2, ರಷ್ಯಾ -2, ಜಿಬೌಟಿ (Djibouti)-1) ಮತ್ತು 37 ಮಂದಿ ಇತರ ರಾಜ್ಯಗಳಿಂದ (ಮಹಾರಾಷ್ಟ್ರ -20, ದೆಹಲಿ -7, ತಮಿಳುನಾಡು- 4, ಕರ್ನಾಟಕ- 4, ಮಧ್ಯಪ್ರದೇಶ- 1 ಪಶ್ಚಿಮ ಬಂಗಾಳ -1)ಬಂದವರು. 14 ಜನರಿಗೆ ಸಂಪರ್ಕದ ಮೂಲಕ ಸೋಂಕು ತಗುಲಿರುವುದು. ತ್ರಿಶೂರ್‌ ಜಿಲ್ಲೆಯ ಹತ್ತು ಜನರಿಗೆ ಮತ್ತು ಮಲಪ್ಪುರಂ ಜಿಲ್ಲೆಯ 4 ಜನರಿಗೆ ಸಂಪರ್ಕದಿಂದ ಸೋಂಕು ತಗುಲಿರುವುದು.ತ್ರಿಶೂರ್ ಜಿಲ್ಲೆಯ ಐದು ಆರೋಗ್ಯ ಕಾರ್ಯಕರ್ತರಿಗೂ ಸೋಂಕು ತಗುಲಿದೆ.

ಕಣ್ಣೂರು ಜಿಲ್ಲೆಯಲ್ಲಿ ಕೋವಿಡ್-19  ದೃಡಪಡಿಸಿ ಚಿಕಿತ್ಸೆಯಲ್ಲಿದ್ದ ಪಿ.ಕೆ ಮುಹಮ್ಮದ್ (70) ನಿಧನರಾದರು. ಮೇ 22 ರಂದು ಒಮಾನ್‌ನಿಂದ ಬಂದ ಅವರು ಗಂಭೀರ ಕರಳು ಕಾಯಿಲೆಯಿಂದ ಬಳಲುತ್ತಿದ್ದರು.

ರೋಗ ಪತ್ತೆಯಾಗಿ ಚಿಕಿತ್ಸೆಯಲ್ಲಿದ್ದ 62 ಜನರ ತಪಾಸಣಾ ಫಲಿತಾಂಶ ಋಣಾತ್ಮಕವಾಗಿವೆ. ತಿರುವನಂತಪುರಂ ಜಿಲ್ಲೆಯಿಂದ 16 ಜನರ( ಇಬ್ಬರು ಕೊಲ್ಲಂ ನಿವಾಸಿಗಳು,ಒಂದು ಆಲಪ್ಪುಳ ನಿವಾಸಿ ), ಪಾಲಕ್ಕಾಡ್ ಜಿಲ್ಲೆಯಿಂದ 13 ಜನರ, ಕಣ್ಣೂರು (ಎರಡು ಕೋಳಿಕೋಡ್ ನಿವಾಸಿಗಳು ಮತ್ತು ಒಬ್ಬರು ಕಾಸರಗೋಡು ನಿವಾಸಿ) ಜಿಲ್ಲೆಯಿಂದ ಎಂಟು ಜನರ, ತ್ರಿಶೂರ್ ಜಿಲ್ಲೆಯಿಂದ 7 ಜನರ ಮತ್ತು ಎರ್ನಾಕುಲಂ ಜಿಲ್ಲೆಯಿಂದ 6 ಜನರ (ಒಂದು ಪಥನಮತ್ತಿಟ್ಟ ನಿವಾಸಿ) ಕಾಸರಗೋಡು ಜಿಲ್ಲೆಯಿಂದ 5 ಜನರ, ಕೋಳಿಕೋಡ್ ಜಿಲ್ಲೆಯಿಂದ ಮೂವರ ಮತ್ತು ಕೊಲ್ಲಂ, ಮಲಪ್ಪುರಂ ಜಿಲ್ಲೆಗಳಿಂದ ತಲಾ ಇಬ್ಬರ ತಪಾಸಣಾ ಫಲಿತಾಂಶ ಋಣಾತ್ಮಕವಾಗಿರುವುದು.ಇದರೊಂದಿಗೆ 1258 ಜನರಿಗೆ ಈ ರೋಗ ಪತ್ತೆಯಾಗಿದ್ದು ಇನ್ನು ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 967 ಜನರು ಕೋವಿಡ್‌ನಿಂದ ಗುಣಮುಖರಾಗಿದ್ದಾರೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 2,18,949 ಜನರು ನಿರೀಕ್ಷಣೆಯಲ್ಲಿದ್ದಾರೆ. ಈ ಪೈಕಿ 2,17,027 ಜನರು ಮನೆ / ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ನಲ್ಲಿ ಮತ್ತು 1922 ಜನರು ಆಸ್ಪತ್ರೆಗಳಲ್ಲಿ ನಿರೀಕ್ಷಣದಲ್ಲಿರುವರು. ಗುರುವಾರ ಒಟ್ಟು 231 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

24 ಗಂಟೆಗಳಲ್ಲಿ ಒಟ್ಟು 5044 ಮಾದರಿಗಳನ್ನು ಪರೀಕ್ಷಿಸಲಾಯಿತು. ಇಲ್ಲಿಯವರೆಗೆ, 1,03,757 ವ್ಯಕ್ತಿಗಳ (ಓಗ್ಮೆಂಟೆಡ್ ಮಾದರಿ ಸೇರಿದಂತೆ) ಮಾದರಿಯನ್ನು ಪರೀಕೆಗೆ ಕಳುಹಿಸಲಾಗಿದೆ. ಈ ಪೈಕಿ 2873 ಮಾದರಿಗಳ ಫಲಿತಾಂಶ ಬರಬೇಕಾಗಿದೆ. ಇದಲ್ಲದೆ, ಸೆಂಟಿನೆಲ್ ಸರ್ವೈಲೆನ್ಸ್ ನ ಭಾಗವಾಗಿ, ಆರೋಗ್ಯ ಕಾರ್ಯಕರ್ತರು, ಅತಿಥಿ ಕಾರ್ಯಕರ್ತರು, ಸಾಮಾಜಿಕ ಸಂಪರ್ಕ ಹೆಚ್ಚಾಗಿರುವ ವ್ಯಕ್ತಿಗಳ ಆದ್ಯತೆಯ ಗುಂಪುಗಳಿಂದ 27,118 ಮಾದರಿಗಳನ್ನು ಸಂಗ್ರಹಿಸಿರುವುದರಲ್ಲಿ 25,757 ಮಾದರಿಗಳು ಋಣಾತ್ಮಕವಾಗಿವೆ.

ಹೊಸದಾಗಿ ಎರಡು ಹಾಟ್ ಸ್ಪಾಟ್‌ಗಳಿವೆ. ಪಾಲಕ್ಕಾಡ್ ಜಿಲ್ಲೆಯ ಚೆರ್ಪುಲಾಸ್ಸೇರಿ ಮತ್ತು ಲಕ್ಕಿಡಿ ಪೆರೂರ್ ಹೊಸ ಹಾಟ್ ಸ್ಪಾಟ್‌ಗಳು.

35 ಪ್ರದೇಶಗಳನ್ನು ಹಾಟ್ ಸ್ಪಾಟ್‌ನಿಂದ ಹೊರಗಿಡಲಾಗಿದೆ. ಪ್ರಸ್ತುತ 133 ಹಾಟ್ ಸ್ಪಾಟ್‌ಗಳಿವೆ.

ನಾವೈಕುಲಂ, ನೆಲ್ಲನಾಡು, ಕುಳತೂರ್, ಪುಲ್ಲಂಪಾರ, ಪುಲಿಯಮತ್, ಕಾರೋಡ್, ಮುಡಕ್ಕಲ್, ವಾಮನಪುರಂ ಮತ್ತು ಮಾಣಿಕಲ್ ಮುಂತಾದುವು ತಿರುವನಂತಪುರಂ ಜಿಲ್ಲೆಯಿಂದ ಹೊರಗಿಡಲಾದ ಹಾಟ್‌ ಸ್ಪಾಟ್‌ಗಳು.

date