Skip to main content

ಕೇರಳದಲ್ಲಿ 75 ಜನರಿಗೆ ಕೋವಿಡ್ 19 ದೃಡಪಡಿಸಿದೆ; ಪ್ರವಾಸಿಗರನ್ನು ಕರೆತರುವ ಮೊದಲು ಕೋವಿಡು ತಪಾಸಣೆ ಮಾಡಬೇಕು

 

ಕೇರಳದಲ್ಲಿ ಬುಧವಾರ 75 ಜನರಿಗೆ ಕೋವಿಡ್ ದೃಡಪಡಿಸಿರುವುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪತ್ರಿಕಾಗೋಷ್ಠಿಯಲ್ಲಿ  ತಿಳಿಸಿದರು. 90 ಜನರು ಗುಣಮುಖರಾದರು. ರಾಜ್ಯದಲ್ಲಿ ಈವರೆಗೆ  ಈ ಕಾಯಿಲೆಯಿಂದ 20 ಜನರು ಸಾವನ್ನಪ್ಪಿದ್ದಾರೆ. ವಿದೇಶಗಳಲ್ಲಿ ಈವರೆಗೆ 277 ಕೇರಳಿಗರು ಕೋವಿಡ್ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ. ವಿದೇಶದಿಂದ ಅಥವಾ ಇತರ ರಾಜ್ಯಗಳಿಂದ ಬರುವವರಿಗೆ ಕೋವಿಡ್ ಕಾಯಿಲೆ ಇದ್ದರೆ ಎಲ್ಲರನ್ನು ನಾವು ಸ್ವೀಕರಿಸುತ್ತೇವೆ. ಅಗತ್ಯ ಚಿಕಿತ್ಸೆಯನ್ನು ಒದಗಿಸುತ್ತೇವೆ. ಅದೇ ಸಮಯದಲ್ಲಿ, ಸಂಪರ್ಕದಿಂದ ರೋಗ ಹರಡುವುದನ್ನು ಏಕಾಏಕಿ ತಡೆಗಟ್ಟಲು ಸರ್ಕಾರ ಜಾಗರೂಕರಾಗಿರುತ್ತದೆ.ಈ ಜಾಗರೂಕತೆಯ ಮತ್ತು ಮುನ್ನೆಚ್ಚರಿಕೆಯ ಭಾಗವಾಗಿ,  ವಿದೇಶದಿಂದ ಬರುವವರಿಗೆ ಅವರ ನಿರ್ಗಮನದ ದೇಶದಲ್ಲೇ ಕೋವಿಡು ತಪಾಸಣೆ ನಡೆಸಲು  ಸರ್ಕಾರ ಬೇಡಿಕೆ ಇಟ್ಟಿರುವುದು. ವಿದೇಶಿಯರು ಮನೆಗೆ ಮರಳಿದಾಗ ಆರೋಗ್ಯ ಮಾನದಂಡಗಳನ್ನು ಪೂರೈಸಬೇಕು ಎಂದು ರಾಜ್ಯ ಸರ್ಕಾರ ಮೊದಲಿನಿಂದಲೂ ಒತ್ತಾಯಿಸಿದೆ. ವಂದೇಭರತ್ ಮಿಷನ್ನಲ್ಲಿ ಬರುವವರಿಗೆ ಮತ್ತು ಚಾರ್ಟರ್ಡ್ ವಿಮಾನಗಳಲ್ಲಿ ಬರುವವರಿಗೆ ಇದು ಅನ್ವಯಿಸುತ್ತದೆ ಎಂಬುದು ರಾಜ್ಯದ ಅಭಿಪ್ರಾಯ.

ಈ ತಿಂಗಳ ಆರಂಭದಲ್ಲಿ, ಸ್ಪೈಸ್ ಜೆಟ್‌ನ 300 ಚಾರ್ಟರ್ಡ್ ಫ್ಲೈಟ್ ಗೆ ಕೇರಳವು ಎನ್‌ಒಸಿ ನೀಡಿತ್ತು. ಕೋವಿಡ್ ಪರೀಕ್ಷೆಯನ್ನು ನಡೆಸುವ ಮೂಲಕ ನಕಾರಾತ್ಮಕವಾಗಿರುವವರನ್ನು ಕರೆತರಲಾಗುವುದು ಎಂದು ಅವರು ತಿಳಿಸಿರುವುದು.  ಈಗಾಗಲೇ 20 ಕ್ಕೂ ಹೆಚ್ಚು ವಿಮಾನಗಳು ತಪಾಸಣೆ ನಡೆಸಿದ ಪ್ರಯಾಣಿಕರೊಂದಿಗೆ ಬಂದಿರುವುದು. ಜೂನ್ 30 ರೊಳಗೆ 100 ವಿಮಾನಗಳು ಬರಲಿವೆ ಎಂದು ಜೂನ್ 20 ರ ನಂತರ ಪ್ರತಿ ಪ್ರಯಾಣಿಕರಿಗೆ ವಿಶೇಷ ಕೋವಿಡ್ ಋಣಾತ್ಮಕ ಪ್ರಮಾಣಪತ್ರ ಸಿಗಲಿದೆ  ಎಂದು ಸಿಎಂಡಿ ತಿಳಿಸಿದ್ದಾರೆ.

ಪ್ರಯಾಣಿಕರಿಗೆ ಪಿಸಿಆರ್ ಪರೀಕ್ಷೆಗಳನ್ನು ನಡೆಸಲು ಅನೇಕ ದೇಶಗಳಲ್ಲಿ ತೊಂದರೆ ಅನುಭವಿಸುತ್ತಿರುವುದಾಗಿ ಪ್ರವಾಸಿಗರು ಮತ್ತು ಅವರ ಸಂಸ್ಥೆಗಳು ತಿಳಿಸಿದ್ದಾರೆ. ಹೀಗೆ ತೊಂದರೆ ಇದ್ದರೆ ಆಂಟಿಬಾಡಿ  ಪರೀಕ್ಷೆಯನ್ನು ಮಾಡಬಹುದು. ಆಂಟಿ ಬಾಡಿ ಪರೀಕ್ಷೆಯ ಫಲಿತಾಂಶ ತ್ವರಿತವಾಗಿ ಪಡೆಯಬಹುದು. ಟ್ರೂ ನ್ಯಾಟ್ನ ಎಂಬ ಪರಿಶೀಲನಾ ವ್ಯವಸ್ಥೆಯು ವ್ಯಾಪಕವಾಗಿವೆ. ಆ ತಪಾಸಣೆಯ ಮೊತ್ತ ಕಡಿಮೆಯಾಗಿದೆ. ಪ್ರಯಾಣಿಕರಿಗೆ ಅತ್ಯಂತ ಸೂಕ್ತವಾದ ಪರೀಕ್ಷೆ ಎಂದು ಹೇಳಲಾಗುತ್ತದೆ.ರೋಗ ಇರುವವರನ್ನು ಮತ್ತು ಇಲ್ಲದವರನ್ನು ಒಂದೇ ವಿಮಾನದಲ್ಲಿ ಕರೆತಂದು ಅಪಘಾತ ಮಾಡದಂತೆ ಕೇರಳ ಕೇಂದ್ರ ಸರ್ಕಾರವನ್ನು ಕೋರಿದೆ. ತಪಾಸಣೆಗೆ ಅನುಕೂಲವಾಗುವಂತೆ ರಾಯಭಾರ ಕಚೇರಿಗಳ ಮೂಲಕ ಭಾರತ ಸರ್ಕಾರ ಅಗತ್ಯ ವ್ಯವಸ್ಥೆ ಮಾಡುವಂತೆ  ಪ್ರಧಾನಿಯನ್ನು ಕೇಳಿಕೊಳ್ಳಲಾಯಿತು.

date