ಕೇರಳದಲ್ಲಿ ಗುರುವಾರ 97 ಜನರಿಗೆ ಕೋವಿಡ್; 89 ಮಂದಿ ಗುಣಮುಖರಾದರು
ಕೇರಳದಲ್ಲಿ ಗುರುವಾರ (ಜೂನ್ 18) 97 ಜನರಿಗೆ ಕೋವಿಡ್ -19 ದೃಡಪಡಿಸಿರುವುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದರು. ಗುರುವಾರ ರೋಗನಿರ್ಣಯ ಮಾಡಿದವರಲ್ಲಿ 65 ಮಂದಿ ವಿದೇಶಗಳಿಂದ (ಕುವೈತ್ -25, ಯು.ಎ.ಇ -17, ಸೌದಿ ಅರೇಬಿಯಾ -11, ಖತಾರ್ -7, ಕಜಕಿಸ್ತಾನ್ -3, ಒಮಾನ್ -1, ಬಹ್ರೇನ್ -1) ಮತ್ತು 29 ಮಂದಿ ಇತರ ರಾಜ್ಯಗಳಿಂದ (ಮಹಾರಾಷ್ಟ್ರ - 12, ದೆಹಲಿ -7, ತಮಿಳುನಾಡು -5, ಹರಿಯಾಣ -2, ಗುಜರಾತ್ -2 ಮತ್ತು ಒರಿಸ್ಸಾ -1) ಬಂದವರು. 3 ಜನರು ಸಂಪರ್ಕದ ಮೂಲಕ ಸೋಂಕಿಗೆ ಒಳಗಾಗಿದ್ದಾರೆ. ಕೊಲ್ಲಂ ಜಿಲ್ಲೆಯ ಇಬ್ಬರಿಗೆ ಮತ್ತು ಎರ್ನಾಕುಲಂ ಜಿಲ್ಲೆಯ ಒಬ್ಬರಿಗೆ ಸಂಪರ್ಕದಿಂದ ಸೋಂಕು ತಗುಲಿರುವುದು. ರೋಗ ದೃಡಪಡಿಸಿ ಕಣ್ಣೂರು ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಬಕಾರಿ ಇಲಾಖೆ ಚಾಲಕ ಕೆ.ಪಿ.ಸುನಿಲ್ (28) ಗುರುವಾರ ನಿಧನರಾದರು. ರೋಗ ದೃಡಪಡಿಸಿ ಚಿಕಿತ್ಸೆಯಲ್ಲಿದ್ದ 89 ಜನರ, ತಪಾಸಣಾ ಫಲಿತಾಂಶ ಋಣಾತ್ಮಕವಾಗಿವೆ. ಪ್ರಸ್ತುತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 1,27,231 ಜನರು ನಿರೀಕ್ಷಣೆಯಲ್ಲಿದ್ದಾರೆ. ಈ ಪೈಕಿ 1,25,264 ಜನರು ಮನೆ / ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ನಲ್ಲಿ ಮತ್ತು 1967 ಜನರು ಆಸ್ಪತ್ರೆಗಳಲ್ಲಿ ನಿರೀಕ್ಷಣೆಯಲ್ಲಿರುವರು. 190 ಜನರನ್ನು ಗುರುವಾರ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ 4817 ಮಾದರಿಗಳನ್ನು ಪರಿಶೀಲಿಸಲಾಗಿದೆ. ಪ್ರಸ್ತುತ 108 ಹಾಟ್ ಸ್ಪಾಟ್‌ಗಳಿವೆ.
ದೇಶಕ್ಕೆ ಹಿಂದಿರುಗುವ ಪ್ರವಾಸಿಗರಿಗೆ ಗಲ್ಫ್ ದೇಶಗಳಲ್ಲಿ ಕೋವಿಡ್ ತಪಾಸಣೆ ನಡೆಸಲು ಬೇಕಾದ ಟ್ರುನಾಟ್ ಪರೀಕ್ಷಾ ಕಿಟ್ ನೀಡಲು ಕೇರಳ ಸಿದ್ಧವಾಗಿದೆ ಇದಕ್ಕಾಗಿ ಚರ್ಚೆಗಳು ನಡೆಯುತ್ತಿವೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಇದಕ್ಕೆ ವಿಮಾನಯಾನ ಸಂಸ್ಥೆಗಳ ಸಹಕಾರ ಮತ್ತು ಆಯಾ ದೇಶಗಳಲ್ಲಿನ ರಾಯಭಾರ ಕಚೇರಿಗಳ ಅನುಮೋದನೆ ಅಗತ್ಯ. ಇದಕ್ಕಾಗಿ ಕೇಂದ್ರದ ನೆರವು ಅತ್ಯಗತ್ಯ. ಯು.ಎ.ಇ ಮತ್ತು ಕತಾರ್‌ನಂತಹ ದೇಶಗಳಲ್ಲಿ ಈಗ ತಪಾಸಣಾ ಸೌಲಭ್ಯಗಳು ಲಭ್ಯವಿದೆ. ಸೌದಿ ಅರೇಬಿಯಾ, ಕುವೈತ್, ಬಹ್ರೇನ್ ಮತ್ತು ಒಮಾನ್ ಮುಂತಾದೆಡೆ ಇರುವ ಪ್ರವಾಸಿಗರಿಗೆ ಇದು ಸಹಾಯಕವಾಗುತ್ತದೆ ಎಂದು
ಮುಖ್ಯಮಂತ್ರಿ ಹೇಳಿದರು. ಜನರಿಗೆ ತುಂಬಾ ಅಗತ್ಯವಾಗಿರುವುದು ಸರ್ಕಾರಿ ಕಚೇರಿಗಳು ಅದರ ಕಾರ್ಯಗಳು ನಿಲ್ಲುವ ಅವಸ್ಥೆ ಉಂಟಾಗಬಾರದೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು. ಇತರರು ಮನೆಯಿಂದಲೇ ಕೆಲಸ ಮಾಡುವುದನ್ನು ಮುಂದುವರಿಸಬೇಕು.
ಕಚೇರಿ ಸಭೆಗಳನ್ನು ಆನ್‌ಲೈನ್‌ನಲ್ಲಿ ನಡೆಸಬೇಕು. ಕಚೇರಿಗಳ ಮೇಲಿನ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕಚೇರಿಗಳ ಕಾರ್ಯನಿರ್ವಹಣೆಯ ಕ್ರಮೀಕರಣಗಳಿಗೆ ಸಂಬಂಧಿಸಿದ ಮೇಲ್ವಿಚಾರಣೆಯನ್ನು ಮುಖ್ಯ ಕಾರ್ಯದರ್ಶಿ ನಡೆಸಲಿದ್ದಾರೆ.
ಕೋವಿಡ್ ಕರ್ತವ್ಯಕ್ಕೆ ಆಯಾ ಜಿಲ್ಲೆಗಳ ಅಧಿಕಾರಿಗಳನ್ನು ಬಳಸಬೇಕು. ಕೋವಿಡ್ ಕರ್ತವ್ಯ ನಿರ್ವಹಿಸುವವರು ತಮ್ಮ ಕುಟುಂಬದೊಂದಿಗೆ ಇರಬಾರದು.
ರೋಗ ಹರಡುವಿಕೆ ಉಂಟಾದರೆ, ಹೆಚ್ಚಿನ ಆರೋಗ್ಯ ಕಾರ್ಯಕರ್ತರ ಸೇವೆಗಳನ್ನು ಬಳಸಿಕೊಳ್ಳಲು ಸುಧಾರಿತ ಯೋಜನೆಯನ್ನು ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.
- Log in to post comments