Skip to main content

ಕೇರಳದಲ್ಲಿ 141 ಜನರಿಗೆ ಕೂಡ ಕೋವಿಡ್ -19 ದೃಡಪಡಿಸಿದೆ

 

60 ಜನರು ಗುಣಮುಖರಾದರು; ಚಿಕಿತ್ಸೆಯಲ್ಲಿರುವವರು 1620 ಜನರು 

 

ಕೇರಳದಲ್ಲಿ ಮಂಗಳವಾರ 141 ಜನರಿಗೆ  ಕೋವಿಡ್ -19 ದೃಡಪಡಿಸಿರುವುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಪಥನಮತ್ತಿಟ್ಟ, ಪಾಲಕ್ಕಾಡ್ ಜಿಲ್ಲೆಗಳಿಂದ ತಲಾ 27 ಮಂದಿಗೆ, ಆಲಪ್ಪುಳ ಜಿಲ್ಲೆಯಿಂದ 19 ಮಂದಿಗೆ, ತ್ರಿಶೂರ್‌ ಜಿಲ್ಲೆಯಿಂದ 14 ಮಂದಿಗೆ, ಎರ್ನಾಕುಲಂ ಜಿಲ್ಲೆಯಿಂದ 13 ಮಂದಿಗೆ, ಮಲಪ್ಪುರಂ ಜಿಲ್ಲೆಯಿಂದ 11 ಮಂದಿಗೆ,ಕೋಟಯಂ ಜಿಲ್ಲೆಯಿಂದ 8 ಮಂದಿಗೆ, ಕೋಳಿಕೋಡ್, ಕಣ್ಣೂರು ಜಿಲ್ಲೆಗಳಿಂದ ತಲಾ 6 ಮಂದಿಗೆ,ತಿರುವನಂತಪುರಂ, ಕೊಲ್ಲಂ ಜಿಲ್ಲೆಗಳಿಂದ ತಲಾ 4 ಮಂದಿಗೆ ಮತ್ತು ವಯನಾಡ್ ಜಿಲ್ಲೆಯಿಂದ ಇಬ್ಬರಿಗೆ ರೋಗ ದೃಡಪಡಿಸಿರುವುದು.

ಈ ಪೈಕಿ 79 ಮಂದಿ ವಿದೇಶಗಳಿಂದ ಮತ್ತು 52 ಮಂದಿ ಇತರ ರಾಜ್ಯಗಳಿಂದ ಬಂದವರು. ಕುವೈತ್ -40, ಸೌದಿ ಅರೇಬಿಯಾ -14, ಯು.ಎ.ಇ -9, ಕತಾರ್ -6, ಒಮಾನ್ -5, ಬಹ್ರೇನ್ -3, ಕಜಕಿಸ್ತಾನ್ -1, ನೈಜೀರಿಯಾ -1 ಹೀಗೆ ವಿದೇಶದಿಂದ ಬಂದವರು. ದೆಹಲಿ -16, ತಮಿಳುನಾಡು -14, ಮಹಾರಾಷ್ಟ್ರ -9, ಪಶ್ಚಿಮ ಬಂಗಾಳ -2, ಉತ್ತರ ಪ್ರದೇಶ -2, ಕರ್ನಾಟಕ -2, ಹರಿಯಾಣ -2, ಆಂಧ್ರಪ್ರದೇಶ -2, ಮಧ್ಯಪ್ರದೇಶ -1, ಮೇಘಾಲಯ -1, ಹಿಮಾಚಲ ಪ್ರದೇಶ -1 ಹೀಗೆ ಇತರ ರಾಜ್ಯಗಳಿಂದ ಬಂದವರು. ಒಂಬತ್ತು ಜನರು ಸಂಪರ್ಕದ ಮೂಲಕ ಸೋಂಕಿಗೆ ಒಳಗಾಗಿದ್ದರೆ. ಇದಲ್ಲದೆ, ಎರ್ನಾಕುಲಂ ಜಿಲ್ಲೆಯ ಒಬ್ಬ ಆರೋಗ್ಯ ಕಾರ್ಯಕರ್ತೆಗೂ ಈ ರೋಗ ತಗುಲಿದೆ.

ರೋಗ ದೃಡಪಡಿಸಿ ಕೊಲ್ಲಂ ಜಿಲ್ಲೆಯಲ್ಲಿ ಚಿಕಿತ್ಸೆಯಲ್ಲಿದ್ದ ವಸಂತ್ ಕುಮಾರ್ (68) ಇಂದು ನಿಧನರಾಗಿದ್ದಾರೆ.ಇದರೊಂದಿಗೆ ಈ ಕಾಯಿಲೆಯಿಂದ 22 ಜನರು ಸಾವನ್ನಪ್ಪಿದ್ದಾರೆ. ರೋಗ ದೃಡಪಡಿಸಿ ಚಿಕಿತ್ಸೆಯಲ್ಲಿದ್ದ 60 ಜನರ ತಪಾಸಣಾ ಫಲಿತಾಂಶ ಋಣಾತ್ಮಕವಾಗಿವೆ. ಮಲಪ್ಪುರಂ ಜಿಲ್ಲೆಯಿಂದ 15 ಜನರ, ಕೋಟಯಂ ಜಿಲ್ಲೆಯಿಂದ 12 ಜನರ, (ಇಡುಕ್ಕಿಯಿಂದ ಒಬ್ಬರು), ತ್ರಿಶೂರ್ ಜಿಲ್ಲೆಯಿಂದ 10 ಜನರ, ಎರ್ನಾಕುಲಂ  (ಆಲಪ್ಪುಳದಿಂದ ಒಬ್ಬರು),ಪಥನಮತ್ತಿಟ್ಟ ಜಿಲ್ಲೆಗಳಿಂದ ತಲಾ ಆರು ಜನರ, ಕೊಲ್ಲಂ ಜಿಲ್ಲೆಯಿಂದ ನಾಲ್ಕು ಜನರ, ತಿರುವನಂತಪುರಂ (ಒಬ್ಬರು ಎರ್ನಾಕುಲಂ ಮತ್ತು ಒಬ್ಬರು ಮಲಪ್ಪುರಂ),ವಯನಾಡ್ ಜಿಲ್ಲೆಯಿಂದ ತಲಾ ಮೂವರ ಮತ್ತು ಕಣ್ಣೂರು ಜಿಲ್ಲೆಯಿಂದ ಒಬ್ಬರ ತಪಾಸಣಾ ಫಲಿತಾಂಶ ಋಣಾತ್ಮಕವಾಗಿರುವುದು. ಒಟ್ಟು 1620 ಜನರಿಗೆ ಈ ರೋಗ ಪತ್ತೆಯಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.  ಈವರೆಗೆ 1,807 ಜನರು ಕೋವಿಡ್‌ನಿಂದ ಗುಣಮುಖರಾಗಿದ್ದಾರೆ.

ಪ್ರಸ್ತುತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 1,50,196 ಜನರು ನಿರೀಕ್ಷಣೆಯಲ್ಲಿದ್ದಾರೆ. ಈ ಪೈಕಿ 1,47,990 ಜನರು ಮನೆ / ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ನಲ್ಲಿ ಮತ್ತು 2206 ಜನರು ಆಸ್ಪತ್ರೆಗಳಲ್ಲಿ ನಿರೀಕ್ಷಣೆಯಲ್ಲಿರುವರು. ಒಟ್ಟು 275 ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಳೆದ 24 ಗಂಟೆಗಳಲ್ಲಿ 4473 ಮಾದರಿಗಳನ್ನು ಪರಿಶೀಲಿಸಲಾಗಿದೆ. ರುಟೀನ್ ಮಾದರಿ, ಓಗ್ಮೆಂಟೆಡ್ ಮಾದರಿ, ಸೆಂಟಿನೆಲ್ ಮಾದರಿ, ಪೂಲ್ಡ್ ಸೆಂಟಿನೆಲ್, ಸಿ.ಬಿ. ನ್ಯಾಟ್ ಮತ್ತು ಟ್ರೂ ನ್ಯಾಟ್ ಸೇರಿದಂತೆ ಒಟ್ಟು 1,92,059 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಈ ಪೈಕಿ 3661 ಮಾದರಿಗಳ ತಪಾಸಣಾ ಫಲಿತಾಂಶ ಬರಬೇಕಾಗಿದೆ. ಇದಲ್ಲದೆ, ಸೆಂಟಿನೆಲ್ ಸರ್ವೈಲೆನ್ಸ್ ನ ಭಾಗವಾಗಿ, ಆರೋಗ್ಯ ಕಾರ್ಯಕರ್ತರು, ಅತಿಥಿ ಕೆಲಸಗಾರರು, ಸಾಮಾಜಿಕ ಸಂಪರ್ಕ ಹೆಚ್ಚಾಗಿರುವ ವ್ಯಕ್ತಿಗಳ ಆದ್ಯತೆಯ ಗುಂಪುಗಳಿಂದ 39,518 ಮಾದರಿಗಳನ್ನು ಸಂಗ್ರಹಿಸಲಾಗಿರುವುದರಲ್ಲಿ 38,551 ಮಾದರಿಗಳು ನಕಾರಾತ್ಮಕವಾಗಿವೆ. ಕೋಟಯಂ ಜಿಲ್ಲೆಯ

ರಾಮಪುರಂ (ಕಂಟೈನ್ಮೆಂಟ್ ಜೋನ್: ವಾರ್ಡ್ 8), ಮುತೋಲಿ (1), ತಲೈಯಾಳಮ್ (12), ತ್ರಿಕ್ಕೋಡಿಥಾನಂ (18), ಎರ್ನಾಕುಲಂ ಜಿಲ್ಲೆಯ ನಾಯರಂಬಲಂ (2, 15),ಆಲಪ್ಪುಳ ಜಿಲ್ಲೆಯ ಪಟ್ಟಣಕ್ಕಾಡ್ (16) ಮತ್ತು ಕಾರ್ತಿಕಪಲ್ಲಿ (7) ಹೊಸ ಹಾಟ್ ಸ್ಪಾಟ್‌ಗಳು. .

ಪಾಲಕ್ಕಾಡ್ ಜಿಲ್ಲೆಯ 8 ಪ್ರದೇಶಗಳನ್ನು ಹಾಟ್ ಸ್ಪಾಟ್‌ನಿಂದ ಹೊರಗಿಡಲಾಗಿದೆ. ಪಾಲಕ್ಕಾಡ್ ಜಿಲ್ಲೆಯ ಅಂಬಲಪ್ಪಾರ (ಕಂಟೈನ್ಮೆಂಟ್ ಜೋನ್: ವಾರ್ಡ್ 7), ಪಾಲಕ್ಕಾಡ್ ಪುರಸಭೆ (8, 13, 35), ಇಲಪ್ಪುಲ್ಲಿ (7), ಮುಂಡೂರು (4), ಪಟ್ಟಿತ್ತರ (9), ಪುದುಚೇರಿ (7), ವಡಕ್ಕಂಚೇರಿ (8), ಎರಿಮಾಯೂರ್ (ಕುನಿಸೇರಿ) (8 ಮತ್ತು 9) ಮುಂತಾದವುಗಳನ್ನು ಹೊರಗಿಡಲಾಗಿದೆ. ಪ್ರಸ್ತುತ 111 ಹಾಟ್ ಸ್ಪಾಟ್‌ಗಳಿವೆ.

date