ಕೇರಳದಲ್ಲಿ ಬುಧವಾರ 152 ಜನರಿಗೆ ಕೋವಿಡ್; 81 ಜನರು ಗುಣಮುಖರಾದರು
ಚಿಕಿತ್ಸೆಯಲ್ಲಿರುವವರು 1691 ಜನರು;14 ಹೊಸ ಹಾಟ್ ಸ್ಪಾಟ್‌ಗಳು
ಕೇರಳದಲ್ಲಿ ಬುಧವಾರ 152 ಜನರಿಗೆ ಕೋವಿಡ್ -19 ದೃಡಪಡಿಸಿರುವುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದರು. ಪಥನಮತ್ತಿಟ್ಟ ಜಿಲ್ಲೆಯಿಂದ 25 ಮಂದಿಗೆ, ಕೊಲ್ಲಂ ಜಿಲ್ಲೆಯಿಂದ 18 ಮಂದಿಗೆ, ಕಣ್ಣೂರು ಜಿಲ್ಲೆಯಿಂದ 17 ಮಂದಿಗೆ, ಪಾಲಕ್ಕಾಡ್ ಜಿಲ್ಲೆಯಿಂದ 16 ಮಂದಿಗೆ, ಆಲಪ್ಪುಳ, ತ್ರಿಶೂರ್ ಜಿಲ್ಲೆಗಳಿಂದ ತಲಾ 15 ಮಂದಿಗೆ, ಮಲಪ್ಪುರಂ ಜಿಲ್ಲೆಯಿಂದ 10 ಮಂದಿಗೆ, ಎರ್ನಾಕುಲಂ ಜಿಲ್ಲೆಯಿಂದ 8 ಮಂದಿಗೆ, ಕೋಟಯಂ ಜಿಲ್ಲೆಯಿಂದ 7 ಮಂದಿಗೆ,ಇಡುಕ್ಕಿ, ಕಾಸರಗೋಡು ಜಿಲ್ಲೆಗಳಿಂದ ತಲಾ ಆರು ಮಂದಿಗೆ, ತಿರುವನಂತಪುರಂ ಜಿಲ್ಲೆಯಿಂದ 4 ಮಂದಿಗೆ, ಕೋಳಿಕೋಡ್ ಜಿಲ್ಲೆಯಿಂದ ಮೂವರಿಗೆ ಮತ್ತು ವಯನಾಡ್ ಜಿಲ್ಲೆಯ ಇಬ್ಬರಿಗೆ ರೋಗ ದೃಡಪಡಿಸಿರುವುದು.
ರೋಗ ದೃಡಪಡಿಸಿದವರಲ್ಲಿ 98 ಮಂದಿ ವಿದೇಶಗಳಿಂದ ಮತ್ತು 46 ಮಂದಿ ಇತರ ರಾಜ್ಯಗಳಿಂದ ಬಂದವರು. ಕುವೈತ್ -49, ಯು.ಎ.ಇ -22, ಸೌದಿ ಅರೇಬಿಯಾ -12, ಒಮಾನ್ -5, ಕತಾರ್ -4, ಬಹ್ರೇನ್ -2, ತಜಿಕಿಸ್ತಾನ್ -2, ಮಲೇಷ್ಯಾ -1 ಮತ್ತು ನೈಜೀರಿಯಾ -1 ಹೀಗೆ ವಿದೇಶದಿಂದ ಬಂದವರು. ದೆಹಲಿ -15, ಪಶ್ಚಿಮ ಬಂಗಾಳ -12, ಮಹಾರಾಷ್ಟ್ರ -5, ತಮಿಳುನಾಡು -5, ಕರ್ನಾಟಕ -4, ಆಂಧ್ರಪ್ರದೇಶ -3, ಗುಜರಾತ್ -1 ಮತ್ತು ಗೋವಾ -1 ಹೀಗೆ ಇತರ ರಾಜ್ಯಗಳಿಂದ ಬಂದವರು.8 ಜನರಿಗೆ ಸಂಪರ್ಕದ ಮೂಲಕ ಸೋಂಕು ತಗುಲಿತು. ಕಣ್ಣೂರು ಜಿಲ್ಲೆಯ ಮೂವರಿಗೆ ಮತ್ತು ಕೊಲ್ಲಂ, ಆಲಪ್ಪುಳ, ಕೋಟಯಂ, ಎರ್ನಾಕುಲಂ ಮತ್ತು ತ್ರಿಶೂರ್ ಜಿಲ್ಲೆಗಳಲ್ಲಿನ ತಲಾ ಒಬ್ಬೊಬ್ಬರಿಗೆ ಸಂಪರ್ಕದ ಮೂಲಕ ಸೋಂಕು ತಗುಲಿರುವುದು.
ರೋಗ ದೃಡಪಡಿಸಿ ಚಿಕಿತ್ಸೆಯಲ್ಲಿದ್ದ 81 ಜನರ,ತಪಾಸಣಾ ಫಲಿತಾಂಶ ಋಣಾತ್ಮಕವಾಗಿವೆ. ಕೋಳಿಕೋಡ್ ಜಿಲ್ಲೆಯಿಂದ 35 ಜನರ (ಕಣ್ಣೂರು -2), ಅಲಪ್ಪುಳ ಜಿಲ್ಲೆಯಿಂದ 13 ಜನರ, ಕಣ್ಣೂರು ಜಿಲ್ಲೆಯಿಂದ 10 ಜನರ (ಕಾಸರ್‌ಗೋಡ್ -3, ಆಲಪ್ಪುಳ -1, ಮಲಪ್ಪುರಂ -1), ಮಲಪ್ಪುರಂ ಜಿಲ್ಲೆಯಿಂದ 7 ಜನರ (ತ್ರಿಶೂರ್ -1), ಎರ್ನಾಕುಲಂ, ತ್ರಿಶೂರ್ ಜಿಲ್ಲೆಗಳಿಂದ ತಲಾ ನಾಲ್ಕು ಜನರ, ಕೋಟಯಂ ಜಿಲ್ಲೆಯಿಂದ ಮೂವರ, ಇಡುಕ್ಕಿ ಜಿಲ್ಲೆಯಿಂದ ಎರಡು ಜನರ, ಕೊಲ್ಲಂ, ಪಥನಮತ್ತಿಟ್ಟ ಮತ್ತು ಪಾಲಕ್ಕಾಡ್ ಜಿಲ್ಲೆಗಳಿಂದ ತಲಾ ಒಬ್ಬೊಬ್ಬರ ತಪಾಸಣಾ ಫಲಿತಾಂಶ ಋಣಾತ್ಮಕವಾಗಿರುವುದು. ಇದರೊಂದಿಗೆ 1691 ಜನರಿಗೆ ಈ ರೋಗ ಪತ್ತೆಯಾಗಿದ್ದು ಇನ್ನು ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 1,888 ಜನರು ಕೋವಿಡ್‌ನಿಂದ ಗುಣಮುಖರಾಗಿದ್ದಾರೆ.
ಪ್ರಸ್ತುತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 1,54,759 ಜನರು ನಿರೀಕ್ಷಣೆಯಲ್ಲಿದ್ದಾರೆ. ಈ ಪೈಕಿ 1,52,477 ಜನರು ಮನೆ / ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ನಲ್ಲಿ ಮತ್ತು 2282 ಜನರು ಆಸ್ಪತ್ರೆಗಳಲ್ಲಿ ನಿರೀಕ್ಷಣೆಯಲ್ಲಿರುವರು. ಒಟ್ಟು 288 ಜನರನ್ನು ಬುಧವಾರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ 4941 ಮಾದರಿಗಳನ್ನು ಪರಿಶೀಲಿಸಲಾಗಿದೆ.ಈವರೆಗೆ ಒಟ್ಟು 1,97,567 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಈ ಪೈಕಿ 4005 ಮಾದರಿಗಳ ತಪಾಸಣಾ ಫಲಿತಾಂಶ ಬರಬೇಕಾಗಿದೆ. ಇದಲ್ಲದೆ, ಸೆಂಟಿನೆಲ್ ಸರ್ವೈಲೆನ್ಸ್ ನ ಭಾಗವಾಗಿ ಆದ್ಯತೆಯ ಗುಂಪುಗಳಿಂದ ಸಂಗ್ರಹಿಸಲಾದ 40,537 ಮಾದರಿಗಳಲ್ಲಿ 39,113 ಮಾದರಿಗಳು ನಕಾರಾತ್ಮಕವಾಗಿವೆ.
ಇಂದು 14 ಹೊಸ ಹಾಟ್ ಸ್ಪಾಟ್‌ಗಳಿವೆ.
14 ಪ್ರದೇಶಗಳನ್ನು ಕಂಟೈನ್‌ಮೆಂಟ್ ವಲಯದಿಂದ ಹೊರಗಿಡಲಾಗಿದೆ. ಪ್ರಸ್ತುತ ಒಟ್ಟು 111 ಹಾಟ್ ಸ್ಪಾಟ್‌ಗಳಿವೆ.
- Log in to post comments