Skip to main content

ಕೇರಳದಲ್ಲಿ  ಸೋಮವಾರ 193 ಜನರಿಗೆ ಕೋವಿಡ್ ದೃಡಪಡಿಸಿದೆ; 167 ಮಂದಿ ಗುಣಮುಖರಾದರು

 

ಚಿಕಿತ್ಸೆಯಲ್ಲಿರುವವರು 2252 ಜನರು

 

10 ಹೊಸ ಹಾಟ್ ಸ್ಪಾಟ್‌ಗಳು

 

ಕೇರಳದಲ್ಲಿ ಸೋಮವಾರ 193 ಜನರಿಗೆ ಕೋವಿಡ್ -19 ದೃಡಪಡಿಸಿರುವುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದರು. ಮಲಪ್ಪುರಂ ಜಿಲ್ಲೆಯಿಂದ 35 ಮಂದಿಗೆ, ಪಥನಂತ್ತಿಟ್ಟ ಜಿಲ್ಲೆಯಿಂದ 26 ಮಂದಿಗೆ, ಎರ್ನಾಕುಲಂ ಜಿಲ್ಲೆಯಿಂದ 25 ಮಂದಿಗೆ, ಆಲಪ್ಪುಳ, ಕೋಳಿಕೋಡ್ ಜಿಲ್ಲೆಗಳಿಂದ ತಲಾ 15 ಮಂದಿಗೆ, ತ್ರಿಶೂರ್ ಜಿಲ್ಲೆಯಿಂದ 14 ಮಂದಿಗೆ, ಕೊಲ್ಲಂ, ಕಣ್ಣೂರು ಜಿಲ್ಲೆಗಳಿಂದ ತಲಾ 11 ಮಂದಿಗೆ, ಪಾಲಕ್ಕಾಡ್ ಮತ್ತು ವಯನಾಡ್ ಜಿಲ್ಲೆಗಳಿಂದ ತಲಾ 8 ಮಂದಿಗೆ, ತಿರುವನಂತಪುರಂ ಜಿಲ್ಲೆಯಿಂದ ಏಳು ಮಂದಿಗೆ, ಕೋಟಯಂ, ಇಡುಕ್ಕಿ ಮತ್ತು ಕಾಸರಗೋಡು ಜಿಲ್ಲೆಗಳಿಂದ ತಲಾ 6 ಮಂದಿಗೆ ಇಂದು ರೋಗ ದೃಡಪಡಿಸಿರುವುದು.

ರೋಗ ನಿರ್ಣಯ ಮಾಡಿದವರಲ್ಲಿ 92 ಮಂದಿ ವಿದೇಶಗಳಿಂದ ಮತ್ತು 65 ಮಂದಿ ಇತರ ರಾಜ್ಯಗಳಿಂದ ಬಂದವರು. ಯು.ಎ.ಇ -38, ಸೌದಿ ಅರೇಬಿಯಾ -20, ಕುವೈತ್- 11, ಕತಾರ್ -9, ಒಮನ್ -8, ಯೆಮೆನ್ -2, ಮಲೇಷ್ಯಾ -1, ಯು.ಎಸ್.ಎ -1, ಮೊಲ್ಡೊವಾ- 1, ಉಕ್ರೇನ್- 1 ಹೀಗೆ ವಿದೇಶದಿಂದ ಬಂದದ್ದು. ಕರ್ನಾಟಕ -28, ದೆಹಲಿ -9, ತಮಿಳುನಾಡು- 7, ತೆಲಂಗಾಣ- 6, ಮಹಾರಾಷ್ಟ್ರ- 6, ಪಂಜಾಬ್- 1, ಆಂಧ್ರಪ್ರದೇಶ- 1, ಬಿಹಾರ- 1, ಛತ್ತೀಸ್ಗಢ- 1, ಪಶ್ಚಿಮ ಬಂಗಾಳ- 1, ಒಡಿಶಾ- 1, ರಾಜಸ್ಥಾನ- 1, ಅರುಣಾಚಲ್ ಪ್ರದೇಶ-1, ಮಧ್ಯಪ್ರದೇಶ -1 ಹೀಗೆ ಇತರ ರಾಜ್ಯಗಳಿಂದ ಬಂದವರು.35 ಜನರಿಗೆ ಸಂಪರ್ಕದ ಮೂಲಕ ಸೋಂಕು ತಗುಲಿರುವುದು. ಎರ್ನಾಕುಲಂ ಜಿಲ್ಲೆಯ 17 ಮಂದಿಗೆ, ಕೋಳಿಕೋಡ್‌ ಜಿಲ್ಲೆಯ 6 ಮಂದಿಗೆ, ತಿರುವನಂತಪುರಂ ಜಿಲ್ಲೆಯ 4 ಮಂದಿಗೆ, ಮಲಪ್ಪುರಂ ಜಿಲ್ಲೆಯ ಮೂವರಿಗೆ, ಕೊಲ್ಲಂ ಜಿಲ್ಲೆಯ ಇಬ್ಬರಿಗೆ ಮತ್ತು ಪಥನಮತ್ತಟ್ಟ, ಆಲಪ್ಪುಳ, ಪಾಲಕ್ಕಾಡ್ ಜಿಲ್ಲೆಗಳಿಂದ ತಲಾ ಒಬ್ಬೊಬ್ಬರಿಗೆ  ಸಂಪರ್ಕದ ಮೂಲಕ ಸೋಂಕು ತಗುಲಿರುವುದು.

ಮಲಪ್ಪುರಂ ಜಿಲ್ಲೆಯಲ್ಲಿ ನಾಲ್ಕನೇ ತಾರೀಖು ನಿಧನರಾದ ಮೊಹಮ್ಮದ್ (82) ಎಂಬ ವ್ಯಕ್ತಿಯ ತಪಾಸಣಾ ಫಲಿತಾಂಶ ಇದರಲ್ಲಿ ಸೇರಿದೆ.

ಎರ್ನಾಕುಲಂ ಜಿಲ್ಲೆಯಲ್ಲಿ ರೋಗ ದೃಡಪಡಿಸಿ ಚಿಕಿತ್ಸೆ ಪಡೆಯುತ್ತಿದ್ದ ಯೂಸುಫ್ ಸೈಫುದ್ದೀನ್ (66) ಭಾನುವಾರ ನಿಧನರಾದರು.

ರೋಗ ದೃಡಪಡಿಸಿ ಚಿಕಿತ್ಸೆಯಲ್ಲಿದ್ದ 167 ಜನರ ತಪಾಸಣಾ ಫಲಿತಾಂಶ ಋಣಾತ್ಮಕವಾಗಿವೆ.

ಪ್ರಸ್ತುತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 1,83,291 ಜನರು ನಿರೀಕ್ಷಣೆಯಲ್ಲಿದ್ದಾರೆ. ಈಗ  ನಿರೀಕ್ಷಣದಲ್ಲಿರುವವರಲ್ಲಿ 1,80,316 ಜನರು ಮನೆ / ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ನಲ್ಲಿ ಮತ್ತು 2975 ಜನರು ಆಸ್ಪತ್ರೆಗಳಲ್ಲಿ ನಿರೀಕ್ಷಣೆಯಲ್ಲಿರುವರು. 384 ಜನರನ್ನು ಸೋಮವಾರ ಆಸ್ಪತ್ರೆಗೆ ದಾಖಲಿಸಲಾಗಿದೆ.

24 ಗಂಟೆಗಳ ಒಳಗೆ 9927 ಮಾದರಿಗಳನ್ನು ಪರೀಕ್ಷಿಸಲಾಯಿತು. ರುಟೀನ್ ಮಾದರಿ, ಓಗ್ಮೆಂಟೆಡ್ ಮಾದರಿ, ಸೆಂಟಿನೆಲ್ ಮಾದರಿ, ಪೂಲ್ಡ್ ಸೆಂಟಿನೆಲ್, ಸಿ.ಬಿ. ನ್ಯಾಟ್ ಮತ್ತು ಟ್ರೂ ನ್ಯಾಟ್ ಸೇರಿದಂತೆ ಒಟ್ಟು 2,75,823 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಈ ಪೈಕಿ 4179 ಮಾದರಿಗಳ ತಪಾಸಣಾ ಫಲಿತಾಂಶ ಬರಬೇಕಾಗಿದೆ. ಇದಲ್ಲದೆ, ಸೆಂಟಿನೆಲ್ ಸರ್ವೈಲೆನ್ಸ್ ನ ಭಾಗವಾಗಿ ಆದ್ಯತೆಯ ಗುಂಪುಗಳಿಂದ ಸಂಗ್ರಹಿಸಲಾದ 60,006 ಮಾದರಿಗಳಲ್ಲಿ 57,804 ಮಾದರಿಗಳು ನಕಾರಾತ್ಮಕವಾಗಿವೆ.

ಸೋಮವಾರದ 10 ಹೊಸ ಹಾಟ್ ಸ್ಪಾಟ್‌ಗಳಿವೆ.

ಅದೇಸಮಯ, 6 ಪ್ರದೇಶಗಳನ್ನು ಹಾಟ್ ಸ್ಪಾಟ್ನಿಂದ ಹೊರಗಿಡಲಾಗಿದೆ. ಪ್ರಸ್ತುತ ಒಟ್ಟು 157 ಹಾಟ್ ಸ್ಪಾಟ್‌ಗಳಿವೆ.

date