Skip to main content

ಕೇರಳದಲ್ಲಿ ಮಂಗಳವಾರ  272 ಜನರಿಗೆ ಕೋವಿಡ್; 111 ಜನರು ಗುಣಮುಖರಾದರು

 

ಚಿಕಿತ್ಸೆಯಲ್ಲಿರುವವರು 2411 ಮಂದಿ; 18 ಹೊಸ ಹಾಟ್ ಸ್ಪಾಟ್‌ಗಳು

 

ಕೇರಳದಲ್ಲಿ ಮಂಗಳವಾರ 272 ಜನರಿಗೆ ಕೋವಿಡ್ -19 ದೃಡಪಡಿಸಿರುವುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದರು. ಮಲಪ್ಪುರಂ ಜಿಲ್ಲೆಯಿಂದ 63 ಮಂದಿಗೆ, ತಿರುವನಂತಪುರಂ ಜಿಲ್ಲೆಯಿಂದ 54 ಮಂದಿಗೆ, ಪಾಲಕ್ಕಾಡ್‌ ಜಿಲ್ಲೆಯಿಂದ 29 ಮಂದಿಗೆ, ಎರ್ನಾಕುಲಂ ಜಿಲ್ಲೆಯಿಂದ 21 ಮಂದಿಗೆ, ಕಣ್ಣೂರು ಜಿಲ್ಲೆಯಿಂದ 19 ಮಂದಿಗೆ, ಆಲಪ್ಪುಳ ಜಿಲ್ಲೆಯಿಂದ 18 ಮಂದಿಗೆ, ಕೋಳಿಕೋಡ್‌ ಜಿಲ್ಲೆಯಿಂದ 15 ಮಂದಿಗೆ, ಕಾಸರ್‌ಗೋಡ್‌ ಜಿಲ್ಲೆಯಿಂದ 13 ಮಂದಿಗೆ, ಪಥನಂತ್ತಿಟ್ಟ ಜಿಲ್ಲೆಯಿಂದ 12 ಮಂದಿಗೆ,ಕೊಲ್ಲಂ ಜಿಲ್ಲೆಯಿಂದ  11 ಮಂದಿಗೆ, ತ್ರಿಶೂರ್ ಜಿಲ್ಲೆಯಿಂದ 10 ಮಂದಿಗೆ, ಕೋಟಯಂ, ವಯನಾಡ್ ಜಿಲ್ಲೆಗಳಿಂದ ತಲಾ ಮೂವರಿಗೆ ಮತ್ತು ಇಡುಕ್ಕಿ ಜಿಲ್ಲೆಯಿಂದ ಒಬ್ಬರಿಗೆ ರೋಗ ದೃಡಪಟ್ಟಿರುವುದು.

 

ರೋಗ ದೃಡಪಡಿಸಿದವರಲ್ಲಿ 157 ಮಂದಿ ವಿದೇಶಗಳಿಂದ ಮತ್ತು 38 ಮಂದಿ ಇತರ ರಾಜ್ಯಗಳಿಂದ ಬಂದವರು.

 

68 ಜನರು ಸಂಪರ್ಕದ ಮೂಲಕ ಸೋಂಕಿಗೆ ಒಳಗಾಗಿದ್ದಾರೆ. ತಿರುವನಂತಪುರಂ ಜಿಲ್ಲೆಯಲ್ಲಿ 42 ಮಂದಿಗೆ , ಎರ್ನಾಕುಲಂ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ತಲಾ 11 ಮಂದಿಗೆ, ಆಲಪ್ಪುಳ ಜಿಲ್ಲೆಯ ಮೂವರಿಗೆ ಮತ್ತು ಪಾಲಕ್ಕಾಡ್ ಜಿಲ್ಲೆಯ ಒಬ್ಬರಿಗೆ ಸಂಪರ್ಕದ ಮೂಲಕ ಸೋಂಕು ತಗುಲಿರುವುದು. 7 ಆರೋಗ್ಯ ಕಾರ್ಯಕರ್ತರಿಗೂ ಸಹ ಸೋಂಕು ತಗುಲಿತು. ತಿರುವನಂತಪುರಂ ಜಿಲ್ಲೆಯ ಐವರಿಗೆ ಮತ್ತು ಮಲಪ್ಪುರಂ ಮತ್ತು ಪಥನಂತ್ತಿಟ್ಟ ಜಿಲ್ಲೆಗಳಲ್ಲಿನ ತಲಾ ಒಬ್ಬೊಬ್ಬ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ತಗುಲಿರುವುದು. ಇದಲ್ಲದೆ, ಕಣ್ಣೂರು ಜಿಲ್ಲೆಯ ಒಬ್ಬ ಸಿ.ಐ.ಎಸ್.ಎಫ್. ಜವಾನ್ ಮತ್ತು ಒಬ್ಬ ಡಿ.ಎಸ್.ಸಿ ಜವಾನ್ ಗೆ ಕೂಡ ಸೋಂಕು ತಗುಲಿತು.

 

ರೋಗ ದೃಡಪಡಿಸಿ ಚಿಕಿತ್ಸೆಯಲ್ಲಿದ್ದ  111 ಜನರ ತಪಾಸಣಾ ಫಲಿತಾಂಶ ನಕಾರಾತ್ಮಕವಾಗಿವೆ. ಇದರೊಂದಿಗೆ 2411 ಜನರಿಗೆ ಈ ರೋಗ ಪತ್ತೆಯಾಗಿದ್ದು ಇನ್ನು ಚಿಕಿತ್ಸೆ ಪಡೆಯುತ್ತಿದ್ದಾರೆ.  ಈವರೆಗೆ 3454 ಜನರು ಕೋವಿಡ್‌ನಿಂದ ಗುಣಮುಖರಾಗಿದ್ದಾರೆ.

 

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 1,86,576 ಜನರು ನಿರೀಕ್ಷಣದಲ್ಲಿದ್ದಾರೆ. ನಿರೀಕ್ಷಣದಲ್ಲಿರುವವರಲ್ಲಿ ಒಟ್ಟು  1,83,542 ಜನರು ಮನೆ / ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ನಲ್ಲಿ ಮತ್ತು 3034 ಜನರು ಆಸ್ಪತ್ರೆಗಳಲ್ಲಿ ನಿರೀಕ್ಷಣದಲ್ಲಿರುವರು.ಒಟ್ಟು 378 ಜನರನ್ನು ಮಂಗಳವಾರ ಆಸ್ಪತ್ರೆಗೆ ದಾಖಲಿಸಲಾಗಿದೆ.

 

ಕಳೆದ 24 ಗಂಟೆಗಳಲ್ಲಿ 7516 ಮಾದರಿಗಳನ್ನು ಪರಿಶೀಲಿಸಲಾಗಿದೆ.

 

18 ಹೊಸ ಹಾಟ್ ಸ್ಪಾಟ್‌ಗಳಿವೆ. 6 ಪ್ರದೇಶಗಳನ್ನು ಹಾಟ್ ಸ್ಪಾಟ್‌ನಿಂದ ಹೊರಗಿಡಲಾಗಿದೆ. ಪ್ರಸ್ತುತ ಒಟ್ಟು 169 ಹಾಟ್ ಸ್ಪಾಟ್‌ಗಳಿವೆ.

date