Skip to main content

ಶನಿವಾರ ಕೇರಳದಲ್ಲಿ 108 ಜನರಿಗೆ ಕೋವಿಡ್, 50 ಜನರು ಗುಣಮುಖರಾದರು

 

 

* ಚಿಕಿತ್ಸೆಯಲ್ಲಿರುವವರು 1029 ಮಂದಿ 

* 10 ಹೊಸ ಹಾಟ್ ಸ್ಪಾಟ್‌ಗಳು

 

ಕೇರಳದಲ್ಲಿ ಶನಿವಾರ 108 ಜನರಿಗೆ  ಕೋವಿಡ್ -19  ದೃಡಪಡಿಸಿರುವುದಾಗಿ ಆರೋಗ್ಯ ಸಚಿವೆ ಕೆ.ಕೆ. ಶೈಲಾಜಾ ಟೀಚರ್ ತಿಳಿಸಿದರು. ಕೊಲ್ಲಂ ಜಿಲ್ಲೆಯಿಂದ 19 ಮಂದಿಗೆ, ತ್ರಿಶೂರ್‌ ಜಿಲ್ಲೆಯಿಂದ 16 ಮಂದಿಗೆ, ಮಲಪ್ಪುರಂ ಮತ್ತು ಕಣ್ಣೂರು ಜಿಲ್ಲೆಯಿಂದ ತಲಾ 12 ಮಂದಿಗೆ, ಪಾಲಕ್ಕಾಡ್‌ ಜಿಲ್ಲೆಯಿಂದ 11 ಮಂದಿಗೆ, ಕಾಸರ್‌ಗೋಡ್‌ ಜಿಲ್ಲೆಯಿಂದ  10 ಮಂದಿಗೆ ಮತ್ತು ಪಥನಮತ್ತಿಟ್ಟ ಜಿಲ್ಲೆಯಿಂದ ಒಂಬತ್ತು ಮಂದಿಗೆ, ಆಲಪ್ಪುಳ ಮತ್ತು ಕೋಳಿಕೋಡ್ ಜಿಲ್ಲೆಗಳಿಂದ ತಲಾ ನಾಲ್ವರಿಗೆ,ತಿರುವನಂತಪುರಂ, ಇಡುಕ್ಕಿ,ಎರ್ನಾಕುಲಂ ಜಿಲ್ಲೆಗಳಿಂದ ತಲಾ ಮೂವರಿಗೆ,ಕೋಟಯಂ ಜಿಲ್ಲೆಯಿಂದ ಇಬ್ಬರಿಗೆ ರೋಗ ದೃಡಪಡಿಸಿರುವುದು. ಈ ಪೈಕಿ 64 ಮಂದಿ ವಿದೇಶಗಳಿಂದ  (ಯು.ಎ.ಇ -28, ಕುವೈತ್ -14, ತಜಿಕಿಸ್ತಾನ್ -13, ಸೌದಿ ಅರೇಬಿಯಾ -4, ನೈಜೀರಿಯಾ -3, ಒಮಾನ್ -1, ಐರ್ಲೆಂಡ್ -1) ಮತ್ತು 34 ಮಂದಿ ಇತರ ರಾಜ್ಯಗಳಿಂದ (ಮಹಾರಾಷ್ಟ್ರ -15 ,ದೆಹಲಿ -8, ತಮಿಳುನಾಡು- 5, ಗುಜರಾತ್ - 4, ಮಧ್ಯಪ್ರದೇಶ - 1,ಆಂಧ್ರಪ್ರದೇಶ -1) ಬಂದವರು. ಸುಮಾರು 10 ಜನರಿಗೆ ಸಂಪರ್ಕದ ಮೂಲಕ ಸೋಂಕು ತಗುಲಿರುವುದು. ಪಾಲಕ್ಕಾಡ್‌ ಜಿಲ್ಲೆಯ 7 ಜನರಿಗೆ, ಮಲಪ್ಪುರಂ ಜಿಲ್ಲೆಯ ಇಬ್ಬರಿಗೆ, ಮತ್ತು ತ್ರಿಶೂರ್ ಜಿಲ್ಲೆಯ ಒಬ್ಬರಿಗೆ ಸಂಪರ್ಕದ ಮೂಲಕ ರೋಗ ತಗುಲಿರುವುದು.

ರೋಗ ದೃಡಪಡಿಸಿ ಮಲಪ್ಪುರಂ ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪರಪ್ಪನಂಗಾಡಿ ನಿವಾಸಿ ಹಮ್ಸಕೋಯಾ (61) ಶನಿವಾರ ಬೆಳಿಗ್ಗೆ ನಿಧನರಾದರು.

ರೋಗ ಪತ್ತೆಯಾಗಿ ಚಿಕಿತ್ಸೆಯಲ್ಲಿದ್ದ 50 ಜನರ ತಪಾಸಣಾ ಫಲಿತಾಂಶ ಋಣಾತ್ಮಕವಾಗಿವೆ. ಪಾಲಕ್ಕಾಡ್‌ ಜಿಲ್ಲೆಯ ಮೂವತ್ತು ಮಂದಿಯ, ಕೋಳಿಕೋಡ್‌ ಜಿಲ್ಲೆಯಿಂದ 7 ಮಂದಿಯ (6 ಏರ್ ಇಂಡಿಯಾ ನೌಕರರು), ಎರ್ನಾಕುಲಂ ಜಿಲ್ಲೆಯಿಂದ 6 ಮಂದಿಯ (ಇಬ್ಬರು ಕೊಲ್ಲಂ ನಿವಾಸಿ ), ಕಣ್ಣೂರು ಜಿಲ್ಲೆಯಿಂದ ಐವರ, ಇಡುಕ್ಕಿ ಮತ್ತು ಕಾಸರಗೋಡು ಜಿಲ್ಲೆಗಳಿಂದ ತಲಾ ಒಬ್ಬೊಬ್ಬರ ತಪಾಸಣಾ ಫಲಿತಾಂಶ ಋಣಾತ್ಮಕವಾಗಿರುವುದು. ಈವರೆಗೆ 1029 ಜನರಿಗೆ ಈ ರೋಗ ಪತ್ತೆಯಾಗಿದ್ದು ಇನ್ನು ಚಿಕಿತ್ಸೆ ಪಡೆಯುತ್ತಿದ್ದಾರೆ.  ಈವರೆಗೆ 762 ಜನರು ಕೋವಿಡ್‌ನಿಂದ ಗುಣಮುಖರಾಗಿದ್ದಾರೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 1,83,097 ಜನರು ನಿರೀಕ್ಷಣದಲ್ಲಿದ್ದಾರೆ. ಈ ಪೈಕಿ 1,81,482  ಜನರು ಮನೆ / ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ನಲ್ಲಿ ಮತ್ತು 1615 ಜನರು ಆಸ್ಪತ್ರೆಗಳಲ್ಲಿ ನಿರೀಕ್ಷಣದಲ್ಲಿರುವರು. 284 ಜನರನ್ನು ಶನಿವಾರ ಆಸ್ಪತ್ರೆಗೆ ದಾಖಲಿಸಲಾಗಿದೆ.

24 ಗಂಟೆಗಳ ಒಳಗೆ 3903 ಮಾದರಿಗಳನ್ನು ಪರಿಶೀಲನೆಗೆ ಕಳುಹಿಸಲಾಗಿದೆ. ಇಲ್ಲಿಯವರೆಗೆ, 81,517 ವ್ಯಕ್ತಿಗಳ (ಓಗ್ಮೆಂಟೆಡ್ ಮಾದರಿ ಸೇರಿದಂತೆ) ಮಾದರಿಯನ್ನು ಪರಿಶೀಲನೆಗಾಗಿ ಕಳುಹಿಸಲಾಗಿದೆ.ಇದರಲ್ಲಿ ಲಭ್ಯವಾದ 77,517 ಮಾದರಿಗಳ, ತಪಾಸಣಾ ಫಲಿತಾಂಶ ಋಣಾತ್ಮಕವಾಗಿವೆ. ಇದಲ್ಲದೆ, ಸೆಂಟಿನೆಲ್ ಸರ್ವೈಲೆನ್ಸ್ ನ ಭಾಗವಾಗಿ ಆರೋಗ್ಯ ಕಾರ್ಯಕರ್ತರು, ಅತಿಥಿ ಕೆಲಸಗಾರರು, ಸಾಮಾಜಿಕ ಸಂಪರ್ಕ ಹೆಚ್ಚಾಗಿರುವ ವ್ಯಕ್ತಿಗಳ ಆದ್ಯತೆಯ ಗುಂಪುಗಳಿಂದ 20,769 ಮಾದರಿಗಳನ್ನು ಸಂಗ್ರಹಿಸಿರುವುದರಲ್ಲಿ 19,597 ಮಾದರಿಗಳು ನಕಾರಾತ್ಮಕವಾಗಿವೆ. 5,510 ಪುನರಾವರ್ತಿತ ಮಾದರಿಗಳು ಸೇರಿದಂತೆ ಒಟ್ಟು 1,07,796 ಮಾದರಿಗಳನ್ನು ಪರೀಕ್ಷಿಸಲಾಯಿತು.

ಇಂದು ಹೊಸದಾಗಿ 10 ಹಾಟ್ ಸ್ಪಾಟ್‌ಗಳಿವೆ. ಪಾಲಕ್ಕಾಡ್ ಜಿಲ್ಲೆಯ,ಪುದುಪರಿಯಾರಂ, ಕನ್ನಡಿ, ವಂಡಾಳಿ, ವಡಕ್ಕಂಚೇರಿ, ಪುಕ್ಕೊಟ್ಟುಕಾವ್, ತೆಂಕರ, ಪಿರೈರಿ, ಕೊಲ್ಲೆಂಗೋಡ್, ಕೊಲ್ಲಂ ಜಿಲ್ಲೆಯ ನೀಂದಕರ ಮತ್ತು ಕೋಳಿಕೋಡ್ ಜಿಲ್ಲೆಯ ಒಳವಣ್ಣ ಮುಂತಾದುವು ಹೊಸ ಹಾಟ್ ಸ್ಪಾಟ್‌ಗಳು. ಈಗಿನಂತೆ,ಪ್ರಸ್ತುತ ಒಟ್ಟು 138 ಹಾಟ್‌ಸ್ಪಾಟ್‌ಗಳಿವೆ.

date