ರಾಜ್ಯದಲ್ಲಿ 16 ಮಂದಿಗೆ ಕೂಡ ಕೋವಿಡ್; ರೋಗಿಗಳ ಸಂಖ್ಯೆಯಲ್ಲಿನ ಹೆಚ್ಚಳವು ಆತಂಕಕ್ಕೆ ಕಾರಣವಾಗಿದೆ ಎಂದು ಮುಖ್ಯಮಂತ್ರಿ
ಕೇರಳದಲ್ಲಿ ಶುಕ್ರವಾರ 16 ಮಂದಿಗೆ ಕೂಡ ಕೋವಿಡ್ -19 ದೃಡಪಡಿಸಿರುವುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದರು. ವಯನಾಡ್ ಜಿಲ್ಲೆಯಿಂದ ಐವರಿಗೆ, ಮಲಪ್ಪುರಂ ಜಿಲ್ಲೆಯಿಂದ ನಾಲ್ವರಿಗೆ, ಆಲಪ್ಪುಳ ಮತ್ತು ಕೋಳಿಕೋಡ್ ಜಿಲ್ಲೆಗಳಿಂದ ಇಬ್ಬರಿಗೆ ಮತ್ತು ಕೊಲ್ಲಂ, ಪಾಲಕ್ಕಾಡ್ ಮತ್ತು ಕಾಸರಗೋಡು ಜಿಲ್ಲೆಗಳಿಂದ ತಲಾ ಒಬ್ಬೊಬ್ಬರಿಗೆ ರೋಗ ದೃಡಪಡಿಸಿರುವುದು. ಈ ಪೈಕಿ ಏಳು ಮಂದಿ ವಿದೇಶದಿಂದ, ನಾಲ್ವರು ತಮಿಳುನಾಡಿನಿಂದ ಮತ್ತು ಇಬ್ಬರು ಮುಂಬೈನಿಂದ ಬಂದವರು. ಈವರೆಗೆ 576 ರೋಗಿಗಳಿಗೆ ಈ ರೋಗ ದೃಡಪಡಿಸಿರುವುದು. ಈ ಪೈಕಿ 80 ಮಂದಿ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಕೋವಿಡ್ 19 ಪ್ರಕರಣಗಳು ಹೆಚ್ಚುತ್ತಿರುವುದು ಆತಂಕದ ವಿಷಯವಾಗಿದೆ. ಸಂಪರ್ಕದ ಮೂಲಕ ರೋಗ ಹರಡುವ ಸಾದ್ಯತೆ ಇದೆ.ಮೀಸಲು ಹೆಚ್ಚಿಸುವ ಅಗತ್ಯವಿದೆ ಎಂದು ಮುಖ್ಯಮಂತ್ರಿ ಹೇಳಿದರು.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 48,825 ಜನರು ನಿರೀಕ್ಷಣೆಯಲ್ಲಿದ್ದಾರೆ. ಈ ಪೈಕಿ 48,287 ಜನರು ಮನೆಗಳಲ್ಲಿ ಮತ್ತು 538 ಜನರು ಆಸ್ಪತ್ರೆಗಳಲ್ಲಿ ನಿರೀಕ್ಷಣೆಯಲ್ಲಿರುವರು. ಒಟ್ಟು 122 ಜನರನ್ನು ಶುಕ್ರವಾರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಲಪ್ಪುರಂನಲ್ಲಿ ಹೆಚ್ಚಿನ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿರುವುದು,36 ಮಂದಿ. ಕೋಳಿಕೋಡ್ ನಲ್ಲಿ 17 ಮತ್ತು ಕಾಸರ್ಗೋಡ್ ನಲ್ಲಿ 16 ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಪ್ರಕರಣಗಳು ವಯನಾಡ್ ಜಿಲ್ಲೆಯಿಂದ ವರದಿಯಾಗಿದೆ,19 ಮಂದಿ.
ಇಲ್ಲಿಯವರೆಗೆ, 42,201 ವ್ಯಕ್ತಿಗಳ (ಓಗ್ಮೆಂಟೆಡ್ ಮಾದರಿ ಸೇರಿದಂತೆ) ಮಾದರಿಯನ್ನು ಪರಿಶೀಲನೆಗಾಗಿ ಕಳುಹಿಸಲಾಗಿದೆ. ಇದರಲ್ಲಿ ಲಭ್ಯವಾದ 40,639 ಮಾದರಿಗಳ, ತಪಾಸಣಾ ಫಲಿತಾಂಶ ಋಣಾತ್ಮಕವಾಗಿವೆ. ಇದಲ್ಲದೆ, ಸೆಂಟಿನೆಲ್ ಸರ್ವೈಲೆನ್ಸ್ ನ ಭಾಗವಾಗಿ, ಆರೋಗ್ಯ ಕಾರ್ಯಕರ್ತರು, ಅತಿಥಿ ಕೆಲಸಗಾರರು ಮತ್ತು ಸಾಮಾಜಿಕ ಸಂಪರ್ಕ ಹೆಚ್ಚಾಗಿರುವ ವ್ಯಕ್ತಿಗಳ ಆದ್ಯತೆಯ ಗುಂಪುಗಳಿಂದ 4630 ಮಾದರಿಗಳನ್ನು ಸಂಗ್ರಹಿಸಿರುವುದರಲ್ಲಿ 4424 ಮಾದರಿಗಳು ನಕಾರಾತ್ಮಕವಾಗಿವೆ. ಕೇರಳದಲ್ಲಿ ಪ್ರಸ್ತುತ 16 ಹಾಟ್ಸ್ಪಾಟ್ಗಳಿವೆ. ವಿದೇಶದಿಂದ ಬಂದ 311 ಮಂದಿಗೆ ಒಟ್ಟು ರೋಗ
ದೃಡಪಡಿಸಿರುವುದು. ಈ ಪೈಕಿ ಎಂಟು ಮಂದಿ ವಿದೇಶಿಯರು. ಇತರ ರಾಜ್ಯಗಳಿಂದ ಬಂದ ಸುಮಾರು 70 ಜನರಿಗೆ ಈ ರೋಗ ಪತ್ತೆಯಾಗಿದೆ.187 ಜನರಿಗೆ ಸಂಪರ್ಕದ ಮೂಲಕ ಸೋಂಕು ತಗುಲಿದೆ.
- Log in to post comments