ಕೇರಳದಲ್ಲಿ 29 ಮಂದಿಗೆ ಕೂಡ ಕೋವಿಡ್, ಚಿಕಿತ್ಸೆಯಲ್ಲಿರುವವರು 130 ಮಂದಿ
* ಸೋಮವಾರ ಯಾರೂ ಗುಣಮುಖರಾಗಿಲ್ಲ
* ಇದುವರೆಗೆ ಗುಣಮುಖರಾದವರು 497
* ಹೊಸ ಆರು ಹಾಟ್ ಸ್ಪಾಟ್‌ಗಳು ಕೂಡ
ಕೇರಳದಲ್ಲಿ ಸೋಮವಾರ 29 ಜನರಿಗೆ ಕೋವಿಡ್ -19 ದೃಡಪಡಿಸಿರುವುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದರು. ಕೊಲ್ಲಂ ಜಿಲ್ಲೆಯಿಂದ ಆರು ಮಂದಿಗೆ, ತ್ರಿಶೂರ್ ಜಿಲ್ಲೆಯಿಂದ ನಾಲ್ವರಿಗೆ, ತಿರುವನಂತಪುರಂ ಮತ್ತು ಕಣ್ಣೂರು ಜಿಲ್ಲೆಗಳಿಂದ ತಲಾ ಮೂವರಿಗೆ, ಪಥನಮತ್ತಿಟ್ಟ, ಆಲಪ್ಪುಳ, ಕೊಟ್ಟಾಯಂ, ಕೋಳಿಕೋಡ್ ಮತ್ತು ಕಾಸರಗೋಡು ಜಿಲ್ಲೆಗಳಿಂದ ತಲಾ ಇಬ್ಬರಿಗೆ, ಎರ್ನಾಕುಲಂ, ಪಾಲಕ್ಕಾಡ್ ಮತ್ತು ಮಲಪ್ಪುರಂ ಜಿಲ್ಲೆಗಳಿಂದ ಒಬ್ಬೊಬ್ಬರಿಗೆ ರೋಗ ದೃಡಪಡಿಸಿರುವುದು. ಈ ಪೈಕಿ 21 ಮಂದಿ ವಿದೇಶದಿಂದ (ಯು.ಎ.ಇ -13, ಮಾಲಿ ದ್ವೀಪ -4, ಸೌದಿ -2, ಕುವೈತ್ -1, ಕತಾರ್ -1) ಮತ್ತು 7 ಮಂದಿ ಇತರ ರಾಜ್ಯಗಳಿಂದ (ಮಹಾರಾಷ್ಟ್ರ -6, ತಮಿಳುನಾಡು -1)ಬಂದವರು. ಕಣ್ಣೂರು ಜಿಲ್ಲೆಯ ವ್ಯಕ್ತಿಯೊಬ್ಬರು ಆರೋಗ್ಯ ಕಾರ್ಯಕರ್ತೆ.
ಅದೇಸಮಯ, ರೋಗ ದೃಡಪಡಿಸಿ ಚಿಕಿತ್ಸೆಯಲ್ಲಿದ್ದ ಯಾರೊಬ್ಬರ ತಪಾಸಣಾ ಫಲಿತಾಂಶಗಳು ನಕಾರಾತ್ಮಕವಾಗಿಲ್ಲ.ಈವರೆಗೆ 130 ಜನರಿಗೆ ರೋಗ ದೃಡಪಡಿಸಿ ಇನ್ನು ಚಿಕಿತ್ಸೆಯಲ್ಲಿದ್ದಾರೆ. ಈವರೆಗೆ 497 ಜನರು ಕೋವಿಡ್‌ನಿಂದ ಗುಣಮುಖರಾಗಿದ್ದಾರೆ.
ವಿಮಾನ ನಿಲ್ದಾಣದ ಮೂಲಕ 3998 ಮಂದಿ, ಬಂದರು ಮೂಲಕ 1621 ಮಂದಿ, ಚೆಕ್ ಪೋಸ್ಟ್ ಮೂಲಕ 58,919 ಮಂದಿ ಮತ್ತು ರೈಲ್ವೆ ಮೂಲಕ 1026 ಮಂದಿ ಸೇರಿದಂತೆ ರಾಜ್ಯದಲ್ಲಿ ಒಟ್ಟು 65,564 ಜನರು ಆಗಮಿಸಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 67,789 ಜನರು ನಿರೀಕ್ಷಣೆಯಲ್ಲಿದ್ದಾರೆ. ಈ ಪೈಕಿ 67316 ಜನರು ಮನೆ /ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ನಲ್ಲಿ ಮತ್ತು 473 ಮಂದಿ ಆಸ್ಪತ್ರೆಗಳಲ್ಲಿ ನಿರೀಕ್ಷಣದಲ್ಲಿರುವರು. ಒಟ್ಟು 127 ಜನರನ್ನು ಸೋಮವಾರ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಲ್ಲಿಯವರೆಗೆ, 45,905 ವ್ಯಕ್ತಿಗಳ (ಓಗ್ಮೆಂಟೆಡ್ ಮಾದರಿ ಸೇರಿದಂತೆ) ಮಾದರಿಯನ್ನು ಪರಿಶೀಲನೆಗಾಗಿ ಕಳುಹಿಸಲಾಗಿದೆ. ಇದರಲ್ಲಿ ಲಭ್ಯವಾದ 44,681 ಮಾದರಿಗಳ, ತಪಾಸಣಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ಇದಲ್ಲದೆ, ಸೆಂಟಿನೆಲ್ ಸರ್ವೈಲೆನ್ಸ್ ನ ಭಾಗವಾಗಿ ಆರೋಗ್ಯ ಕಾರ್ಯಕರ್ತರು, ಅತಿಥಿ ಕೆಲಸಗಾರರು ಮತ್ತು ಸಾಮಾಜಿಕ ಸಂಪರ್ಕ ಹೆಚ್ಚಾಗಿರುವ ವ್ಯಕ್ತಿಗಳ ಆದ್ಯತೆಯ ಗುಂಪುಗಳಿಂದ ಒಟ್ಟು 5154 ಮಾದರಿಗಳನ್ನು ಸಂಗ್ರಹಿಸಲಾಗಿರುವುದರಲ್ಲಿ 5082 ಮಾದರಿಗಳು ಋಣಾತ್ಮಕವಾಗಿವೆ.
ಹೊಸದಾಗಿ 6 ಪ್ರದೇಶಗಳನ್ನು ಕೂಡ ಹಾಟ್ ಸ್ಪಾಟ್‌ಗೆ ಸೇರಿಸಲಾಗಿದೆ. ಕೊಲ್ಲಂ ಜಿಲ್ಲೆಯ ಕಲ್ಲುವಾತುಕ್ಕಲ್, ಪಾಲಕ್ಕಾಡ್ ಜಿಲ್ಲೆಯ ಕಡಂಬಳಿಪ್ಪುರಂ, ಮುದುತಲ, ಕಾರಕ್ಕುರುಶಿ, ಕೊಟ್ಟೈ ಮತ್ತು ಮುತಲಮಡ ಹೊಸ ಹಾಟ್ ಸ್ಪಾಟ್‌ಗಳು. ಈಗಿನಂತೆ, ಪ್ರಸ್ತುತ ಒಟ್ಟು 29 ಹಾಟ್ ಸ್ಪಾಟ್‌ಗಳಿವೆ.
- Log in to post comments