Skip to main content

ಕೇರಳದಲ್ಲಿ 24 ಜನರಿಗೆ ಕೂಡ ಕೋವಿಡ್ -19; ಚಿಕಿತ್ಸೆಯಲ್ಲಿರುವವರು 161 ಮಂದಿ

* ಬುಧವಾರ 5 ಮಂದಿ ಗುಣಮುಖರಾದರು;  ಇದುವರೆಗೆ ಗುಣಮುಖರಾದವರು 502

* ಹೊಸ ಹಾಟ್ ಸ್ಪಾಟ್ ಇಲ್ಲ

 

ಕೇರಳದಲ್ಲಿ 24 ಜನರಿಗೆ ಕೂಡ  ಬುಧವಾರ ಕೋವಿಡ್ -19 ದೃಡಪಡಿಸಿರುವುದಾಗಿ  ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದರು. ಪಾಲಕ್ಕಾಡ್‌ ಜಿಲ್ಲೆಯಿಂದ 7 ಮಂದಿಗೆ, ಮಲಪ್ಪುರಂ ಜಿಲ್ಲೆಯಿಂದ 4 ಮಂದಿಗೆ, ಕಣ್ಣೂರು ಜಿಲ್ಲೆಯಿಂದ ಮೂವರಿಗೆ, ತಿರುವನಂತಪುರಂ, ಪಥನಮತ್ತಿಟ್ಟ ಮತ್ತು ತ್ರಿಶೂರ್ ಜಿಲ್ಲೆಗಳಿಂದ ತಲಾ ಇಬ್ಬರಿಗೆ,ಆಲಪ್ಪುಳ, ಎರ್ನಾಕುಲಂ,ಕೋಳಿಕೋಡ್‌ ಮತ್ತು ಕಾಸರಗೋಡು ಜಿಲ್ಲೆಯಿಂದ ತಲಾ ಒಬ್ಬೊಬ್ಬರಿಗೆ ರೋಗ ದೃಡಪಡಿಸಿರುವುದು.12 ಮಂದಿ ವಿದೇಶದಿಂದ  (ಯು.ಎ.ಇ -8, ಕತಾರ್ -1, ಕುವೈತ್ -2, ಸೌದಿ ಅರೇಬಿಯಾ -1) ಮತ್ತು 11 ಮಂದಿ ಇತರ ರಾಜ್ಯಗಳಿಂದ (ಮಹಾರಾಷ್ಟ್ರ -8, ತಮಿಳುನಾಡು -3) ಬಂದವರು. ಕಣ್ಣೂರಿನಲ್ಲಿ ಒಬ್ಬ ವ್ಯಕ್ತಿಗೆ ಸಂಪರ್ಕದ ಮೂಲಕ ಸೋಂಕು ತಗುಲಿರುವುದು.

ಅದೇಸಮಯ, ರೋಗ ದೃಡಪಡಿಸಿ ಚಿಕಿತ್ಸೆಯಲ್ಲಿದ್ದ 5 ಜನರ ತಪಾಸಣಾ ಫಲಿತಾಂಶ ಋಣಾತ್ಮಕವಾಗಿವೆ. ತ್ರಿಶೂರ್ ಜಿಲ್ಲೆಯಿಂದ ಇಬ್ಬರ,ಮತ್ತು ವಯನಾಡ್, ಕಣ್ಣೂರು, ಕಾಸರಗೋಡು ಜಿಲ್ಲೆಗಳಿಂದ ತಲಾ ಒಬ್ಬೊಬ್ಬರ ತಪಾಸಣಾ ಫಲಿತಾಂಶವನ್ನು ಋಣಾತ್ಮಕವಾಗಿರುವುದು. ಈವರೆಗೆ 161 ಜನರಿಗೆ ಈ ರೋಗ ಪತ್ತೆಯಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.  ಈವರೆಗೆ 502 ಜನರು ಕೋವಿಡ್‌ನಿಂದ ಗುಣಮುಖರಾಗಿದ್ದಾರೆ.

ವಿಮಾನ ನಿಲ್ದಾಣದ ಮೂಲಕ 4355 ಜನರು, ಸೀಪೋರ್ಟ್ ಮೂಲಕ 1621 ಜನರು, ಚೆಕ್ ಪೋಸ್ಟ್ ಮೂಲಕ 65,522 ಜನರು ಮತ್ತು ರೈಲ್ವೆ ಮೂಲಕ 1026 ಜನರು ಸೇರಿದಂತೆ ರಾಜ್ಯದಲ್ಲಿ ಒಟ್ಟು 72,524 ಜನರು  ಆಗಮಿಸಿದ್ದಾರೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 74,398 ಜನರು ನಿರೀಕ್ಷಣೆಯಲ್ಲಿದ್ದಾರೆ. ಈ ಪೈಕಿ 73,865 ಜನರು ಮನೆ / ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ನಲ್ಲಿ ಮತ್ತು 533 ಜನರು ಆಸ್ಪತ್ರೆಗಳಲ್ಲಿ ನಿರೀಕ್ಷಣದಲ್ಲಿರುವರು.155 ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಲ್ಲಿಯವರೆಗೆ, 48,543 ವ್ಯಕ್ತಿಗಳ (ಓಗ್ಮೆಂಟೆಡ್ ಮಾದರಿ ಸೇರಿದಂತೆ) ಮಾದರಿಯನ್ನು ಪರಿಶೀಲನೆಗಾಗಿ ಕಳುಹಿಸಲಾಗಿದೆ. ಇದರಲ್ಲಿ ಲಭ್ಯವಾದ  46,961 ಮಾದರಿಗಳ, ತಪಾಸಣಾ ಫಲಿತಾಂಶ ಋಣಾತ್ಮಕವಾಗಿವೆ.. ಇದಲ್ಲದೆ, ಸೆಂಟಿನೆಲ್ ಸರ್ವೈಲೆನ್ಸ್ ನ ಭಾಗವಾಗಿ, ಆರೋಗ್ಯ ಕಾರ್ಯಕರ್ತರು, ಅತಿಥಿ ಕಾರ್ಯಕರ್ತರು, ಸಾಮಾಜಿಕ ಸಂಪರ್ಕ ಹೆಚ್ಚಾಗಿರುವ ವ್ಯಕ್ತಿಗಳ ಆದ್ಯತೆಯ ಗುಂಪುಗಳಿಂದ ಒಟ್ಟು 6090 ಮಾದರಿಗಳನ್ನು ಸಂಗ್ರಹಿಸಿರುವುದರಲ್ಲಿ 5728 ಮಾದರಿಗಳು ನಕಾರಾತ್ಮಕವಾಗಿವೆ.

ಬುಧವಾರ ಹೊಸ ಹಾಟ್ ಸ್ಪಾಟ್ ಇಲ್ಲ. ಪ್ರಸ್ತುತ 33 ಹಾಟ್ ಸ್ಪಾಟ್‌ಗಳಿವೆ.

ರಾಜ್ಯದಲ್ಲಿ ಕೋವಿಡ್ ತಡೆಗಟ್ಟುವ ಕಾರ್ಯಕ್ರಮವನ್ನು ಬಲಪಡಿಸುವ ಭಾಗವಾಗಿ  ಆರೋಗ್ಯ ಇಲಾಖೆಯಲ್ಲಿ ಎನ್‌ಎಚ್‌ಎಂ ಮೂಲಕ 2948 ತಾತ್ಕಾಲಿಕ ಹುದ್ದೆಗಳನ್ನು ಕೂಡ ರಚಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು. ಕೋವಿಡ್ ರಕ್ಷಣಾ ಉಪಕ್ರಮದ ಭಾಗವಾಗಿ ಇತ್ತೀಚೆಗೆ ರಚಿಸಲಾದ 3770 ಪೋಸ್ಟ್‌ಗಳಿಗೆ  ಹೆಚ್ಚುವರಿಯಾಗಿರುತ್ತದೆ. ಇದರೊಂದಿಗೆ 6700 ಕ್ಕೂ ಹೆಚ್ಚು ತಾತ್ಕಾಲಿಕ ಹುದ್ದೆಗಳನ್ನು ಆರೋಗ್ಯ ಇಲಾಖೆ ರಚಿಸಿರುವುದು.

date