Skip to main content

ಕೇರಳದಲ್ಲಿ 53 ಜನರಿಗೆ ಕೂಡ ಕೋವಿಡ್ -19 ದೃಡಪಡಿಸಿದೆ

 

ಚಿಕಿತ್ಸೆಯಲ್ಲಿರುವವರು 322 ಮಂದಿ;

ಭಾನುವಾರ 5 ಜನರು ಗುಣಮುಖರಾದರು

18 ಹೊಸ ಹಾಟ್ ಸ್ಪಾಟ್‌ಗಳು

 

ಕೇರಳದಲ್ಲಿ 53 ಜನರಿಗೆ ಭಾನುವಾರ ಕೋವಿಡ್ -19 ದೃಡಪಡಿಸಿರುವುದಾಗಿ ಆರೋಗ್ಯ ಸಚಿವೆ ಕೆ.ಕೆ. ಶೈಲಾಜಾ ಟೀಚರ್ ತಿಳಿಸಿದರು. ತಿರುವನಂತಪುರಂ ಮತ್ತು ಕಣ್ಣೂರು ಜಿಲ್ಲೆಗಳಿಂದ ತಲಾ 12 ಮಂದಿಗೆ, ಮಲಪ್ಪುರಂ ಮತ್ತು ಕಾಸರಗೋಡು ಜಿಲ್ಲೆಗಳಿಂದ ತಲಾ ಐವರಿಗೆ, ಆಲಪ್ಪುಳ, ಎರ್ನಾಕುಲಂ ಮತ್ತು ಪಾಲಕ್ಕಾಡ್ ಜಿಲ್ಲೆಗಳಿಂದ ತಲಾ ನಾಲ್ವರಿಗೆ, ಕೊಲ್ಲಂ ಜಿಲ್ಲೆಯಿಂದ 3 ಮಂದಿಗೆ, ಪಥನಮತ್ತಿಟ್ಟ ಜಿಲ್ಲೆಯಿಂದ ಇಬ್ಬರಿಗೆ ಮತ್ತು ಕೊಳಿಕೋಡ್‌ ಜಿಲ್ಲೆಯಿಂದ ಒಬ್ಬರಿಗೆ ರೋಗ ದೃಡಪಡಿಸಿರುವುದು. ತಮಿಳುನಾಡು ನಿವಾಸಿಯೊಬ್ಬರಿಗೂ ಈ ರೋಗ ದೃಡಪಡಿಸಿದೆ.18  ಮಂದಿ ವಿದೇಶದಿಂದ (ಒಮಾನ್ -3, ಯು.ಎ.ಇ -11, ಸೌದಿ ಅರೇಬಿಯಾ -3, ಕುವೈತ್ -1) ಮತ್ತು 29 ಮಂದಿ ಇತರ ರಾಜ್ಯಗಳಿಂದ (ಮಹಾರಾಷ್ಟ್ರ -19, ಗುಜರಾತ್ -5, ತಮಿಳುನಾಡು -3, ದೆಹಲಿ -1, ಮಧ್ಯಪ್ರದೇಶ -1) ಬಂದವರು.5 ಜನರಿಗೆ ಸಂಪರ್ಕದ ಮೂಲಕ ಸೋಂಕು ತಗುಲಿರುವುದು. ಇದರಲ್ಲಿ ಒಬ್ಬರು ಪಾಲಕ್ಕಾಡ್ ಜಿಲ್ಲೆಯ ಆರೋಗ್ಯ ಕಾರ್ಯಕರ್ತೆ.

 

ಕೋವಿಡ್ -19 ರೋಗ ದೃಡಪಡಿಸಿ ಕೋಳಿಕೋಡ್ ಜಿಲ್ಲೆಯಲ್ಲಿ ಚಿಕಿತ್ಸೆಯಲ್ಲಿದ್ದ ವಯನಾಡ್ ಸ್ವದೇಶಿನಿ ನಿಧನರಾಗಿದ್ದಾರೆ. ಮೇ 20 ರಂದು ದುಬೈನಿಂದ ಕೇರಳಕ್ಕೆ ಚಿಕಿತ್ಸೆಗಾಗಿ ಬಂದ ಅವರು  ಕ್ಯಾನ್ಸರ್ ರೋಗಿಯಾಗಿದ್ದರು.

 

ಮತ್ತೊಂದೆಡೆ, ರೋಗ ಪತ್ತೆಯಾಗಿ ಚಿಕಿತ್ಸೆಯಲ್ಲಿದ್ದ 5 ಜನರ ತಪಾಸಣಾ ಫಲಿತಾಂಶ ನಕಾರಾತ್ಮಕವಾಗಿವೆ. ವಯನಾಡ್‌ ಜಿಲ್ಲೆಯ ಮೂವರ ಮತ್ತು ಕಾಸರಗೋಡು ಜಿಲ್ಲೆಯ ಇಬ್ಬರ ತಪಾಸಣಾ ಫಲಿತಾಂಶ ನಕಾರಾತ್ಮಕವಾಗಿರುವುದು. ಈವರೆಗೆ 322 ಜನರಿಗೆ ಈ ರೋಗ ಪತ್ತೆಯಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 520 ಜನರು ಕೋವಿಡ್‌ನಿಂದ ಗುಣಮುಖರಾಗಿದ್ದಾರೆ.

 

ವಿಮಾನ ನಿಲ್ದಾಣದ ಮೂಲಕ 7847 ಜನರು, ಸೀಪೋರ್ಟ್ ಮೂಲಕ 1621 ಜನರು, ಚೆಕ್ ಪೋಸ್ಟ್ ಮೂಲಕ 79,908 ಜನರು ಮತ್ತು ರೈಲ್ವೆ ಮೂಲಕ 4028 ಜನರು ಸೇರಿದಂತೆ ಒಟ್ಟು 93,404 ಪ್ರಯಾಣಿಕರು ರಾಜ್ಯಕ್ಕೆ ಆಗಮಿಸಿದ್ದಾರೆ.

 

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 95,394 ಜನರು ನಿರೀಕ್ಷಣೆಯಲ್ಲಿದ್ದಾರೆ. ಈ ಪೈಕಿ 94,662 ಜನರು ಮನೆ / ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ನಲ್ಲಿ ಮತ್ತು 732 ಜನರು ಆಸ್ಪತ್ರೆಗಳಲ್ಲಿ ನಿರೀಕ್ಷಣದಲ್ಲಿರುವರು. ಒಟ್ಟು 188 ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ.

 

ಕಳೆದ 24 ಗಂಟೆಗಳಲ್ಲಿ 1726 ಮಾದರಿಗಳನ್ನು ಪರಿಶೀಲಿಸಲಾಯಿತು. ಇಲ್ಲಿಯವರೆಗೆ, 53,873 ವ್ಯಕ್ತಿಗಳ (ಓಗ್ಮೆಂಟೆಡ್ ಮಾದರಿ ಸೇರಿದಂತೆ) ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಇದರಲ್ಲಿ ಲಭ್ಯವಾದ 52,355 ಮಾದರಿಗಳ ತಪಾಸಣಾ ಫಲಿತಾಂಶ ನಕಾರಾತ್ಮಕವಾಗಿವೆ. ಇದಲ್ಲದೆ, ಸೆಂಟಿನೆಲ್ ಸರ್ವೈಲೆನ್ಸ್ ನ ಭಾಗವಾಗಿ ಆರೋಗ್ಯ ಕಾರ್ಯಕರ್ತರು, ಅತಿಥಿ ಕೆಲಸಗಾರರು, ಸಾಮಾಜಿಕ ಸಂಪರ್ಕ ಹೆಚ್ಚಾಗಿರುವ ವ್ಯಕ್ತಿಗಳ ಆದ್ಯತೆಯ ಗುಂಪುಗಳಿಂದ 8027 ಮಾದರಿಗಳನ್ನು ಸಂಗ್ರಹಿಸಿರುವುದರಲ್ಲಿ 7588 ಮಾದರಿಗಳು ಋಣಾತ್ಮಕವಾಗಿವೆ.

 

18 ಪ್ರದೇಶಗಳನ್ನು ಕೂಡ ಹಾಟ್ ಸ್ಪಾಟ್‌ಗಳಿಗೆ ಸೇರಿಸಲಾಗಿದೆ. ಕಾಸರಗೋಡು ಜಿಲ್ಲೆಯ ಕೊಡೋಮ್ ಬೇಲೂರು, ಪಾಲಕ್ಕಾಡ್ ಜಿಲ್ಲೆಯ ಅಂಬಲಥಾರ,ವೆಲ್ಲಿನೇಲಿ, ಒಟ್ಟಪ್ಪಾಲಂ ಮುನಿಸಿಪಾಲಿಟಿ, ವಲ್ಲಪ್ಪುಳ, ಪೆರುಮಾಟ್ಟಿ, ಮುಂಡೂರು, ಕಡಂಪಾಜಿಪ್ಪುರಂ,ಕೋಟೆಯಂ ಜಿಲ್ಲೆಯ ವೆಳ್ಳಾವೂರ್,ಮೀನಡಂ, ಆಲಪ್ಪುಳ ಜಿಲ್ಲೆಯ  ಪಾಂಡನಾಡು,ಚೆಂಗಣ್ಣೂರು ಮುನಿಸಿಪಾಲಿಟಿ, ಕೋಳಿಕೋಡ್‌ ಜಿಲ್ಲೆಯ ಆಳಿಯೂರ್,ಒಂಚಿಯಂ,ಕಣ್ಣೂರು ಜಿಲ್ಲೆಯ ಕೂಡಾಳಿ,ಕಣಿಚ್ಚಾರ್, ಪೇರಳಶ್ಶೇರಿ,ಪಣ್ಯಣ್ಣೂರ್ ಮುಂತಾದುಗಳು ಹೊಸ ಹಾಟ್ ಸ್ಪಾಟ್‌ಗಳು. ಪ್ರಸ್ತುತ ಒಟ್ಟು 55 ಹಾಟ್ ಸ್ಪಾಟ್‌ಗಳಿವೆ.

 

date