Skip to main content

ಭಾನುವಾರ 54 ಜನರಿಗೆ ಕೋವಿಡ್ -19 ದೃಡಪಡಿಸಿದೆ; 56 ಜನರು ಗುಣಮುಖರಾದರು

 

ಚಿಕಿತ್ಸೆಯಲ್ಲಿರುವವರು1340 ಜನರು 

6 ಹೊಸ ಹಾಟ್ ಸ್ಪಾಟ್‌ಗಳು

 

ಕೇರಳದಲ್ಲಿ ಭಾನುವಾರ 54 ಜನರಿಗೆ ಕೋವಿಡ್ ದೃಡಪಡಿಸಿರುವುದಾಗಿ ಆರೋಗ್ಯ ಸಚಿವೆ ಕೆ.ಕೆ. ಶೈಲಾಜಾ ಟೀಚರ್ ತಿಳಿಸಿದರು. ಕೋಳಿಕೋಡ್‌ ಜಿಲ್ಲೆಯಿಂದ  8 ಜನರಿಗೆ, ಎರ್ನಾಕುಲಂ ಮತ್ತು ತ್ರಿಶೂರ್ ಜಿಲ್ಲೆಗಳಿಂದ ತಲಾ 7 ಜನರಿಗೆ, ಪಾಲಕ್ಕಾಡ್, ಕಾಸರಗೋಡು ಜಿಲ್ಲೆಗಳಿಂದ ತಲಾ 6 ಜನರಿಗೆ, ತಿರುವನಂತಪುರಂ, ಕಣ್ಣೂರು ಜಿಲ್ಲೆಗಳಿಂದ ತಲಾ 4 ಜನರಿಗೆ ,ಕೋಟಯಂ, ಮಲಪ್ಪುರಂ ಜಿಲ್ಲೆಗಳಿಂದ ತಲಾ 3 ಜನರಿಗೆ, ಪಥನಮತ್ತಿಟ್ಟ, ಇಡುಕ್ಕಿ ಜಿಲ್ಲೆಗಳಿಂದ ತಲಾ ಇಬ್ಬರಿಗೆ, ಕೊಲ್ಲಂ, ವಯನಾಡ್  ಜಿಲ್ಲೆಗಳಿಂದ ತಲಾ ಒಬ್ಬೊಬ್ಬರಿಗೆ ರೋಗ ದೃಡಪಡಿಸಿರುವುದು.

 

ಈ ಪೈಕಿ 23 ಮಂದಿ ವಿದೇಶಗಳಿಂದ  (ಯು.ಎ.ಇ -13, ಸೌದಿ ಅರೇಬಿಯಾ -5, ನೈಜೀರಿಯಾ - 3, ಕುವೈತ್- 2) ಮತ್ತು 25 ಮಂದಿ ಇತರ ರಾಜ್ಯಗಳಿಂದ (ಮಹಾರಾಷ್ಟ್ರ- 13, ತಮಿಳುನಾಡು- 9, ಕರ್ನಾಟಕ -1, ದೆಹಲಿ- 1), ಹರಿಯಾಣ -1) ಬಂದವರು. 3 ಜನರು ಸಂಪರ್ಕದ ಮೂಲಕ ಸೋಂಕಿಗೆ ಒಳಗಾಗಿದ್ದಾರೆ. ತ್ರಿಶೂರ್‌ ಜಿಲ್ಲೆಯ ಇಬ್ಬರಿಗೆ ಮತ್ತು ಮಲಪ್ಪುರಂ ಜಿಲ್ಲೆಯಿಂದ ಒಬ್ಬರು ಸಂಪರ್ಕದ ಮೂಲಕ ಸೋಂಕಿಗೆ ತುತ್ತಾಗಿದ್ದಾರೆ. ಇದಲ್ಲದೆ, 3 ಆರೋಗ್ಯ ಕಾರ್ಯಕರ್ತರಿಗೂ ಸೋಂಕು ತಗುಲಿದೆ. ತಿರುವನಂತಪುರಂ ಜಿಲ್ಲೆಯ ಒಂದು ಮತ್ತು ತ್ರಿಶೂರ್ ಜಿಲ್ಲೆಯ ಇಬ್ಬರು ಆರೋಗ್ಯ ಕಾರ್ಯಕರ್ತರಿಗೆ ಈ ರೋಗ ದೃಡಪಡಿಸಿರುವುದು.

 

ರೋಗ ದೃಡಪಡಿಸಿ ಚಿಕಿತ್ಸೆಯಲ್ಲಿದ್ದ 56 ಜನರ,ತಪಾಸಣಾ ಫಲಿತಾಂಶ ಋಣಾತ್ಮಕವಾಗಿವೆ. ಪಾಲಕ್ಕಾಡ್ ಜಿಲ್ಲೆಯಿಂದ 27 ಜನರ, ತ್ರಿಶೂರ್‌ ಜಿಲ್ಲೆಯಿಂದ 7 ಜನರ, ಮಲಪ್ಪುರಂ ಜಿಲ್ಲೆಯಿಂದ 5 ಜನರ, ತಿರುವನಂತಪುರಂ,ಆಲಪ್ಪುಳ (ಒಬ್ಬರು ತಿರುವನಂತಪುರಂ ನಿವಾಸಿ ), ಎರ್ನಾಕುಲಂ (ಒಬ್ಬರು ತ್ರಿಶೂರ್ ನಿವಾಸಿ, ಒಬ್ಬರು ಕೋಳಿಕೋಡ್‌ ನಿವಾಸಿ)ಜಿಲ್ಲೆಗಳಿಂದ ತಲಾ ಮೂವರ, ಕೋಟಯಂ,ಇಡುಕ್ಕಿ, ಕಣ್ಣೂರು ಜಿಲ್ಲೆಗಳಿಂದ ತಲಾ ಇಬ್ಬರ, ವಯನಾಡ್, ಕಾಸರಗೋಡು ಜಿಲ್ಲೆಗಳಿಂದ ತಲಾ ಒಬ್ಬೊಬ್ಬರ ತಪಾಸಣಾ ಫಲಿತಾಂಶ ಋಣಾತ್ಮಕವಾಗಿರುವುದು. ಇದರೊಂದಿಗೆ 1340 ಜನರಿಗೆ ಈ ರೋಗ ಪತ್ತೆಯಾಗಿದ್ದು ಇನ್ನು ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 1,101 ಜನರು ಕೋವಿಡ್‌ನಿಂದ ಗುಣಮುಖರಾಗಿದ್ದಾರೆ.

 

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 2,42,767 ಜನರು ನಿರೀಕ್ಷಣೆಯಲ್ಲಿದ್ದಾರೆ. ಈ ಪೈಕಿ 2,40,744 ಜನರು ಮನೆ / ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ನಲ್ಲಿ ಮತ್ತು 2023 ಜನರು ಆಸ್ಪತ್ರೆಗಳಲ್ಲಿ ನಿರೀಕ್ಷಣೆಯಲ್ಲಿರುವರು. ಭಾನುವಾರ ಒಟ್ಟು 224 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

 

ಕಳೆದ 24 ಗಂಟೆಗಳಲ್ಲಿ 4848 ಮಾದರಿಗಳನ್ನು ಪರಿಶೀಲಿಸಲಾಗಿದೆ. ಇಲ್ಲಿಯವರೆಗೆ, 1,12,962 ವ್ಯಕ್ತಿಗಳ (ಖಾಸಗಿ ಲ್ಯಾಬ್‌ನಲ್ಲಿನ ಮಾದರಿಯನ್ನು ಒಳಗೊಂಡಂತೆ) ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಈ ಪೈಕಿ 2851 ಮಾದರಿಗಳ ಫಲಿತಾಂಶ ಬರಬೇಕಾಗಿದೆ. ಇದಲ್ಲದೆ, ಸೆಂಟಿನೆಲ್ ಸರ್ವೈಲೆನ್ಸ್ ನ ಭಾಗವಾಗಿ ಆರೋಗ್ಯ ಕಾರ್ಯಕರ್ತರು, ಅತಿಥಿ ಕೆಲಸಗಾರರು ಮತ್ತು ಸಾಮಾಜಿಕ ಸಂಪರ್ಕ ಹೆಚ್ಚಾಗಿರುವ ವ್ಯಕ್ತಿಗಳ ಆದ್ಯತೆಯ ಗುಂಪುಗಳಿಂದ 30,785 ಮಾದರಿಗಳನ್ನು ಸಂಗ್ರಹಿಸಿರುವುದರಲ್ಲಿ 28,935 ಮಾದರಿಗಳು ನಕಾರಾತ್ಮಕವಾಗಿವೆ. ರುಟೀನ್ ಮಾದರಿ, ಓಗ್ಮೆಂಟೆಡ್ ಮಾದರಿ, ಸೆಂಟಿನೆಲ್ ಮಾದರಿ, ಪೂಲ್ಡ್ ಸೆಂಟಿನೆಲ್, ಸಿ.ಬಿ. ನ್ಯಾಟ್ ಮತ್ತು ಟ್ರೂ ನ್ಯಾಟ್ ಸೇರಿದಂತೆ ಒಟ್ಟು 1,49,164 ಮಾದರಿಗಳನ್ನು ಪರಿಶೀಲನೆಗಾಗಿ ಕಳುಹಿಸಲಾಗಿದೆ.

 

ಹೊಸದಾಗಿ 6 ಹಾಟ್ ಸ್ಪಾಟ್‌ಗಳಿವೆ. ಇಡುಕ್ಕಿ ಜಿಲ್ಲೆಯ ಕುಮಳಿ, ಕಾಸರಗೋಡು ಜಿಲ್ಲೆಯ ಕನ್‌ಹಂಗಾಡ್, ಕಾರಡುಕ್ಕ, ಪಲ್ಲಿಕ್ಕರ, ಕಣ್ಣೂರು ಜಿಲ್ಲೆಯ ಮುಜಕ್ಕುನ್ನು, ಪೆರಾವೂರ್ ಮುಂತಾದುವು ಹೊಸ ಹಾಟ್ ಸ್ಪಾಟ್‌ಗಳು.

 

ಭಾನುವಾರ ಒಂದು ಪ್ರದೇಶವನ್ನು ಹಾಟ್ ಸ್ಪಾಟ್‌ನಿಂದ ಹೊರಗಿಡಲಾಗಿದೆ. ಕಾಸರ್‌ಗೋಡ್ ಜಿಲ್ಲೆಯ ವೋರ್ಕಡಿಯನ್ನು ಹಾಟ್ ಸ್ಪಾಟ್‌ನಿಂದ ಹೊರಗಿಡಲಾಯಿತು. ಪ್ರಸ್ತುತ ಒಟ್ಟು 122 ಹಾಟ್ ಸ್ಪಾಟ್‌ಗಳಿವೆ.

date