Skip to main content

ರಾಜ್ಯದಲ್ಲಿ ಏಳು ಮಂದಿಗೆ ಕೂಡ ಕೋವಿಡ್ 19  

I&PRD KERALA
KANNADA PRESS RELEASE
31-03-20

 

1,63,129 ಜನರನ್ನು ನಿರೀಕ್ಷಣದಲ್ಲಿ

ಕೇರಳದಲ್ಲಿ ಮಂಗಳವಾರ  ಏಳು ಮಂದಿಗೆ ಕೂಡ ಕೋವಿಡ್ 19  ದೃಡಪಡಿಸಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು. ತಿರುವನಂತಪುರಂ , ಕಾಸರಗೋಡು ಜಿಲ್ಲೆಗಳಿಂದ ತಲಾ ಎರಡು ಮತ್ತು ಕೊಲ್ಲಂ, ತ್ರಿಶೂರ್ ಮತ್ತು ಕಣ್ಣೂರು ಜಿಲ್ಲೆಗಳಿಂದ ತಲಾ ಒಬ್ಬೊಬ್ಬರಿಗೆ  ರೋಗ ದೃಡಪಡಿಸಲಾಗಿದೆ. ತಿರುವನಂತಪುರಂನಲ್ಲಿ 8 ಮತ್ತು 13 ವರ್ಷ ವಯಸ್ಸಿನ ಇಬ್ಬರು ಮಕ್ಕಳಿಗೆ ಈ ರೋಗ ಪತ್ತೆಯಾಗಿದೆ. ಅವರು ತಿರುವನಂತಪುರಂ ವೈದ್ಯಕೀಯ ಕಾಲೇಜು, ಎಸ್‌ಎಟಿ. ಆಸ್ಪತ್ರೆಯ ಐಸೋಲೇಶನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯ ಸ್ಥಿತಿ ತೃಪ್ತಿಕರವಾಗಿದೆ. ಕಣ್ಣೂರಿನಲ್ಲಿ ರೋಗನಿರ್ಣಯ ಮಾಡಿದ ವ್ಯಕ್ತಿ ವಿದೇಶದಿಂದ ಬಂದವರು. ಇತರರಿಗೆ ಸಂಪರ್ಕದ ಮೂಲಕ ಬಂದಿದೆ.ಕೇರಳದಲ್ಲಿ ಈವರೆಗೆ 241ಜನರಿಗೆ ರೋಗ ದೃಡಪಡಿಸಲಾಗಿದೆ . ಪ್ರಸ್ತುತ 215 ರೋಗಿಗಳು ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ  ಚಿಕಿತ್ಸೆ ಪಡೆಯುತ್ತಿದ್ದಾರೆ. ಪಥನಮತ್ತಿಟ್ಟ ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ತಲಾ ಇಬ್ಬರ ಫಲಿತಾಂಶಗಳು ನೆಗೆಟಿವ್ ಆಗಿದೆ. 24 ಜನರು ರೋಗ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ತಿರುವನಂತಪುರಂ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೊಬ್ಬರು ಮಂಗಳವಾರ ನಿಧನರಾದರು. ಇದೀಗ ರಾಜ್ಯದಲ್ಲಿ ಇಬ್ಬರು ಮೃತಪಟ್ಟರು.
203 ದೇಶಗಳಲ್ಲಿ ಕೋವಿಡ್ 19 ರ ಹರಡುವಿಕೆಯಲ್ಲಯೂ ಮತ್ತು ಕೇರಳದಲ್ಲಿ ರೋಗಿಗಳ ಸಂಖ್ಯೆಯಲ್ಲಿನ ಹೆಚ್ಚಳದಿಂದಾಗಿಯೂ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 1,63,129 ಜನರು ನಿರೀಕ್ಷಣದಲ್ಲಿದ್ದಾರೆ. ಈ ಪೈಕಿ 1,62,471ಜನರು ಮನೆಗಳಲ್ಲಿ ಮತ್ತು 658 ಜನರು ಆಸ್ಪತ್ರೆಗಳಲ್ಲಿ ಕಣ್ಗಾವಲಿನಲ್ಲಿರುವರು. ಸುಮಾರು 150 ಜನರನ್ನು ಇಂದು ಆಸ್ಪತ್ರೆಗೆ ಸೇರಿಸಲಾಯಿತು. ರೋಗಲಕ್ಷಣಗಳನ್ನು ಹೊಂದಿರುವ 7485 ವ್ಯಕ್ತಿಗಳ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಇದರಲ್ಲಿ ಲಭಿಸಿದ 6381 ಮಾದರಿಗಳ ಪರಿಶೋಧನೆ ಫಲಿತಾಂಶಗಳು ನೆಗೆಟಿವ ಆಗಿದೆ.

 

.....................

ಕಾಸರಗೋಡು ಜಿಲ್ಲೆಗೆ ವಿಶೇಷ ಕ್ರಿಯಾ ಯೋಜನೆ

ಉಚಿತ ಪಡಿತರ ವಿತರಣೆ ಬುಧವಾರದಿಂದ ಪ್ರಾರಂಭವಾಗಲಿದೆ

ಹೆಚ್ಚಿನ ರೋಗದ ಅಪಾಯವನ್ನು ಎದುರಿಸುತ್ತಿರುವ ಕಾಸರಗೋಡು ಜಿಲ್ಲೆಗೆ ವಿಶೇಷ ಕ್ರಿಯಾ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದರು. ಪಂಚಾಯತ್ ಡೇಟಾವನ್ನು ಸಂಗ್ರಹಿಸಿ ಶೀಘ್ರದಲ್ಲೇ ಪರೀಕ್ಷೆಗೆ ಕಳುಹಿಸಲಾಗುವುದು. ಕೆಮ್ಮು ಮತ್ತು ಜ್ವರ ಇರುವವರನ್ನು ಮತ್ತು ಅವರ ಜೊತೆ ಸಂಪರ್ಕ ಹೊಂದಿದವರ ಪಟ್ಟಿಯನ್ನು ತಯಾರಿಸಲಾಗುವುದು.
ಕಾಸರಗೋಡು ವೈದ್ಯಕೀಯ ಕಾಲೇಜಿನಲ್ಲಿ ಕೋವಿಡ್ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಕಾಸರಗೋಡು ಕೇಂದ್ರ ವಿಶ್ವವಿದ್ಯಾಲಯದಲ್ಲಿ ಪರೀಕ್ಷೆಗೆ ಐಸಿಎಂಆರ್ ಅನುಮತಿ ಲಭ್ಯವಾಗಿದೆ. ಕಾಸರ್‌ಗೋಡ್ ಆಸ್ಪತ್ರೆಗಳಲ್ಲಿ ಅತಿ ಹೆಚ್ಚು ಜನರು  ನಿರೀಕ್ಷಣದಲ್ಲಿರುವರು - 163 ಮಂದಿ. ಕಣ್ಣೂರಿನಲ್ಲಿ 108 ಮಂದಿ ಮತ್ತು ಮಲಪ್ಪುರಂನಲ್ಲಿ 102 ಮಂದಿ ರೋಗಿಗಳು ಆಸ್ಪತ್ರೆಗಳಲ್ಲಿ ನಿರೀಕ್ಷಣೆಯಲ್ಲಿದ್ದಾರೆ. ಕೋವಿಡ್ 19 ರ ದೃಡೀಕರಣಕ್ಕೆ ಸಂಬಂಧಪಟ್ಟಂತೆ ಪರೀಕ್ಷೆಯಲ್ಲಿ ಉತ್ತಮ ಸುಧಾರಣೆಯಾಗಿದೆ. ಪ್ರಯೋಗಾಲಯಗಳು ಹೆಚ್ಚಿನ ಮಾದರಿಗಳನ್ನು ತೆಗೆಯಲು ಪ್ರಾರಂಭಿಸಿವೆ ಎಂದು ಮುಖ್ಯಮಂತ್ರಿ ಹೇಳಿದರು.
ಮುಂಬೈ ಮತ್ತು ದೆಹಲಿಯ ಆಸ್ಪತ್ರೆ ನರ್ಸ್ ಗಳು ರೋಗದ ಭೀತಿಯಿಂದ ಕರೆ ಮಾಡುತ್ತಿದ್ದಾರೆ. ವಿಶ್ವದಾದ್ಯಂತ ಕೋವಿಡ್ 19 ತಡೆಗಟ್ಟುವ ಚಟುವಟಿಕೆಗಳಲ್ಲಿ ಮಲಯಾಳಿ ಆರೋಗ್ಯಕರ ಉಪಸ್ಥಿತಿಯನ್ನು ಹೊಂದಿದೆ. ಅವರ ಭದ್ರತೆ ಸೇರಿದಂತೆ ಸಮಸ್ಯೆಗಳನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗುವುದು.
ನಿಜಾಮುದ್ದೀನ್ ಮತ್ತು ಮಲೇಷ್ಯಾದಲ್ಲಿ ನಡೆದ ಧಾರ್ಮಿಕ ಸಭೆಗಳಲ್ಲಿ ಭಾಗವಹಿಸಿ ಹಿಂದಿರುಗಿದವರ ರೋಗ ಭಾಧೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ವಿವರವಾದ ಅವಲೋಕನವನ್ನು ಮಾಡಿದ್ದಾರೆ. ಭಾಗವಹಿಸಿದವರರ ಪಟ್ಟಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಒದಗಿಸಲಾಗಿದ್ದು, ಮುನ್ನೆಚ್ಚರಿಕೆ ವಹಿಸಲಾಗಿದೆ.
ಉಚಿತ ಪಡಿತರ ವಿತರಣೆ ಬುಧವಾರ (ಏಪ್ರಿಲ್ ಒಂದು) ಪ್ರಾರಂಭವಾಗಲಿದ್ದು,ಜನಸಂದಣಿ ಕಡಿಮೆ ಮಾಡಲು ವ್ಯವಸ್ಥೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದರು.
ಪ್ರತಿದಿನ ಬೆಳಿಗ್ಗೆಯಿಂದ ಮಧ್ಯಾಹ್ನವರೆಗೆ ಅಂತ್ಯೋದಯ ಆದ್ಯತಾ ವಿಭಾಗಗಳಿಗೆ ಮತ್ತು ಮಧ್ಯಾಹ್ನದಿಂದ ಆದ್ಯತೆಯೇತರ ವಿಭಾಗಗಳಿಗೆ (ನೀಲಿ ಮತ್ತು ಬಿಳಿ ಕಾರ್ಡ್‌ಗಳಿಗೆ) ವಿತರಿಸಲಾಗುವುದು. ಒಂದು ಸಮಯದಲ್ಲಿ ಐದು ಜನರು ಮಾತ್ರ ಪಡಿತರ ಅಂಗಡಿಯಲ್ಲಿ  ಇರಬಹುದಾಗಿದೆ.
ನೇರವಾಗಿಪಡಿತರವನ್ನು ಖರೀದಿಸಲು ಸಾಧ್ಯವಾಗದವರಿಗೆ ಮನೆಗಳಿಗೆ ಸರಕುಗಳನ್ನು ತಲುಪಿಸಲು ನೋಂದಾಯಿತ ಸ್ವಯಂಸೇವಕರ ಸಹಾಯವನ್ನು ಪಡಿತರ ಅಂಗಡಿಗಳಲ್ಲಿ ಖಚಿತಪಡಿಸಲಾಗುತ್ತದೆ.
ಅಗತ್ಯ ವಸ್ತುಗಳ ಹಣದುಬ್ಬರವನ್ನು ತಡೆಗಟ್ಟಲು ಪರಿಶೀಲನೆ ಮತ್ತು ಕ್ರಮ ತೆಗೆದುಕೊಳ್ಳುವ ಜವಾಬ್ದಾರಿಯನ್ನು ವಿಜಿಲೆನ್ಸ್ ಗೆ ವಹಿಸಲಾಯಿತು. ಹಣ  ದುಬಾರಿ ಮಾಡಿ ವಸ್ತುಗಳನ್ನು ಮಾರಾಟ ಮಾಡುವುದು ಗಂಭೀರತಪ್ಪಾಗಿ ಕಾಣಲಾಗುವುದು. ಕಠಿಣ ಕ್ರಮ ಕೈಗೊಳ್ಳಲಾಗುವುದು.
ಎಲ್ಲಾ ಸ್ಥಳೀಯ ಸ್ವಯಂ ಸಂಸ್ಥೆಗಳಲ್ಲಿ ಸಮುದಾಯ ಕಿಚನ್ ಪ್ರಾರಂಭವಾಯಿತು. 1034 ಸ್ಥಳೀಯ ಸ್ವಯಂ ಸಂಸ್ಥೆಗಳ ವ್ಯಾಪ್ತಿಯಲ್ಲಿ 1304 ಸಮುದಾಯ ಅಡಿಗೆಮನೆಗಳಿವೆ.
ಮನೆಯಲ್ಲಿ ತರಕಾರಿ ಕೃಷಿಗೆ ಮೂರು ಲಕ್ಷ ಬೀಜದ ಪ್ಯಾಕೆಟ್‌ಗಳು ಸಿದ್ಧವಾಗಿವೆ. ಇದಲ್ಲದೆ, ಕೃಷಿ ಇಲಾಖೆಯ ಹೊಲಗಳಲ್ಲಿ 9100 ತರಕಾರಿ ಬೀಜ ಪ್ಯಾಕೆಟ್‌ಗಳು ಮತ್ತು 1.91 ಲಕ್ಷ ಸಸಿಗಳನ್ನು ವಿತರಿಸಲು ಸಿದ್ಧವಾಗಿದೆ.
ಅತಿಥಿ ಕೆಲಸಗಾರರಿಗೆ ಸೇವೆಗಳನ್ನು ಖಚಿತಪಡಿಸಿಕೊಳ್ಳುವ ಭಾಗವಾಗಿ ಕಾರ್ಮಿಕರ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ರಾಜ್ಯ ಮಟ್ಟದಲ್ಲಿ ಎಡಿಜಿಪಿಗೆ ಇದರ ನೇತೃತ್ವ ವಹಿಸಲಾಗಿದೆ. 48 ಗಂಟೆಗಳಲ್ಲಿ ಇದನ್ನು ಜಾರಿಗೆ ತರಲಾಗುವುದು. ಕಾರ್ಮಿಕರಿಗೆ ಪೊಲೀಸ್ ಗುರುತಿನ ಚೀಟಿ ನೀಡಲಾಗುವುದು. ಈ ಕಾರ್ಡ್ ಕಾರ್ಮಿಕ ಇಲಾಖೆ ಘೋಷಿಸಿದ 2 ಲಕ್ಷ ರೂ. ಇನ್ ಶುರೆನ್ಸ್ ಪರಿರಕ್ಷಣೆ
ಖಚಿತಗೊಳಿಸಲಾಗುವುದು.ಇದಲ್ಲದೆ,ಇತರ ಪ್ರಯೋಜನಗಳನ್ನು ಪಡೆಯಲು ಇದು ಸಹಾಯಕವಾಗುತ್ತದೆ. 

ಕೋವಿಡ್ ಪ್ರತಿ ರೋಧದಲ್ಲಿ ನಾವು ಪ್ರತಿಯೊಬ್ಬರೂ ಜಾಗರೂಕರಾಗಿ ಎಲ್ಲಾ ಕಾರ್ಯವನ್ನು ಮುಂದೂಡಿ ಒಟ್ಟಾಗಿ ನಿಲ್ಲ ಬೇಕೆಂದು ಅಶ್ರದ್ದೆ ತೋರಬಾರದೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು.ರಸ್ತೆಯಲ್ಲಿ ಸಂದಣಿ ನಿಯಂತ್ರಿಸಲು ಸ್ವಯಂ ನಿಯಂತ್ರಣವೇ ಮೊದಲು ಮಾಡಬೇಕಾದ ಕೆಲಸ ಎಂದು ಅವರು ಹೇಳಿದರು.
ಏಪ್ರಿಲ್ 1 ರಂದು ತಪ್ಪು ಸಂದೇಶವನ್ನು ಹರಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು.
ಕೋವಿಡ್ ರಕ್ಷಣಾ ಕ್ಷೇತ್ರದ ಪೊಲೀಸ್ ಅಧಿಕಾರಿಗಳಿಗೆ ಆರೋಗ್ಯ ಮತ್ತು ವೈದ್ಯಕೀಯ ಸೇವೆಗಳನ್ನು ಒದಗಿಸಲು ಮೊಬೈಲ್ ಆ್ಯಪ್ ಅನ್ನು ಪ್ರಾರಂಭಿಸಲಾಗಿದೆ. ಆನ್‌ಲೈನ್ ಸಮಾಲೋಚನೆ ಹೆಚ್ಚು ಮಾಡಲಾಯಿತು. ಸಾಮಾಜಿಕ ನ್ಯಾಯ ಇಲಾಖೆಯ ಸಲಹೆಗಾರರು ಮತ್ತು ಮನಶ್ಶಾಸ್ತ್ರಜ್ಞರನ್ನು ಒಳಗೊಂಡ ಹೆಲ್ಪ್‌ಡೆಸ್ಕ್ ರಚಿಸಲಾಗಿದೆ.
ಕೋವಿಡ್ 19 ರಕ್ಷಣೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ಅತ್ಯುತ್ತಮವಾಗಿ ಬರುತ್ತಿದೆ. ಮಂಗಳವಾರ ಪಡೆದ ಒಟ್ಟು ಮೊತ್ತ 5,09,61,000 ರೂ ಎಂದು ಮುಖ್ಯಮಂತ್ರಿ ವ್ಯಕ್ತ ಪಡಿಸಿದರು.

date