Skip to main content

ರಾಜ್ಯದಲ್ಲಿ 32 ಜನರಿಗೆ ಕೂಡ ಕೋವಿಡ್ 19 ದೃಡಪಡಿಸಲಾಗಿದೆ

IPRD KERALA, KANNADA PRESS RELEASE, 30/03/20

ರಾಜ್ಯದಲ್ಲಿ ನಿನ್ನೆ (30 ಮಾರ್ಚ್ 2020) 32 ಜನರಿಗೆ ಕೂಡ ಕೋವಿಡ್ 19 ದೃಪಡಿಸಲಾಗಿದೆ. ಈ ಪೈಕಿ 17 ಮಂದಿ ವಿದೇಶದಿಂದ ಬಂದವರು ಮತ್ತು 15 ಮಂದಿ ಸಂಪರ್ಕದ ಮೂಲಕ ರೋಗ ದೃಢಪಡಿಸಿದವರು.ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಅನಾರೋಗ್ಯ ಪ್ರಕರಣಗಳ ಸಂಖ್ಯೆ 213 ಆಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪತ್ರಿಕಾಗೋಷ್ಠಿಯಲ್ಲಿ  ಹೇಳಿದರು.

 ಕಾಸರಗೋಡು -17, ಕಣ್ಣೂರು -11, ವಯನಾಡ್ -2, ಮತ್ತು ಇಡುಕ್ಕಿ -2, ಹೀಗೆ ನಿನ್ನೆ ರೋಗನಿರ್ಣಯ ಮಾಡಿದ ಜನರ ಜಿಲ್ಲಾವಾರು ವರದಿಗಳು. ಪ್ರಸ್ತುತ 1,57,283 ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 1,56,660 ಜನರು ಮನೆಗಳಲ್ಲಿ ಮತ್ತು 623 ಜನರು ಆಸ್ಪತ್ರೆಗಳಲ್ಲಿ ಇರುವರು. ನಿನ್ನೆ ಮಾತ್ರ 126 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತಪಾಸಣೆಗಾಗಿ ಕಳುಹಿಸಲಾದ 6991 ಮಾದರಿಗಳಲ್ಲಿ 6034 ಮಾದರಿಗಳು ಸೋಂಕಿಗೆ ಒಳಗಾಗಲಿಲ್ಲ ಎಂದು ದೃಡಪಡಿಸಿದ್ದಾರೆ ಎಂದು ಮುಖ್ಯಮಂತ್ರಿ  ಹೇಳಿದರು.

date