Skip to main content

ಎಂಟು ಮಂದಿಗೆ ಕೋವಿಡ್ -19 ದೃಡಪಡಿಸಲಾಗಿದೆ; ಹದಿಮೂರು ಮಂದಿ ಗುಣಮುಖರಾದರು

KANNADA PRESS RELEASE

ಇನ್ನು ಚಿಕಿತ್ಸೆಯಲ್ಲಿರುವವರು 173 ಮಂದಿ; ಇದುವರೆಗೆ ಗುಣಮುಖರಾದವರು 211 

 

ಕೇರಳದಲ್ಲಿ ಮಂಗಳವಾರ  ಎಂಟು ಜನರಿಗೆ ಕೋವಿಡ್ -19 ದೃಡಪಡಿಸಲಾಗಿದೆ ಎಂದು ಕೆ.ಕೆ. ಶೈಲಾಜಾ ಟೀಚರ್ ತಿಳಿಸಿದರು. ಕಣ್ಣೂರು ಜಿಲ್ಲೆಯಿಂದ ನಾಲ್ವರಿಗೆ, ಕೋಳಿಕೋಡ್‌ನಿಂದ ಮೂವರಿಗೆ ಮತ್ತು ಕಾಸರ್‌ಗೋಡ್‌ನಿಂದ ಒಬ್ಬರಿಗೆ ರೋಗ ದೃಡಪಡಿಸಲಾಗಿದೆ. ಅವರಲ್ಲಿ ಐದು ಮಂದಿ ದುಬೈನಿಂದ ಬಂದವರು.ಮೂವರು ಸಂಪರ್ಕದ ಮೂಲಕ ಸೋಂಕಿಗೆ ಒಳಗಾಗಿದ್ದಾರೆ.  ಕಣ್ಣೂರು ಜಿಲ್ಲೆಯ ಮೂವರು ಮತ್ತು ಕೋಳಿಕೋಡ್ ಮತ್ತು ಕಾಸರಗೋಡು ಜಿಲ್ಲೆಗಳಿಂದ ತಲಾ ಒಬ್ಬರು ದುಬೈನಿಂದ ಬಂದವರು. ಕೋಳಿಕೋಡ್‌ ಜಿಲ್ಲೆಯ ಇಬ್ಬರು ಮತ್ತು ಕಣ್ಣೂರು ಜಿಲ್ಲೆಯ ಒಬ್ಬರು ಸಂಪರ್ಕದ ಮೂಲಕ ಕಾಯಿಲೆಗೆ ತುತ್ತಾಗಿದ್ದಾರೆ.

ಅದೇ ಸಮಯ, ಕೋವಿಡ್ 19 ಸೋಂಕಿಗೆ ಒಳಗಾದ13 ಜನರು ಕೂಡ ಇಂದು ಚೇತರಿಸಿಕೊಂಡಿದ್ದಾರೆ. ಕಾಸರಗೋಡ್ ಜಿಲ್ಲೆಯ ಆರು (ಕಣ್ಣೂರು ಜಿಲ್ಲೆಯಲ್ಲಿ ಚಿಕಿತ್ಸೆಯಲ್ಲಿದ್ದ ನಾಲ್ಕು ಮಂದಿ),ಮಂದಿಯ, ಎರ್ನಾಕುಲಂ ಮತ್ತು ಪಾಲಕ್ಕಾಡ್ ಜಿಲ್ಲೆಗಳಿಂದ ತಲಾ  ಇಬ್ಬರು, ಕೊಲ್ಲಂ, ತ್ರಿಶೂರ್ ಮತ್ತು ಮಲಪ್ಪುರಂ ಜಿಲ್ಲೆಗಳಿಂದ ತಲಾ ಒಬ್ಬರ  ತಪಾಸಣ ಫಲ ಋಣಾತ್ಮಕವಾಗಿದ್ದು. ಇದರಂತೆ ಪ್ರಸ್ತುತ 173 ಜನರು ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಯಲ್ಲಿರುವರು. ಈವರೆಗೆ 211 ಜನರು ಕೋವಿಡ್ ನಿಂದ ಗುಣಮುಖರಾದರು.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 1,07,075 ಜನರು ವೀಕ್ಷಣೆಯಲ್ಲಿದ್ದಾರೆ. ಈ ಪೈಕಿ 1,06,511 ಜನರು ಮನೆಗಳಲ್ಲಿ ಮತ್ತು 564  ಜನರು ಆಸ್ಪತ್ರೆಗಳಲ್ಲಿ ವೀಕ್ಷಣೆಯಲ್ಲಿರುವರು. 81 ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ರೋಗಲಕ್ಷಣಗಳನ್ನು ಹೊಂದಿರುವ 16,235 ವ್ಯಕ್ತಿಗಳ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಇದರಲ್ಲಿ ಲಭ್ಯವಾದ 15,488 ಮಾದರಿಗಳ, ಫಲಿತಾಂಶಗಳು ನಕಾರಾತ್ಮಕವಾಗಿವೆ.

date