Skip to main content

ಕೋವಿಡ್ 19:27 ಜನರು ಕೂಡ ಗುಣಮುಖರಾದರು; ಕೋವಿಡ್  ದೃಡಪಡಿಸಿದ್ದು ಏಳು ಜನರಿಗೆ

KANNADA PRESS RELEASE

ಇನ್ನು ಚಿಕಿತ್ಸೆಯಲ್ಲಿರುವವರು147 ಮಂದಿ; ಇದುವರೆಗೆ ಗುಣಮುಖರಾದವರು 245 

ಕೋವಿಡ್ -19 ಪೀಡಿತರಾದ  27 ಜನರು ಕೂಡ ಗುರುವಾರ ಗುಣಮುಖರಾಗಿರುವುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್. ಕಾಸರಗೋಡು ಜಿಲ್ಲೆಯಲ್ಲಿರುವ ಒಟ್ಟು 24 ಜನರು ಮತ್ತು ಎರ್ನಾಕುಲಂ, ಮಲಪ್ಪುರಂ ಮತ್ತು ಕಣ್ಣೂರು ಜಿಲ್ಲೆಗಳಿಂದ ತಲಾ ಒಬ್ಬೊಬ್ಬರ  ಫಲಿತಾಂಶ ಋಣಾತ್ಮಕವಾಗಿದ್ದು.ಈವರೆಗೆ 394 ಜನರಿಗೆ ಈ ರೋಗ ದೃಡಪಡಿಸಲಾಗಿದೆ. ಈ ಪೈಕಿ 245 ಮಂದಿ ಈವರೆಗೆ ಕೋವಿಡ್‌ನಿಂದ ಚೇತರಿಸಿಕೊಂಡಿದ್ದಾರೆ. ಪ್ರಸ್ತುತ,147 ಮಂದಿ ರಾಜ್ಯದಾದ್ಯಂತ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಜ್ಯದಲ್ಲಿ ಗುರುವಾರ ಏಳು ಜನರಿಗೆ ಕೋವಿಡ್ -19 ಅನ್ನು ಖಚಿತಪಡಿಸಿದ್ದಾರೆ. ಕಣ್ಣೂರ್ ಜಿಲ್ಲೆಯಿಂದ ನಾಲ್ವರಿಗೆ, ಕೋಳಿಕೋಡ್‌ ಜಿಲ್ಲೆಯಿಂದ ಇಬ್ಬರಿಗೆ ಮತ್ತು ಕಾಸರ್‌ಗೋಡ್ ಜಿಲ್ಲೆಯ ಓರ್ವ ವ್ಯಕ್ತಿಗೆ ರೋಗ ದೃಡಪಡಿಸಲಾಗಿದೆ. ಅವರಲ್ಲಿ ಐದು ಮಂದಿ ದುಬೈನಿಂದ ಬಂದವರು.ಇಬ್ಬರು ಸಂಪರ್ಕದ ಮೂಲಕ  ಸೋಂಕಿಗೆ ಒಳಗಾಗಿದ್ದಾರೆ. ಕಣ್ಣೂರು ಜಿಲ್ಲೆಯಿಂದ ಮೂವರು ಮತ್ತು ಕೋಳಿಕೋಡ್ ಮತ್ತು ಕಾಸರ್‌ಗೋಡ್ ಜಿಲ್ಲೆಯಿಂದ ತಲಾ ಒಬ್ಬೊಬ್ಬರು ದುಬೈನಿಂದ ಬಂದವರು. ಕಣ್ಣೂರು ಮತ್ತು ಕೋಳಿಕೋಡ್ ಜಿಲ್ಲೆಗಳಲ್ಲಿರುವವರ ಒಬ್ಬೊಬ್ಬರಿಗೆ ಸಂಪರ್ಕದಿಂದ ಸೋಂಕು ತಗುಲಿದೆ.
ಎರ್ನಾಕುಲಂ ಜಿಲ್ಲೆಯ ವಿಮಾನ ನಿಲ್ದಾಣದ ಕರ್ತವ್ಯದಲ್ಲಿರುವಾಗ ಸೋಂಕಿಗೆ ಒಳಗಾದ ಇಬ್ಬರು ಆರೋಗ್ಯ ಕಾರ್ಯಕರ್ತರು ಗುಣಮುಖರಾಗಿ ಬಿಡುಗಡೆ ಮಾಡಲಾಗಿದೆ. ಜೂನಿಯರ್ ಹೆಲ್ತ್ ಇನ್ಸ್ಪೆಕ್ಟರ್ ಸಂತೋಷ್ ಕುಮಾರ್,ಕೆ.ಕೆ.ಅನೀಶ್ ಇವರಿಗೆ ರೋಗ ಗುಣಮುಖವಾದದ್ದು.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 88,855 ಜನರು ವೀಕ್ಷಣೆಯಲ್ಲಿದ್ದಾರೆ. ಈ ಪೈಕಿ 88,332 ಜನರು ಮನೆಗಳಲ್ಲಿ ಮತ್ತು 523 ಜನರು ಆಸ್ಪತ್ರೆಗಳಲ್ಲಿ ನಿರೀಕ್ಷಣದಲ್ಲಿದ್ದಾರೆ. 108 ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ರೋಗಲಕ್ಷಣಗಳನ್ನು ಹೊಂದಿರುವ 17,400 ವ್ಯಕ್ತಿಗಳ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಇದರಲ್ಲಿ ಲಭ್ಯವಾದ 16,489 ಮಾದರಿಗಳ, ಫಲಿತಾಂಶಗಳು ನಕಾರಾತ್ಮಕವಾಗಿವೆ.

*********************

ಲಾಕ್‌ಡೌನ್: ನಾಲ್ಕು ವಲಯಗಳನ್ನಾಗಿ ಮಾಡಿ ಕ್ರಮೀಕರಣಗಳನ್ನು ಏರ್ಪಡಿಸಲಾಗುವುದು - ಮುಖ್ಯಮಂತ್ರಿ

ನಾಲ್ಕು ವಲಯಗಳನ್ನಾಗಿ ಮಾಡಿ ರಾಜ್ಯದ ಲಾಕ್‌ಡೌನ್ ವ್ಯವಸ್ಥೆ ಮತ್ತು ರಿಯಾಯಿತಿಗಳನ್ನು ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು.ಪ್ರಸ್ತುತ ರಾಜ್ಯದ ಗಡಿಗಳನ್ನು  ಮುಚ್ಚಲಾಗಿದೆ. ರಾಜ್ಯದ ಹೊರಗೆ ಅಥವಾ ರಾಜ್ಯಕ್ಕೆ ಯಾರೂ ಪ್ರಯಾಣಿಸಲು ಸಾಧ್ಯವಿಲ್ಲ. ಅಂತರ ಜಿಲ್ಲೆಯ ಪ್ರಯಾಣವನ್ನೂ ನಿಷೇಧಿಸಲಾಗಿದೆ. ಇವೆರಡೂ ಮುಂದುವರಿಯಲಿವೆ.
ಮೊದಲ ವಲಯವು ಕಾಸರ್‌ಗೋಡ್, ಕಣ್ಣೂರು, ಮಲಪ್ಪುರಂ ಮತ್ತು ಕೋಳಿಕೋಡ್ ಜಿಲ್ಲೆಗಳನ್ನು ಒಳಗೊಂಡಿದೆ. ಕೇಂದ್ರ ಪಟ್ಟಿಯ ಪ್ರಕಾರ ಕಾಸರ್‌ಗೋಡ್, ಕಣ್ಣೂರು, ಎರ್ನಾಕುಲಂ, ಮಲಪ್ಪುರಂ, ತಿರುವನಂತಪುರಂ ಮತ್ತು ಪಥನಮತ್ತಿಟ್ಟ ಜಿಲ್ಲೆಗಳನ್ನು ಹಾಟ್‌ಸ್ಪಾಟ್‌ಗಳಾಗಿ ಪರಿಗಣಿಸಲಾಗಿದೆ. ಪ್ರಸ್ತುತ ಕೋವಿಡ್ ಪಾಸಿಟಿವ್‌ನೊಂದಿಗೆ ಚಿಕಿತ್ಸೆ ಪಡೆಯುತ್ತಿರುವ ಜನರ ಸಂಖ್ಯೆ ಹೀಗಿದೆ: ಕಾಸರಗೋಡು -61, ಕಣ್ಣೂರು -45 ಮತ್ತು ಮಲಪ್ಪುರಂ -9. ಈ ಮೂರು ಜಿಲ್ಲೆಗಳು ಬಿಟ್ಟರೆ ರಾಜ್ಯದಲ್ಲಿ ಹೆಚ್ಚು ಸಕಾರಾತ್ಮಕ ಪ್ರಕರಣಗಳಿರುವುದುಕೋಳಿಕೋಡ್ನಲ್ಲಿ ಒಂಭತ್ತು. ಆದ್ದರಿಂದ, ಈ ನಾಲ್ಕು ಜಿಲ್ಲೆಗಳನ್ನು ಸೇರಿಸಿ ಒಂದು ವಲಯವನ್ನಾಗಿ ಮಾಡಿ ನಿಯಂತ್ರಣಗಳನ್ನು ಜಾರಿಗೆ ತರಲಾಗುವುದು. ಈ ಜಿಲ್ಲೆಗಳಲ್ಲಿ ಮೇ 3 ರವರೆಗೆ ಲಾಕ್‌ಡೌನ್ ಕಟ್ಟುನಿಟ್ಟಾಗಿರುತ್ತದೆ.

ಈ ಜಿಲ್ಲೆಗಳಲ್ಲಿ ತೀವ್ರ ಕಾಯಿಲೆ ಇರುವ ಹಾಟ್‌ಸ್ಪಾಟ್‌ಗಳನ್ನು ಪ್ರತ್ಯೇಕವಾಗಿ ಗುರುತಿಸಲಾಗುತ್ತದೆ. ಅಂತಹ ಗ್ರಾಮಗಳ ಗಡಿಯನ್ನು ಮುಚ್ಚಲಾಗುವುದು. ಪ್ರವೇಶ ಬಿಂದು ಮತ್ತು ನಿರ್ಗಮನ ಬಿಂದುವನ್ನು ಮಾತ್ರ ಅನುಮತಿಸಲಾಗುವುದು. ಉಳಿದೆಲ್ಲ ಮಾರ್ಗಗಳನ್ನು ಮುಚ್ಚಲಾಗುವುದು. ಆಹಾರ ಸಾಮಗ್ರಿಗಳನ್ನು ಸರ್ಕಾರ ಅನುಮತಿ ನೀಡಿದ ಈ ಬಿಂದುವಿನಿಂದ ತರಬೇಕಾಗಿದೆ.
ಎರಡನೇ ವಲಯವು ಪಥನಮತ್ತಿಟ್ಟ, ಎರ್ನಾಕುಲಂ ಮತ್ತು ಕೊಲ್ಲಂ ಜಿಲ್ಲೆಗಳನ್ನು ಒಳಗೊಂಡಿರುತ್ತದೆ. ಇಲ್ಲಿ ಏಪ್ರಿಲ್ 24 ರವರೆಗೆ ಲಾಕ್‌ಡೌನ್ ಮುಂದುವರಿಯುತ್ತದೆ. ಹಾಟ್‌ಸ್ಪಾಟ್‌ಗಳ ನಿರ್ದಿಷ್ಟ ಪ್ರದೇಶಗಳನ್ನು ಗುರುತಿಸಿ ಸಂಪೂರ್ಣವಾಗಿ ಮುಚ್ಚಲಾಗುವುದು. ಏಪ್ರಿಲ್ 24 ರ ನಂತರ ರಾಜ್ಯವು ಪರಿಸ್ಥಿತಿಯನ್ನು ನಿರ್ಣಯಿಸಿ, ಅಗತ್ಯವಿದ್ದರೆ ಕೆಲವು ರಿಯಾಯಿತಿಗಳನ್ನು ನೀಡಲಾಗುವುದು.
ಮೂರನೇ ವಲಯವು ಆಲಪ್ಪುಳ, ತಿರುವನಂತಪುರಂ, ಪಾಲಕ್ಕಾಡ್, ತ್ರಿಶೂರ್ ಮತ್ತು ವಯನಾಡ್ ಜಿಲ್ಲೆಗಳನ್ನು ಒಳಗೊಂಡಿದೆ. ಈ ಪ್ರದೇಶದಲ್ಲಿ ಭಾಗಶಃ ಸಾಮಾನ್ಯ ಜೀವನವನ್ನು ಅನುಮತಿಸಲಾಗುವುದು. ಆದರೆ ಇತರ ಎಲ್ಲ ನಿರ್ಬಂಧಗಳು ಇಲ್ಲಿ ಅನ್ವಯಿಸುತ್ತವೆ. ಸಿನೆಮಾ ಹಾಲ್‌ಗಳು ಮತ್ತು ಪೂಜಾ ಸ್ಥಳಗಳನ್ನು ಮುಚ್ಚಬೇಕು. ಸಾಮೂಹಿಕ ಕೂಟಗಳು, ಸಾರ್ವಜನಿಕ ಮತ್ತು ಖಾಸಗಿ ಕಾರ್ಯಕ್ರಮಗಳು ಮತ್ತು ವಿವಿಧ ಕೂಟಗಳನ್ನು ಮೇ 3 ರವರೆಗೆ ನಿಷೇಧಿಸಲಾಗುವುದು. ಹಾಟ್‌ಸ್ಪಾಟ್‌ಗಳನ್ನು ಹೊಂದಿರುವ ಪ್ರದೇಶವನ್ನು ಮುಚ್ಚಲಾಗುವುದು. ಜಿಲ್ಲಾ ಗಡಿಯಲ್ಲಿ ಸಾರ್ವಜನಿಕ ಸಾರಿಗೆಗೆ ಭದ್ರತಾ ವ್ಯವಸ್ಥೆ ಕಲ್ಪಿಸಲಾಗುವುದು. ಅಂಗಡಿಗಳು ಮತ್ತು ರೆಸ್ಟೋರೆಂಟ್‌ಗಳು ಸಂಜೆ 7 ರವರೆಗೆ ತೆರೆದಿರಬಹುದು.

ಸಕಾರಾತ್ಮಕ ಪ್ರಕರಣಗಳಿಲ್ಲದ ಕೊಟ್ಟಾಯಂ ಮತ್ತು ಇಡುಕ್ಕಿ   ನಾಲ್ಕನೇ ಕ್ಷೇತ್ರಗಳಾಗಿವೆ. ತಮಿಳುನಾಡಿನ ಗಡಿಯಲ್ಲಿರುವ ಜಿಲ್ಲೆಯಾದ ಕಾರಣ ಇಡುಕ್ಕಿಯಲ್ಲಿ ಹೆಚ್ಚು ಜಾಗ್ರತೆ ಉಂಟಾಗುವುದು. ರಾಜ್ಯದ ಗಡಿಯನ್ನು ಸಂಪೂರ್ಣವಾಗಿ ಮುಚ್ಚಲಾಗುವುದು.ಇಲ್ಲಿಯೂ ಜಿಲ್ಲಾದ್ಯಂತ ಪ್ರಯಾಣಕ್ಕೆ ಅವಕಾಶ ನೀಡುವುದಿಲ್ಲ. ಸಾಕಷ್ಟು ಭದ್ರತಾ ವ್ಯವಸ್ಥೆಗಳೊಂದಿಗೆ ಸಾಮಾನ್ಯ ಜೀವನವನ್ನು ಅನುಮತಿಸುವ ಉದ್ದೇಶವನ್ನು ಹೊಂದಿದೆ.ಎಲ್ಲಿಯಾದರೂ ಹೊರಗೆ ಬರವವರು ಮುಖವಾಡ ಧರಿಸಬೇಕು. ಎಲ್ಲಾ ಸ್ಥಳಗಳಲ್ಲಿ ಸ್ಯಾನಿಟೈಜರ್ ಮತ್ತು ಹ್ಯಾಂಡ್ ವಾಶ್ ಸೌಲಭ್ಯವನ್ನು ಒದಗಿಸಬೇಕು.
ರಾಜ್ಯಕ್ಕೆ ಅನ್ವಯವಾಗುವ ನಿರ್ಬಂಧಗಳನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ವಿಮಾನಯಾನ, ರೈಲು ಸಾರಿಗೆ, ಮೆಟ್ರೋ ಮತ್ತು ಇತರ ಸಾರ್ವಜನಿಕ ಸಾರಿಗೆ ಮಾರ್ಗಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ರಾಜ್ಯದಿಂದ ಹೊರಗೆ ಮತ್ತು ಜಿಲ್ಲೆಯಿಂದ ಹೊರಗಿನ ಪ್ರಯಾಣವನ್ನು ನಿರ್ಬಂಧಿಸಲಾಗಿದೆ. ಅಂತೆಯೇ, ಎಲ್ಲಾ ಶಿಕ್ಷಣ ಸಂಸ್ಥೆಗಳು ಮತ್ತು ತರಬೇತಿ ಕೇಂದ್ರಗಳನ್ನು ಕೇಂದ್ರ ಸರ್ಕಾರವು ನಿಲ್ಲಿಸಿದೆ. ಅಂತಹ ಎಲ್ಲಾ ನಿರ್ಬಂಧಗಳನ್ನು ರಾಜ್ಯದಲ್ಲಿಯೂ ಮುಂದುವರಿಸಲಾಗುವುದು. ಜಿಲ್ಲೆಗಳನ್ನು ವಲಯಗಳಾಗಿ ವಿಂಗಡಿಸಲು ಕೇಂದ್ರ ಸರ್ಕಾರದ ಅನುಮತಿ ಪಡೆಯಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.

 

ಕೋವಿಡ್ ತಡೆಗಟ್ಟುವ ಕ್ರಮಗಳ ಯಶಸ್ಸನ್ನು ಖಚಿತಪಡಿಸಿಕೊಳ್ಳಲು ಪ್ರತಿ ಜಿಲ್ಲೆಗೆ ವಿಶೇಷ ರೋಗನಿರೋಧಕ ಯೋಜನೆಯನ್ನು ಸಿದ್ಧಪಡಿಸಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದರು.ಕೆಲವು ಪಂಚಾಯಿತಿಗಳು, ಪುರಸಭೆಗಳು ಹಾಟ್‌ಸ್ಪಾಟ್ ವಲಯದ ಬರುವುದಾದರೆ ವಿಶೇಷ ಯೋಜನೆ ಬೇಕಾಗುತ್ತದೆ ಎಂದು ಅವರು ಹೇಳಿದರು.
ಆಸ್ಪತ್ರೆಗಳು, ಚಿಕಿತ್ಸಾಲಯಗಳು, ಪ್ರಯೋಗಾಲಯಗಳು ಮತ್ತು ಭೌತಚಿಕಿತ್ಸೆಯ ಘಟಕಗಳನ್ನು ಮುಕ್ತವಾಗಿಡಬೇಕು. ಸ್ಥಳೀಯ ಸ್ವಯಂ ಸಂಸ್ಥೆಯ ಪ್ರತಿ ವಾರ್ಡ್‌ನಲ್ಲಿರುವ ರೋಗ ಬರಲು ಸಾಧ್ಯತೆ ಹೆಚ್ಚಾಗಿರುವ (ವಳ್ನರಿಬಿಲ್) ಗುಂಪುಗಳನ್ನು ಪ್ರತ್ಯೇಕವಾಗಿ ಗುರುತಿಸಬೇಕು (60 ವರ್ಷಕ್ಕಿಂತ ಮೇಲ್ಪಟ್ಟವರು, ಹೃದಯ, ಮೂತ್ರಪಿಂಡ, ಪಿತ್ತಜನಕಾಂಗ, ಮಧುಮೇಹ, ಬಿಪಿ ಮುಂತಾದ ಕಾಯಿಲೆಗಳಿಗೆ ಚಿಕಿತ್ಸೆಯಲ್ಲಿರುವವರು)ರೋಗ ಬಾಧಿತರಾದ ಹಿರಿಯ ನಾಗರಿಕರಿಗೆ ವೈದ್ಯರನ್ನು ಸಂಪರ್ಕಿಸಲು ಅವಕಾಶಬೇಕು. ಅದಕ್ಕಾಗಿ ಸ್ಥಳೀಯ ಸ್ವಯಂ ಸಂಸ್ಥೆ ಗಡಿಯಲ್ಲಿ ಟೆಲಿಮೆಡಿಸಿನ್ ಸೌಲಭ್ಯಗಳನ್ನು ಖಾತ್ರಿಪಡಿಸಲಾಗುವುದು.
ಯಾರಾದರೂ ವೈದ್ಯರನ್ನು ಭೇಟಿ ಮಾಡಬೇಕಾದರೆ, ಅವರು ಪ್ರಾಥಮಿಕ ಆರೋಗ್ಯ ಕೇಂದ್ರದ ವಾಹನವನ್ನು ಅದಕ್ಕಾಗಿ ಬಳಸಬಹುದು. ಏಪ್ರಿಲ್ 20 ಇರಡು ದಿನಕ್ಕೊಮ್ಮೆ
ಏಕ ಮತ್ತು ದ್ವಿಗುಣ ವಾಹನಗಳನ್ನು ಓಡಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು. ಮಹಿಳೆಯರು ಓಡಿಸುವ ವಾಹನಗಳಿಗೆ ರಿಯಾಯಿತಿ ನೀಡಲಾಗುವುದು

date