Skip to main content

ಕೇರಳದಲ್ಲಿ ನಾಲ್ಕು ಜನರಿಗೆ ಕೂಡ ಕೋವಿಡ್,ನಾಲ್ಕು ಮಂದಿ ಗುಣಮುಖರಾದರು

KANNADA PRESS RELEASE

 

ಇನ್ನು ಚಿಕಿತ್ಸೆಯಲ್ಲಿರುವವರು 123 ಮಂದಿ ; ಇದುವರೆಗೆ 359 ಮಂದಿ ಗುಣಮುಖರಾದರು

 ಹೊಸದಾಗಿ ಏಳು ಹಾಟ್ ಸ್ಪಾಟ್‌ಗಳು ಕೂಡ

ಕೇರಳದಲ್ಲಿ ಮಂಗಳವಾರ ನಾಲ್ಕು ಜನರಿಗೆ ಕೋವಿಡ್ -19 ದೃಡಪಡಿಸಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು. ಕಣ್ಣೂರು ಜಿಲ್ಲೆಯ ಮೂವರಿಗೆ ಮತ್ತು ಕಾಸರ್‌ಗೋಡ್ ಜಿಲ್ಲೆಯ ಒಬ್ಬರಿಗೆ ರೋಗ ಖಚಿತಪಡಿಸಿರುವುದು. ಕಣ್ಣೂರು ಜಿಲ್ಲೆಯ ಇಬ್ಬರು ವಿದೇಶದಿಂದ ಬಂದವರು. ಕಣ್ಣೂರು ಮತ್ತು ಕಾಸರ್‌ಗೋಡ್ ಜಿಲ್ಲೆಗಳಲ್ಲಿ ಒಬ್ಬೊಬ್ಬರಿಗೆ ಸಂಪರ್ಕದ ಮೂಲಕ ಸೋಂಕು ತಗುಲಿದೆ.

 

ರಾಜ್ಯದಲ್ಲಿ ನಾಲ್ಕು ಜನರನ್ನು ಮಂಗಳವಾರ ಗುಣಮುಖರಾಗಿ ಬಿಡುಗಡೆ ಮಾಡಲಾಗಿದೆ. ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ತಲಾ ಇಬ್ಬರ ತಪಾಸಣಾ ಫಲಿತಾಂಶ ಇಂದು ನಕಾರಾತ್ಮಕವಾಗಿದ್ದು. ಇದರೊಂದಿಗೆ ಈವರೆಗೆ 359 ಜನರು ಕೋವಿಡ್ ನಿಂದ ಚೇತರಿಸಿಕೊಂಡಿರುವುದು. ಪ್ರಸ್ತುತ 123 ಜನರು ರಾಜ್ಯದಾದ್ಯಂತ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 20,773 ಜನರು ನಿರೀಕ್ಷಣದಲ್ಲಿದ್ದಾರೆ. ಈ ಪೈಕಿ 20,255 ಜನರು ಮನೆಗಳಲ್ಲಿ ಮತ್ತು 518 ಜನರು ಆಸ್ಪತ್ರೆಗಳಲ್ಲಿ ನಿರೀಕ್ಷಣದಲ್ಲಿರುವರು. 151 ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ರೋಗಲಕ್ಷಣಗಳನ್ನು ಹೊಂದಿರುವ 23,980 ವ್ಯಕ್ತಿಗಳ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಇದರಲ್ಲಿ ಲಭ್ಯವಾದ 23,277 ಮಾದರಿಗಳ ತಪಾಸಣಾ ಫಲಿತಾಂಶ ನಕಾರಾತ್ಮಕವಾಗಿದೆ. ಸೆಂಟಿನೆಲ್ ಸರ್ವಯಲೆನ್ಸೆನ ಭಾಗವಾಗಿ, ಆರೋಗ್ಯ ಕಾರ್ಯಕರ್ತರು, ಅತಿಥಿ ಕೆಲಸಗಾರರು ಮತ್ತು ಸಾಮಾಜಿಕ ಸಂಪರ್ಕಗಳ ಆದ್ಯತೆಯ ಗುಂಪಿನಿಂದ ಒಟ್ಟು 875 ಮಾದರಿಗಳನ್ನು ಸಂಗ್ರಹಿಸಿರುವುದರಲ್ಲಿ ಲಭ್ಯವಾದ 801 ಮಾದರಿಗಳು ನಕಾರಾತ್ಮಕವಾಗಿದೆ. ಸಮುದಾಯದಲ್ಲಿ ಕೋವಿಡ್ ಪರೀಕ್ಷೆಯ ತೀವ್ರತೆಯ ಭಾಗವಾಗಿ, ಏಪ್ರಿಲ್ 26 ರಂದು 3101 ಮಾದರಿಗಳನ್ನು ಪರಿಶೀಲನೆಗಾಗಿ ಕಳುಹಿಸಲಾಗಿದೆ.ಇಂದು ದೃಡಪಡಿಸಿದ 3 ಜನರ  ಫಲಿತಾಂಶ ಇದರಲ್ಲಿರುವುದಾಗಿದೆ. 2682 ನಕಾರಾತ್ಮಕವಾಗಿದೆ.391 ಮಾದರಿಗಳು ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಗುತ್ತಿದೆ.25 ಮಾದರಿಗಳನ್ನು ಪ್ರಯೋಗಾಲಯದಲ್ಲಿ ಮರುಪರೀಕ್ಷೆಗೆ ಆದೇಶಿಸಲಾಗಿದೆ.

ಹೊಸದಾಗಿ ಏಳುಹಾಟ್ ಸ್ಪಾಟ್‌ಗಳನ್ನು ಕೂಡ ಸೇರಿಸಲಾಗಿದೆ.ಇಡುಕ್ಕಿಯ ಕರುಣಾಪುರಂ, ಮುನ್ನಾರ್, ಎಡಾವಟ್ಟಿ, ಕೊಟ್ಟಾಯಂ ಜಿಲ್ಲೆಯ ಮೆಲುಕಾವು, ಚಂಗನಾಚೆರಿ ಪುರಸಭೆ, ಮಲಪ್ಪುರಂ ಜಿಲ್ಲೆಯ ಕಾಲಡಿ ಮತ್ತು ಪಾಲಕ್ಕಾಡ್ ಜಿಲ್ಲೆಯ ಅಲತೂರ್ ಹೊಸ ಹಾಟ್ ಸ್ಪಾಟ್ ಗಳು. ಇದರೊಂದಿಗೆ ಹಾಟ್ ಸ್ಪಾಟ್‌ಗಳ ಸಂಖ್ಯೆ 100 ತಲುಪಿದೆ.

 

****************

 

 

ಪ್ರವಾಸಿಗರಿಗಾಗಿ ಸಜ್ಜೆ, ಸೌಕರ್ಯಗಳನ್ನು ಖಾತ್ರಿಪಡಿಸಿಕೊಳ್ಳಲು  ಕಾರ್ಯದರ್ಶಿ ಮಟ್ಟದ ಸಮಿತಿಯಾಗಿವೆ - ಕೇರಳ ಮುಖ್ಯಮಂತ್ರಿ

ಪ್ರವಾಸಿಗರು ಹಿಂದಿರುಗುವಾಗ ಸಜ್ಜೀಕರಣ  ಮತ್ತು ಸೌಲಭ್ಯಗಳನ್ನು ಖಚಿತಪಡಿಸಿಕೊಳ್ಳಲು ಕಾರ್ಯದರ್ಶಿ ಮಟ್ಟದ ಸಮಿತಿಯನ್ನು ರಚಿಸಲಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದರು.ಕೇಂದ್ರ ಸರ್ಕಾರವು ವಿಶೇಷ ವಿಮಾನಗಳನ್ನು ಯಾವಾಗ ಅನುಮತಿಸಿದರೂ ಪ್ರವಾಸಿಗರನ್ನು ಸ್ವೀಕರಿಸಲು ರಾಜ್ಯವು ಸಿದ್ಧವಾಗಲಿದೆ. ಕಾರ್ಯದರ್ಶಿ ಮಟ್ಟದ ಸಮಿತಿಯ ಸಭೆಯಲ್ಲಿ ವಿವಿಧ ಇಲಾಖೆಗಳು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಾಯಿತು.
ಪ್ರಾಥಮಿಕ ಅಂಕಿಅಂಶಗಳ ಪ್ರಕಾರ, ಮಲಪ್ಪುರಂ, ಕೋಳಿಕೋಡ್, ಕಣ್ಣೂರು ಮತ್ತು ತ್ರಿಶೂರ್ ಜಿಲ್ಲೆಗಳಲ್ಲಿ ಅತಿ ಹೆಚ್ಚು ಜನರು ತಲುಪುವುದು. ಪ್ರತಿ ವಿಮಾನದಲ್ಲಿ ಬರುವ ಪ್ರಯಾಣಿಕರ ವಿವರಗಳನ್ನು ವಿಮಾನ ಹೊರಡುವ ಮೊದಲು ಲಭ್ಯವಾಗಿಸಲು ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಕೇಳಲಾಗುತ್ತದೆ.

ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪ್ರತಿ ವಿಮಾನ ನಿಲ್ದಾಣ ಕೇಂದ್ರೀಕರಿಸಿ  ಪ್ರತ್ಯೇಕ ಸಮಿತಿಯನ್ನು ರಚಿಸಲಾಗುವುದು. ಏರ್ಪೋರ್ಟ್ ಅಥೋರಿಟಿ ಆಫ್ ಇಂಡಿಯಾ, ಪೊಲೀಸ್ ಮತ್ತು ಆರೋಗ್ಯ ಇಲಾಖೆಯ ಪ್ರತಿನಿಧಿಗಳನ್ನು ಇದು ಒಳಗೊಂಡಿರುತ್ತದೆ.
ವಿಮಾನ ನಿಲ್ದಾಣದಲ್ಲಿ ವೈದ್ಯಕೀಯ ಪರಿಶೋಧನೆಗೆ ಸೌಲಭ್ಯ ನೀಡಲಾಗುವುದು.ಡಾಕ್ಟರ್ ಮತ್ತು ಅರೆವೈದ್ಯಕೀಯ ಸಿಬ್ಬಂದಿಯನ್ನು ಪ್ರತ್ಯೇಕವಾಗಿ ನೇಮಿಸಿ ಕೌಂಟರ್ ಗಳನ್ನು ಏರ್ಪಡಿಸಲಾಗುವುದು. ಜನಜಂಗುಳಿ ಇಲ್ಲದೆ ಎಲ್ಲ ಸುಗಮವಾಗಿ ನಡೆಸಲು ಪೊಲೀಸರು ಸಹಾಯ ಉಂಟಾಗುವುದು. ಇದಲ್ಲದೆ, ಪ್ರತಿ ವಿಮಾನ ನಿಲ್ದಾಣದ ವ್ಯಾಪ್ತಿಗೆ ಬರುವ ಜಿಲ್ಲೆಗಳ ಮೇಲ್ವಿಚಾರಣೆಗೆ ಪ್ರತಿ ಡಿಐಜಿಯನ್ನು ನಿಯೋಜಿಸಲಾಗುವುದು. ರೋಗ ಲಕ್ಷಣಗಳು ಇಲ್ಲದವರನ್ನುಮನೆಯಲ್ಲಿ ಕ್ವಾರಂಟೈನ್ ಮಾಡಲು ಉದ್ದೇಶಿಸಲಾಗಿದೆ. ಅವರನ್ನು ಪೊಲೀಸ್ ಕಣ್ಗಾವಲಿನಲ್ಲಿ ವಿಮಾನ ನಿಲ್ದಾಣದಿಂದ ಮನೆಗೆ ಕಳುಹಿಸಲಾಗುವುದು. ಮನೆಗಳಲ್ಲಿ ನಿರೀಕ್ಷಣದಲ್ಲಿರುವವರಿಗೆ ನಿಖರವಾದ ವೈದ್ಯಕೀಯ ತಪಾಸಣೆ ಖಚಿತಪಡಿಸಿಕೊಳ್ಳಲಾಗುವುದು.

ತಮ್ಮ ಮನೆಗಳಲ್ಲಿ ಕ್ವಾರಂಟೈನ್  ಸಾಧ್ಯವಾಗದವರು ಸರ್ಕಾರ ಸಿದ್ಧಪಡಿಸಿದ ಕ್ವಾರಂಟೈನ್ ನಲ್ಲಿ ವಾಸಿಸಬಹುದು.ರೋಗ ಲಕ್ಷಣಗಳ ಶಂಕಿತರನ್ನುವಿಶೇಷ ವಾಹನದಲ್ಲಿ ಸರ್ಕಾರವು ಕ್ವಾರಂಟೈನ್ ಗೆ ಕರೆದೊಯ್ಯುತ್ತದೆ. ಅವರ ಸಾಮಾನುಗಳನ್ನು ವಿಮಾನ ನಿಲ್ದಾಣದಿಂದ ಅವರ ಮನೆಗಳಿಗೆ ಸಾಗಿಸುವ ಜವಾಬ್ದಾರಿಯನ್ನು ಸರ್ಕಾರ ತೆಗೆದುಕೊಳ್ಳುತ್ತದೆ. ಪ್ರವಾಸಿಗಳಿಗೆ ಸ್ಥಳಾವಕಾಶ ಕಲ್ಪಿಸಲು ವಿಮಾನ ನಿಲ್ದಾಣಗಳ ಬಳಿ ಅಗತ್ಯ ಸೌಲಭ್ಯಗಳನ್ನು ಸರ್ಕಾರ ಒದಗಿಸುತ್ತಿದೆ. ಅದೇ ರೀತಿ ಆಸ್ಪತ್ರೆಗಳು ಈಗಾಗಲೇ ಸಜ್ಜುಗೊಂಡಿವೆ.ಹಡಗಿನ ಮೂಲಕ ಪ್ರವಾಸಿಗರನ್ನು ಕರೆತರಲು ಕೇಂದ್ರವು ನಿರ್ಧರಿಸಿದರೆ, ಬಂದರುಗಳು ಕೇಂದ್ರೀಕರಿಸಿ ಸಜ್ಜೀಕರಣ ಏರ್ಪಡಿಸಲಾಗುವುದು.
ಇತರ ರಾಜ್ಯಗಳಿಂದ ಬರುವ ಜನರನ್ನು ಕರೆತರಲು ಸೂಕ್ಷ್ಮ ವ್ಯವಸ್ಥೆ ಮಾಡಲಾಗುವುದು. ಗಡಿಯಲ್ಲಿ ತಪಾಸಣೆ ನಡೆಸಲಾಗುವುದು. ಆಗಮನದ ಸಮಯ, ಎಲ್ಲಿಗೆ ಹೋಗಬೇಕು ಮತ್ತು ಎಲ್ಲಿ ಕ್ವಾರಂಟೈನ್ ಮಾಡಬೇಕು ಎಂಬುದನ್ನು ಸ್ಪಷ್ಟವಾಗಿ ಯೋಜಿಸಲಾಗುವುದು.ಎಲ್ಲಾ ಇಲಾಖೆಗಳ ಸಾಮರಸ್ಯದಿಂದ ಈ ಕಾರ್ಯವನ್ನು ಮಾಡಲಾಗುವುದು.ಈ ನಿಟ್ಟಿನಲ್ಲಿ ಇತರ  ರಾಜ್ಯಗಳೊಂದಿಗೆ ಸಮನ್ವಯ ನಡೆಸಲಾಗುತ್ತದೆ ಎಂದು ಮುಖ್ಯಮಂತ್ರಿ ಹೇಳಿದರು.

ರಾಜ್ಯದ ವಿವಿಧ ಭಾಗಗಳಲ್ಲಿ ಪುನರುಜ್ಜೀವನ ಯೋಜನೆಯನ್ನು ಸಿದ್ಧಪಡಿಸುವ ಕಾರ್ಯವನ್ನು ಕಾರ್ಯದರ್ಶಿಗಳಿಗೆ ವಹಿಸಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು. ಆರ್ಥಿಕ ವಲಯದಲ್ಲಿನ ಸಮಸ್ಯೆಗಳು, ಕೃಷಿ, ಕೈಗಾರಿಕೆ, ಪಶುಸಂಗೋಪನೆ, ಐಟಿ, ಮೀನುಗಾರಿಕೆ ಮತ್ತು ಪ್ರವಾಸೋದ್ಯಮದಲ್ಲಿನ ಹಿನ್ನಡೆ ಮತ್ತು ಹೊಸ ಬಿಕ್ಕಟ್ಟುಗಳು  ತಕ್ಷಣವೇ ನಿವಾರಿಸಲು ಸಾಧ್ಯವಿಲ್ಲ. ಆಯಾ ಕ್ಷೇತ್ರಗಳ ತಜ್ಞರೊಂದಿಗೆ ಸಮಾಲೋಚಿಸಿ ವಿವರವಾದ ಪುನರುಜ್ಜೀವನ ಯೋಜನೆಯನ್ನು ಸಿದ್ಧಪಡಿಸಬೇಕು.ಇದಕ್ಕಾಗಿ ಪ್ರತಿ ಇಲಾಖೆಯ ಯೋಜನೆಗಳನ್ನು ಪ್ರತ್ಯೇಕವಾಗಿ ತಯಾರಿಸಲಾಗುತ್ತದೆ. ಅವುಗಳನ್ನು ಒಟ್ಟುಗೂಡಿಸಿ ಇಡೀ ರಾಜ್ಯಕ್ಕೆ ಒಂದು ಯೋಜನೆಯನ್ನು ರೂಪಿಸಲಾಗುವುದು. ಇದಲ್ಲದೆ, ಯೋಜನಾ ಮಂಡಳಿ ಮತ್ತೊಂದು ಹಂತದಲ್ಲಿ ವಿವರವಾದ ಅಧ್ಯಯನವನ್ನು ನಡೆಸುತ್ತಿದೆ.
ಕೇರಳದಲ್ಲಿ ಅತೀ ಹೆಚ್ಚು ಕೋವಿಡ್ ಪ್ರಕರಣಗಳು (175) ರಿಪೋರ್ಟ್ ಮಾಡಿದ ಜಿಲ್ಲೆ ಕಾಸರ್‌ಗೋಡ್. ಕಾಸರ್‌ಗೋಡ್ ಜನರಲ್ ಆಸ್ಪತ್ರೆಯಲ್ಲಿ ಈವರೆಗೆ 89 ರೋಗಿಗಳಿಗೆ ಚಿಕಿತ್ಸೆ ನೀಡಿ ಗುಣಪಡಿಸಲಾಗಿದೆ. ಅಲ್ಲಿದ್ದ ಕೊನೆಯ ರೋಗಿಯನ್ನು ಮಂಗಳವಾರ ಬಿಡುಗಡೆ ಮಾಡಲಾಯಿತು. ಸುಮಾರು 200 ಡಾಕ್ಟರ್ ಮತ್ತು ವೈದ್ಯರ ವೈದ್ಯಕೀಯ ತಂಡವನ್ನು ಕೇರಳ ಮುಖ್ಯಮಂತ್ರಿ ಅಭಿನಂದಿಸಿದರು.

date