Skip to main content

ರಾಜ್ಯದಲ್ಲಿ ಒಬ್ಬರಿಗೆ ಕೋವಿಡ್ 19 ದೃಡಪಡಿಸಲಾಗಿದೆ; ಹತ್ತು ಮಂದಿ ಗುಣಮುಖರಾದರು

ಕೇರಳದಲ್ಲಿ ಶುಕ್ರವಾರ ಒಬ್ಬರಿಗೆ ಕೋವಿಡ್ 19 ದೃಡಪಡಿಸಲಾಗಿದೆ.ಚೆನ್ನೈನಿಂದ ಬಂದ ಎರ್ನಾಕುಲಂ ನಿವಾಸಿ ಈ ಕಾಯಿಲೆಗೆ ತುತ್ತಾಗಿದ್ದಾರೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಅವರು ಕಿಡ್ನಿ ರೋಗಿಯಾಗಿದ್ದಾರೆ.

ಕಣ್ಣೂರು ಜಿಲ್ಲೆಯಲ್ಲಿ, ಚಿಕಿತ್ಸೆಯಲ್ಲಿದ್ದ ಹತ್ತು ಜನರು ಗುಣಮುಖರಾದರು.ಈಗ 16 ಜನರು ಚಿಕಿತ್ಸೆಯಲ್ಲಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ 33 ಹಾಟ್‌ಸ್ಪಾಟ್‌ಗಳಿವೆ. ಕಣ್ಣೂರಿನಲ್ಲಿ ಐದು, ವಯನಾಡದಲ್ಲಿ ನಾಲ್ಕು, ಕೊಲ್ಲಂನಲ್ಲಿ ಮೂರು ಮತ್ತು ಇಡುಕ್ಕಿ, ಪಾಲಕ್ಕಾಡ್, ಎರ್ನಾಕುಲಂ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ತಲಾ ಒಬ್ಬೊಬ್ಬರು ಚಿಕಿತ್ಸೆಯಲ್ಲಿದ್ದಾರೆ.

ಕೇರಳದಲ್ಲಿ ಪ್ರಸ್ತುತ 20157 ಜನರು ನಿರೀಕ್ಷಣದಲ್ಲಿದ್ದಾರೆ. ಒಟ್ಟು 19810 ಜನರು ಮನೆಗಳಲ್ಲಿ ಮತ್ತು 347 ಜನರು ಆಸ್ಪತ್ರೆಗಳಲ್ಲಿ ನಿರೀಕ್ಷಣೆಯಲ್ಲಿರುವರು.35886 ಮಾದರಿಗಳನ್ನು ತಪಾಸಣೆಗೆ ಕಳುಹಿಸಿದರಲ್ಲಿ ಲಭ್ಯವಾದ 35,355 ನಕಾರಾತ್ಮಕವಾಗಿವೆ. ಆದ್ಯತಾ ವಿಭಾಗಗಳಲ್ಲಿನ 3380 ಮಾದರಿಗಳನ್ನು ಪರಿಶೋಧಿಸಿರುವುದರಲ್ಲಿ  2939 ಫಲಿತಾಂಶಗಳು ನಕಾರಾತ್ಮಕವಾಗಿವೆ ಎಂದು ಮುಖ್ಯಮಂತ್ರಿ ಹೇಳಿದರು.

date