Skip to main content

ಕೋವಿಡ್ ಕೇರಳದಲ್ಲಿ 24 ಜನರಿಗೆ ಕೂಡ ದೃಡಪಡಿಸಲಾಗಿದೆ; 8 ಜನರು ಗುಣಮುಖರಾದರು

 

ಚಿಕಿತ್ಸೆಯಲ್ಲಿರುವವರು177 ಮಂದಿ 

ಈವರೆಗೆ ಗುಣಮುಖರಾದವರು 510 

ಹೊಸ 3 ಹಾಟ್ ಸ್ಪಾಟ್‌ಗಳು

 

 ಗುರುವಾರ ಕೇರಳದಲ್ಲಿ 24 ಜನರಿಗೆ ಕೋವಿಡ್ -19 ದೃಡಪಡಿಸಿರುವುದಾಗಿ ಕೆ.ಕೆ. ಶೈಲಾಜಾ ಟೀಚರ್ ಹೇಳಿದರು. ಮಲಪ್ಪುರಂ ಜಿಲ್ಲೆಯಿಂದ ಐದು ಮಂದಿ, ಕಣ್ಣೂರು ಜಿಲ್ಲೆಯಿಂದ 4 ಮಂದಿಗೆ, ಕೊಟ್ಟಾಯಂ, ತ್ರಿಶೂರ್ ಜಿಲ್ಲೆಗಳಿಂದ ತಲಾ ಮೂವರಿಗೆ ಮತ್ತು ತಿರುವನಂತಪುರಂ, ಕೊಲ್ಲಂ ಮತ್ತು ಆಲಪ್ಪುಳ ಜಿಲ್ಲೆಗಳಿಂದ ತಲಾ ಇಬ್ಬರಿಗೆ ಇಡುಕ್ಕಿ,ಪಾಲಕ್ಕಾಡ್, ಕಾಸರಗೋಡು ಜಿಲ್ಲೆಯಿಂದ ತಲಾ ಒಬ್ಬೊಬ್ಬರಿಗೆ ರೋಗ ದೃಡಪಟ್ಟಿರುವುದು. ಈ ಪೈಕಿ 14 ಮಂದಿ ವಿದೇಶದಿಂದ  (ಯು.ಎ.ಇ -8, ಕುವೈತ್ -4, ಕತಾರ್ -1, ಮಲೇಷ್ಯಾ -1) ಮತ್ತು 10 ಮಂದಿ ಇತರ ರಾಜ್ಯಗಳಿಂದ (ಮಹಾರಾಷ್ಟ್ರ -5, ತಮಿಳುನಾಡು -3, ಗುಜರಾತ್ -1 ಮತ್ತು ಆಂಧ್ರಪ್ರದೇಶ -1)ಬಂದವರು.

ಅದೇಸಮಯ, ರೋಗ ದೃಡಪಡಿಸಿ ಚಿಕಿತ್ಸೆಯಲ್ಲದ್ದ 8 ಮಂದಿಯ ತಪಾಸಣಾ ಫಲಿತಾಂಶ ಋಣಾತ್ಮಕವಾಗಿವೆ. ವಯನಾಡ್ ಜಿಲ್ಲೆಯಿಂದ ಐದು ಜನರ(ಮಲಪ್ಪುರಂ ನಿವಾಸಿ 1), ಕೊಟ್ಟಾಯಂನಿಂದ ಒಬ್ಬರು, ಎರ್ನಾಕುಲಂನಿಂದ ಒಬ್ಬರು (ಮಲಪ್ಪುರಂ ನಿವಾಸಿ) ಮತ್ತು ಕೋಳಿಕೋಡ್‌ ಜಿಲ್ಲೆಯಿಂದ ಒಬ್ಬರ ತಪಾಸಣಾ ಫಲಿತಾಂಶ ಋಣಾತ್ಮಕವಾಗಿರುವುದು. ಈವರೆಗೆ 177 ಜನರಿಗೆ ಈ ರೋಗ ಪತ್ತೆಯಾಗಿ ಚಿಕಿತ್ಸೆಯಲ್ಲಿರುವರು.  ಈವರೆಗೆ 510 ಜನರು ಕೋವಿಡ್‌ನಿಂದ ಗುಣಮುಖರಾಗಿದ್ದಾರೆ.

ವಿಮಾನ ನಿಲ್ದಾಣಗಳ ಮೂಲಕ 5495 ಜನರು, ಸೀಪೋರ್ಟ್ ಮೂಲಕ 1621ಜನರು, ಚೆಕ್ ಪೋಸ್ಟ್ ಮೂಲಕ 68,844 ಜನರು ಮತ್ತು ರೈಲ್ವೆ ಮೂಲಕ 2136 ಜನರು ಸೇರಿದಂತೆ ರಾಜ್ಯಕ್ಕೆ ಒಟ್ಟು ಆಗಮನದ ಸಂಖ್ಯೆ 78,096 ಆಗಿದೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 80,138 ಜನರು ನಿರೀಕ್ಷಣೆಯಲ್ಲಿದ್ದಾರೆ. ಈ ಪೈಕಿ 79,611 ಜನರು ಮನೆ /ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ನಲ್ಲಿ ಮತ್ತು 527 ಜನರು ಆಸ್ಪತ್ರೆಗಳಲ್ಲಿ ನಿರೀಕ್ಷಣೆಯಲ್ಲಿರುವರು. 153 ಜನರನ್ನು ಗುರುವಾರ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಲ್ಲಿಯವರೆಗೆ, 49,833 ವ್ಯಕ್ತಿಗಳ (ಓಗ್ಮೆಂಟೆಡ್ ಮಾದರಿ ಸೇರಿದಂತೆ) ಮಾದರಿಯನ್ನು ಪರಿಶೀಲನೆಗಾಗಿ ಕಳುಹಿಸಲಾಗಿದೆ.ಇದರಲ್ಲಿ ಲಭ್ಯವಾದ 48,276 ಮಾದರಿಗಳ ತಪಾಸಣಾ ಫಲಿತಾಂಶಗಳು ಋಣಾತ್ಮಕವಾಗಿವೆ. ಇದಲ್ಲದೆ, ಸೆಂಟಿನೆಲ್ ಕಣ್ಗಾವಲಿನ ಭಾಗವಾಗಿ ಆರೋಗ್ಯ ಕಾರ್ಯಕರ್ತರು, ಅತಿಥಿ ಕೆಲಸಗಾರರು ಮತ್ತು ಸಾಮಾಜಿಕ ಸಂಪರ್ಕ ಹೆಚ್ಚಾಗಿರುವ ವ್ಯಕ್ತಿಗಳ ಆದ್ಯತೆಯ ಗುಂಪುಗಳಿಂದ 6540 ಮಾದರಿಗಳನ್ನು ಸಂಗ್ರಹಿಸಿರುವುದರಲ್ಲಿ  6265 ಮಾದರಿಗಳು ನಕಾರಾತ್ಮಕವಾಗಿವೆ. ಕಳೆದ 24 ಗಂಟೆಗಳಲ್ಲಿ 1798 ಮಾದರಿಗಳನ್ನು ಪರಿಶೀಲಿಸಲಾಯಿತು.

ಹಾಟ್ ಸ್ಪಾಟ್‌ಗೆ 3 ಹೊಸ ಪ್ರದೇಶಗಳನ್ನು ಸೇರಿಸಲಾಗಿದೆ. ಪಾಲಕ್ಕಾಡ್ ಜಿಲ್ಲೆಯ ತ್ರಿಕ್ಕಡಿರಿ, ಕೃಷ್ಣಪುರಂನ ಕಣ್ಣೂರು ಜಿಲ್ಲೆಯ ಧರ್ಮದಂ ಹೊಸ ಹಾಟ್ ಸ್ಪಾಟ್‌ಗಳು. ಅದೇ ಸಮಯದಲ್ಲಿ, 8 ಪ್ರದೇಶಗಳನ್ನು ಹಾಟ್ ಸ್ಪಾಟ್ನಿಂದ ಹೊರಗಿಡಲಾಗಿದೆ. ಪ್ರಸ್ತುತ ಒಟ್ಟು 28 ಹಾಟ್‌ಸ್ಪಾಟ್‌ಗಳಿವೆ.

date